ಒಂದೇ ಪಕ್ಷದವರು ಅಧಿಕಾರ ಪಡೆದರೆ ನಗರದ ಅಭಿವೃದ್ಧಿ ಸಾಧ್ಯ : ಎಸ್. ರಾಮಪ್ಪ

ಹರಿಹರ:

   ನಗರಸಭೆ ಅಧ್ಯಕ್ಷರು ಹಾಗೂ ತಾಲೂಕಿನ ಶಾಸಕರು ಒಂದೇ ಪಕ್ಷದವರಾದರೆ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

    ತಾಲೂಕಿನ ಹೊರವಲಯದಲ್ಲಿರುವ ಲಲಿತಾ ಪ್ಯಾಲೇಸ್ ನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಚುನಾವಣ ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅವರು, ನಗರದ ಅಭಿವೃದ್ಧಿಗೆ ಈ ಬಾರಿಯ ನಗರಸಭೆ ಚುನಾವಣೆಗೆ ಉತ್ತಮರ ಆಯ್ಕೆ ಅಗತ್ಯ ಎಂದು ಹೇಳಿದರು.

   ಈ ಬಾರಿಯ ಚುನಾವಣೆಯಲ್ಲಿ ಪ್ರತಿಯೊಂದು ವಾರ್ಡ್ ನಿಂದ ಅನೇಕ ಜನ ಆಕಾಂಕ್ಷಿಗಳು ಅವಕಾಶಕ್ಕಾಗಿ ಸ್ಪರ್ಧೆ ಉಂಟಾಗಿದೆ. ಈ ಕಾರಣ ನೀವೇ ನಿಮ್ಮ ವಾರ್ಡ್ ಗಳಿಂದ ಒಮ್ಮತವಾಗಿ ಒಬ್ಬರನ್ನ ಆಯ್ಕೆ ಮಾಡಿದರೆ ನಮಗೆ ಹಗುರವಾಗುತ್ತದೆ ಎಂದರು.
ವಾರ್ಡ್ ಗಳಲ್ಲಿನ ಸಾರ್ವಜನಿಕರ ಅಭಿಪ್ರಾಯವನ್ನು ಕಲೆಹಾಕಿ ನಮ್ಮ ಕಮಿಟಿ ಒಂದು ತೀರ್ಮಾನ ತೆಗೆದುಕೊಂಡು ಪ್ರತಿ ವಾರ್ಡಿಗೂ ಒಬ್ಬಬ್ಬರನ್ನು ಆಯ್ಕೆ ಮಾಡುತ್ತೇವೆ. ನಮ್ಮ ಪಕ್ಷದಿಂದ ಯಾರೇ ಸ್ಪರ್ಧಿಸದರು ಅವರಿಗೇ ನಿಮ್ಮಲ್ಲರ ಮತವನ್ನು ಹಾಕಿ, ಬಹುಮತದಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

   ನಂತರ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಎಚ್ ಬಸವರಾಜ್ ಮಾತನಾಡಿ, ಹರಿಹರ ನಗರವನ್ನು ಸುಂದರವಾಗಿ ಕಾಣುವಂತೆ ಅಭಿವೃದ್ಧಿ ಪಡಿಸಬೇಕಾದರೆ ಉತ್ತಮ ಸದಸ್ಯರುಗಳು ಬರುವ ಚುನಾವಣೆಯಲ್ಲಿ ಆಯ್ಕೆಯಾಗಿ ಬರಬೇಕು. ರಾಮಪ್ಪ ಅವರ ಕನಸನ್ನು ನನಸು ಮಾಡಲು ನಮ್ಮ ನಗರಕ್ಕೆ ಉತ್ತಮ ನಾಯಕರನ್ನು ಆಯ್ಕೆ ಮಾಡೋಣ ಎಂದು ಕರೆ ನೀಡಿದರು.
ಪಕ್ಷದಿಂದ ಯಾರಿಗೇ ಅವಕಾಶ ಸಿಕ್ಕರೂ ನಾವೆಲ್ಲ ಒಟ್ಟಾಗಿ ಸೇರಿಕೊಂಡು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾದ ಕರ್ತವ್ಯ.

    ಅಭ್ಯರ್ಥಿಗಳಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರವನ್ನು ಮುಖಂಡರುಗಳು ನೀಡಬೇಕು. ಈ ಬಾರಿ ನಮ್ಮ ಪಕ್ಷ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ನಗರಸಭೆಯ ಚುಕ್ಕಾಣೆಯನ್ನು ಹಿಡಿಯೋಣ ಎಂದು ಹೇಳಿದರು.ನಂತರ ವಕೀಲ ಪ್ರಸನ್ನ ಕುಮಾರ್ ಮಾತನಾಡಿ, ನಗರಸಭೆಯಲ್ಲಿ ಈ ಬಾರಿ ಕಾಂಗ್ರೆಸ್ 31 ಸ್ಥಾನಗಳನ್ನು ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ. ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಪಕ್ಷಕ್ಕೆ ದ್ರೋಹ ಬಗೆದು ಪಕ್ಷದಿಂದ ಪಕ್ಷಕ್ಕೆ ಹಾರಬೇಡಿ. ನಗರದಲ್ಲಿ ಚುನಾವಣೆಗೂ ಮುನ್ನ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡು ಜನರ ಮನಸ್ಸನ್ನು ಗೆಲ್ಲಿ ಎಂದು ಸಲಹೆ ನೀಡಿದರು.

     ಕಾರ್ಯಕ್ರಮವನ್ನು ಉದ್ದೇಶಿಸಿ ನಗರಸಭಾ ಮಾಜಿ ಸದಸ್ಯ ರೇವಣಸಿದ್ದಪ್ಪ, ಕೃಷ್ಣಾಸಾ ಭೂತೆ, ಮುಖಂಡರಾದ ರೆಹಮಾನ್ ಸಾಬ್, ಮುನಾಫ್, ಗೀತಾ ಕದರಮಂಎಲಗಿ, ಜಡಿಯಪ್ಪ, ಡಿ.ಜಿ ರಘುನಾಥ್, ನಾಗೇಂದ್ರಪ್ಪ, ಅಬಿದಲಿ, ಡಿ.ಕುಮಾರ್, ಪ್ರಸನ್ನಕುಮಾರ್ ಹಾಗೂ ಮತ್ತಿತರರು ಮಾತನಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link