ಹಾನಗಲ್ಲ :
ಅಧುನಿಕ ಉಪಕರಣಗಳ ಆಕರ್ಷಣೆಯಿಂದಾಗಿ ಮಕ್ಕಳಲ್ಲಿ ಬಯಲಿನಲ್ಲಿ ಆಡುವ ಆಟ, ಪ್ರಕೃತಿಯೊಂದಿಗಿನ ಸಂಬಂಧಳೇ ಮಾಯವಾಗುತ್ತಿದ್ದು, ಇದರ ಪರಿಣಾಮವಾಗಿ ನಾಳೆಯ ಮಕ್ಕಳು ಮೌಲ್ಯಗಳಿಂದಲೇ ದೂರವಾಗುವ ಆತಂಕವಿದೆ ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ತಿಳಿಸಿದರು.
ಶುಕ್ರವಾರ ಹಾನಗಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಬೆಂಗಳೂರಿನ ಬಾಲಭವನ ಸೋಸಾಯಿಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಮಕ್ಕಳ ಬೇಸಿಗೆ ಸಿಬಿರವನ್ನು ಉಧ್ಘಾಟಿಸಿ ಮಾತನಾಡಿದ ಅವರು, ಜನಪದ ಕ್ರೀಡೆಗಳಲ್ಲಿನ ಜೀವಪರ ಕಾಳಜಿ, ಬುದ್ಧವಂತಿಕೆಯನ್ನು ಬೆಳೆಸುವ ಕಲೆ, ಆರೋಗ್ಯದ ಸೂತ್ರಗಳು ದೂರವಾಗುತ್ತಿವೆ.
ನಮ್ಮ ಹಳ್ಳಿಗಳ ಆರೋಗ್ಯ ಈ ಗ್ರಾಮೀಣ ಜನಪದ ಕ್ರೀಡೆಗಳಲ್ಲಿ ಜೀವಂತವಾಗಿತ್ತು. ಇತ್ತೀಚಿನ ಮೊಬೈಲ್ ಹಾಘೂ ಇಂಟರ್ನೆಟ್ಟಿನ ಆಕರ್ಷಣೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಮಕ್ಕಳಲ್ಲಿ ಶಾರೀರಿಕ ಶ್ರಮದ ಬಗ್ಗೆ ಅರಿವೇ ಇಲ್ಲದಂತಾಗಿದೆ. ಜನಪದ, ಜನಪರ ಸಂಸ್ಕತಿ ಬೆಳೆಯುವ ಆತ್ಮವಿಶ್ವಾಸ ಮಕ್ಕಳಿಗೆ ಸಿಗುತ್ತಿಲ್ಲ. ಭರವಸೆಯ ಬೆಳಕು ಮೂಡಿಸುವ ನಮ್ಮ ಸಂಸ್ಕತಿಯಲ್ಲಿನ ಸತ್ಯಗಳು ಮುಚ್ಚಿ ಹೋಗಿವೆ. ಜನಪದ ಸಂಸ್ಕತಿಯ ಪುನರುತ್ಥಾನದಿಂದ ಮಾತ್ರ ಭವಿಷ್ಯದ ಮಕ್ಕಳಿಗೆ ಉತ್ತಮ ಜೀವನ ವಿಧಾನ ತಿಳಯಲು ಸಾಧ್ಯ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಶಿಶು ಆಬಿವೃದ್ಧಿ ಯೋಜನಾಧಿಕಾರಿ ಆರ್.ಎಂ.ಸಾಬೋಜಿ, ಸೃಜನಶೀಲತೆಯನ್ನು ಮಕ್ಕಳಲ್ಲಿ ಬೆಳೆಸುವ ಅಗತ್ಯ ಇಂದಿನದಾಗಿದೆ. ಮಕ್ಕಳಲ್ಲಿ ಪ್ರತಿಭೆ ಗುರುತಿಸಿ ಅದನ್ನು ಬೆಳೆಸಬೇಕು. ಮಕ್ಕಳಿಗೆ ಪುಸ್ತಕ ಸೇರಿದಂತೆ ವಿವಿಧ ಒತ್ತಡಗಳನ್ನು ಹೇರಿ ಅವರ ಮನಸ್ಸನ್ನು ಅರಳಿಸುವ ಬದಲು ಕುಬ್ಜಗೊಳಿಸಲಾಗುತ್ತಿದೆ.
ಮಕ್ಕಳ ಆಸಕ್ತಿ ಅಗತ್ಯವನ್ನು ಅನುಸರಿಸಿ ಶಿಕ್ಷಣ ನೀಡಬೇಕು. ಪಠ್ಯದ ಜೊತೆಗೆ ಸಹಪಠ್ಯವೂ ಮಕ್ಕಳಿಗೆ ಬೇಕು ಎಂದ ಅವರು, ಬೇಸಗೆ ರಜೆ ಮಕ್ಕಳನ್ನು ಮುಕ್ತವಾಗಿ ಬೆಳೆಸಲು ಸಹಕಾರಿಯಾಗಲಿ ಎಂದರು.ಮಹಿಳಾ ಮತ್ತು ಮಕ್ಕಳ ಇಲಾಖೆ ಮೇಲ್ವಿಚಾರಕಿ ಬಿ.ರಾಜಾಶ್ವರಿ, ಸಂಪನ್ಮೂಲ ವ್ಯಕ್ತಿಗಳಾದ ಸಂಗೀತ ಕಲಾವಿದೆ ಎಚ್. ಸುಧಾ, ಶಿಕ್ಷಕ ಸುಭಾಸ ಹೊಸಮನಿ, ಮಹದೇವಿ ಚೌಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೇ 3 ರಿಂದ 12 ದಿನಗಳಾ ಕಾಲ ಮಕ್ಕಳ ಬೇಸಿಗೆ ಸಿಬಿರ ನಡೆಯಲಿದೆ.