ರಿಪೀಸ್ ನಿಂದ ಹೊಡೆದು ಸ್ನೇಹಿತನ ಕೊಲೆ

ಬೆಂಗಳೂರು

     ಕುಡಿದ ಅಮಲಿನಲ್ಲಿ ಟೆಂಪೋ ಟ್ರಾವೆಲರ್ ಚಾಲಕನನ್ನು ಮರದ ರಿಪೀಸ್‍ನಿಂದ ಹೊಡೆದು ಸ್ನೇಹಿತನೇ ಕೊಲೆ ಮಾಡಿರುವ ದುರ್ಘಟನೆಯು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ತ್ಯಾಗರಾಜನಗರದ ಭೋವಿ ಕಾಲೋನಿಯಲ್ಲಿ ನಡೆದಿದೆ.

     ಭೋವಿ ಕಾಲೋನಿಯ ಶಕ್ತಿವೇಲು (25)ಎಂದು ಕೊಲೆಯಾದ ಟಿಟಿ ಚಾಲಕನನ್ನು ಗುರುತಿಸಲಾಗಿದೆ ಕೊಲೆ ಮಾಡಿ ಪರಾರಿಯಾಗಿದ್ದ ಸ್ನೇಹಿತ ಏಳುಮಲೈ (40) ನನ್ನು ಕಾರ್ಯಾಚರಣೆ ನಡೆಸಿ, ಮಂಡ್ಯದಲ್ಲಿ ಬಂಧಿಸಿ ಕರೆತರಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ

      ಕಳೆದ ಏ. 25 ರಂದು ರಾತ್ರಿ 11ರ ವೇಳೆ ಭೋವಿ ಕಾಲೋನಿಯ ಬಳಿ ಶಕ್ತಿವೇಲು ಹಾಗೂ ಏಳುಮಲೈ ಕಂಠಪೂರ್ತಿ ಕುಡಿದು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ತಳ್ಳಾಟ – ನೂಕಾಟ ಸಂಭವಿಸಿ ಕೆಳಗೆ ಬಿದ್ದ ಶಕ್ತಿವೇಲು ತಲೆಗೆ ಏಳುಮಲೈ ಮರದ ರಿಪೀಸ್‍ನಿಂದ ಬಲವಾಗಿ ಹೊಡೆದಿದ್ದಾನೆ.

      ಗಂಭೀರವಾಗಿ ಗಾಯಗೊಂಡಿದ್ದ ಶಕ್ತಿವೇಲುನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆರಾತ್ರಿ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿಕೊಂಡು ಚನ್ನಮ್ಮನಕೆರೆ ಅಚ್ಚುಕಟ್ಟು ಪೆÇಲೀಸರು, ಆರೋಪಿಯನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link