ಬೆಂಗಳೂರು
ಕುಡಿದ ಅಮಲಿನಲ್ಲಿ ಪೊಲೀಸರ ಕೆನ್ನೆಗೆ ಬಾರಿಸಿ ದಾಂದಲೆ ನಡೆಸಿದ ಇಬ್ಬರು ವಿದ್ಯಾರ್ಥಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಗೋವಾ ಮೂಲದ ರಾಹುಲ್ ಹಾಗೂ ಆತನ ಸ್ನೇಹಿತ ಆದಿತ್ಯ ಬಂಧಿತ ಆರೋಪಿಗಳಾಗಿದ್ದಾರೆ,ಆರೋಪಿ ರಾಹುಲ್ ತನ್ನ ಸ್ನೇಹಿತ ಆದಿತ್ಯ ಜೊತೆ ಗೋವಾದಿಂದ ಬಂದು ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಮೇ 4ರಂದು ರಾಹುಲ್ ಹಾಗೂ ಆದಿತ್ಯ ಇಬ್ಬರು ಕಂಠಪೂರ್ತಿ ಕುಡಿದು ಸಿಲ್ಕ್ ಬೋರ್ಡ್‍ನಿಂದ ಮಾರತ್ ಹಳ್ಳಿ ಕಡೆಗೆ ರಾಯಲ್ ಎನ್‍ಫೀಲ್ಡ್ ಬೈಕಿನಲ್ಲಿ ತೆರಳುತ್ತಿದ್ದರು.
ಈ ವೇಳೆ ಹೆಚ್‍ಎಸ್‍ಆರ್ ಲೇಔಟ್ ಸಂಚಾರ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದು ವಿದ್ಯಾರ್ಥಿಗಳನ್ನು ನಿಲ್ಲಿಸಿ ತಪಾಸಣೆಗೆ ಮುಂದಾದಾಗ ಏಕಾಏಕಿ ಪೊಲೀಸರ ಮೇಲೆ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾಗಿ ನಡುರಸ್ತೆಯಲ್ಲಿಯೇ ಪೊಲೀಸರ ಸಮವಸ್ತ್ರ ಹರಿದು ಹಾಕಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸ್ ಸಿಬ್ಬಂದಿ ಇಬ್ಬರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ರಾಹುಲ್ ತ್ರಿಪಾಟಿ ಠಾಣೆಯಲ್ಲಿ ಹೋಗಿದ್ದೇ ರಾಜನಂತೆ ಟೇಬಲ್ ಮೇಲೆ ಕುಳಿತಿದ್ದಾನೆ. ವಿದ್ಯಾರ್ಥಿಗಳ ಪುಂಡಾಟ ನೋಡಿ ರಾತ್ರಿ ಪಾಳಿಯ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಆಗಲೆ ಕಮೀಷನರ್‍ಗೆ ಕಾಲ್ ಮಾಡುತ್ತಿದ್ದೀಯಾ ಎಂದೇಳಿ ಅವರಿಂದ ರಾಹುಲ್ ಫೋನ್ ಕಿತ್ತುಕೊಂಡಿದ್ದಾನೆ. ಬಳಿಕ ಫೋನ್ ಬಿಸಾಡಿ ಪೊಲೀಸ್ ಪೇದೆಯ ಕಪಾಳಕ್ಕೆ ಹೊಡೆದಿದ್ದಾನೆ.
ಅಲ್ಲದೇ ಠಾಣೆಯಲ್ಲಿ ಕಂಪ್ಯೂಟರ್ ವೈರ್‍ಗಳನ್ನು ಕಿತ್ತುಹಾಕಿದ್ದಾನೆ. ಈ ವೇಳೆ ತಡೆಯಲು ಬಂದ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ವಿದ್ಯಾರ್ಥಿಗಳ ಪುಂಡಾಟವನ್ನು ಪೊಲೀಸ್ ಸಿಬ್ಬಂದಿಯೇ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಇಬ್ಬರನ್ನು ಬಂಧಿಸಿ ಬೆಳ್ಳಂದೂರು ಪೊಲೀಸರು ಪ್ರಕರಣದ ದಾಖಲಿಸಿ ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
