ಸ್ಕೋಪ್ಜೆ
ಮೆಸಿಡೋನಿಯಾದ ಆಡಳಿತಾರೂಢ ಸೋಷಿಯಲ್ ಡೆಮಾಕ್ರಟ್ಸ್ ಮತ್ತು ಇತರ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಸ್ಟೀವೊ ಪೆಂಡಾರ್‌ವೋಸ್ಕಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಮುಖ್ಯ ಚುನಾವಣಾ ಆಯೋಗದ ಮುಖ್ಯಸ್ಥ ಒಲಿವರ್ ಡೆರ್ಕೋಸ್ಕಿ ಸೋಮವಾರ ತಿಳಿಸಿದ್ದಾರೆ.
ಶೇಕಡಾ 46.64ರಷ್ಟು ಅಥವಾ 8,16,600 ಮತದಾರರು ಹಕ್ಕು ಚಲಾಯಿಸಿದ್ದಾರೆ. ಗೋರ್ಡಾನ ಸಿಲ್ಜನೊವಸ್ಕಾ ಡಾವ್ಕೋವಾ ಅವರಿಗೆ 3,63,900 ಮತಗಳು ಲಭವಿಸಿದೆ. ಇದೇ ವೇಳೆ ಸ್ಟೀವೊ ಪೆಂಡಾರ್‌ವೋಸ್ಕಿ ಅವರಿಗೆ 4,23,000 ಮತಗಳು ಅಥವಾ ಶೇಕಡಾ 51.83ರಷ್ಟು ಮತಗಳು ಲಭಿಸಿವೆ ಎಂದು ಅವರು ತಿಳಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಭಾನುವಾರ ನಡೆಯಿತು. ಅಥೆನ್ಸ್ ಮತ್ತು ಸ್ಕೋಪ್ಜೆ ನಡುವೆ ಒಪ್ಪಂದ ನಡೆದ ಬಳಿಕ ದೇಶದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಯುರೋಪಿಯನ್ ಒಕ್ಕೂಟ ಮತ್ತು ನ್ಯಾಟೋ ಸದಸ್ಯತ್ವಕ್ಕೆ ಮೆಸಿಡೋನಿಯಾಕ್ಕೆ ಮುಕ್ತ ಅವಕಾಶ ದೊರೆತಂತಾಗಿದೆ.
ಮೊದಲ ಹಂತದ ಮತದಾನ ಏಪ್ರಿಲ್ 21ರಂದು ನಡೆಯಿತು. ಪ್ರಮುಖ ವಿರೋಧ ಪಕ್ಷ ಇಂಟರ್ ನ್ಯಾಷನಲ್ ಮೆಸಿಡೋನಿಯನ್ ರೆವಲ್ಯೂಷನರಿ ಆರ್ಗನೈಷೇಶನ್- ಡೆಮಾಕ್ರಟಿಕ್ ಪಾರ್ಟಿ ಫಾರ್ ಮೆಸಿಡೋನಿಯನ್ ನ್ಯಾಷನಲ್ ಯುನಿಟಿ (ವಿಎಂಆರ್‌ಒ-ಡಿಪಿಎಂಎನ್‌ಇ) ಪಕ್ಷದ ಬೆಂಬಲಿತ ಅಭ್ಯರ್ಥಿ ಸಿಲ್ಜನೋವಸ್ಕಾ-ಡವ್ಕೋವಾ ಅವರು ಅಲ್ಪ ಮುನ್ನಡೆ ಸಾಧಿಸಿದ್ದರು. ಇಬ್ಬರು ಕೂಡ ಶೇಕಡಾ 42ರಷ್ಟು ಮತಗಳನ್ನು ಪಡೆದಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








