ಡಮಾಸ್ಕಸ್ :
ವಿಶ್ವದಲ್ಲಿ ಕ್ಷಿಪಣಿ ಪರೀಕ್ಷೆ ಮಾಡುವುದು ಒಂದು ದೇಶದ ಶಕ್ತಿ ಸಾರ್ಮಥ್ಯತದ ಸಂಕೇತವಾಗಿ ಆದರೆ ಕೆಲವು ದೇಶಗಳು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ.
ಪುಟ್ಟ ದೇಶಗಳಾದರು ಯಾವಾಗಲು ಸುದ್ದಿಯಲ್ಲಿರುವ ಇಸ್ರೇಲ್ ಮತ್ತು ಸಿರಿಯಾಗಳು ಪರಸ್ಪರ ಹೊಡೆದಾಡುವುದು ಸಾಮಾನ್ಯ ಆದರೆ ಇಂದು ಬೆಳಗಿನ ಜಾವದಲ್ಲಿ ಇಸ್ರೇಲ್ ತನ್ನ ಮೇಲೆ ದಾಳಿ ಎಂದು ಸಿರಿಯಾ ಆರೋಪಿಸಿದೆ.
ಗೋಲಾನ್ ಹೈಟ್ಸ್ ಸಮೀಪದ ತಾಲ್ ಅಲ್ ಹಾರಾ ಸೆಕ್ಟರ್ ಮೇಲೆ ಹಾರಿ ಬಂದ ಇಸ್ರೇಲ್ ಕ್ಷಿಪಣಿಗಳನ್ನು ಧ್ವಂಸ ಗೊಳಿಸಲಾಯಿತು ಎಂದು ಸಿರಿಯಾ ಸೇನೆ ಹೇಳಿರುವುದನ್ನು ಉಲ್ಲೇಖೀಸಿ ಸನಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್‌ನ ಈ ಕ್ಷಿಪಣಿಯ ಗುರಿ ನಿಖರವಾಗಿ ಯಾವುದಾಗಿತ್ತು ಎಂಬುದನ್ನು ಸಿರಿಯಾ ಹೇಳಿಲ್ಲ ಎಂದು ಸನಾ ವರದಿ ಮಾಡಿದೆ. ಇಸ್ರೇಲ್ “ಇಲೆಕ್ಟ್ರಾನಿಕ್ ವಾರ್’ ನಡೆಸುತ್ತಿದೆ ಮತ್ತು ಆಮೂಲಕ ಸಿರಿಯಾದ ರಾಡಾರ್ ಗಳನ್ನು ಜಾಮ್ ಮಾಡುತ್ತಿದೆ ಎಂದು ಸಿರಿಯಾ ಆರೋಪಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ