ಆಯತಪ್ಪಿ ಬಿದ್ದು ಬೈಕ್ ಹಿಂಬದಿ ಸವಾರ ಸಾವು..!!

ಬೆಂಗಳೂರು

     ವೇಗವಾಗಿ ಹೋಗುತ್ತಿದ್ದ ಬೈಕ್ ಆಯತಪ್ಪಿ ಬಿದ್ದು ಹಿಂಬದಿ ಸವಾರ ಮೃತಪಟ್ಟು, ಸವಾರ ಗಾಯಗೊಂಡಿರುವ ದುರ್ಘಟನೆ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

     ಕಾಡುಗೋಡಿಯ ಲಕ್ಷ್ಮಣ್ (21) ಮೃತಪಟ್ಟಿದ್ದು, ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಬ್ರಮಣಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

      ಗಾರೆ ಕೆಲಸ ಮಾಡುತ್ತಿದ್ದ ಲಕ್ಷ್ಮಣ್ ಸಂಜೆ 6.30ರ ವೇಳೆ ಕಾಡುಗೋಡಿ ಬಳಿ ಸುಬ್ರಮಣಿ ಅವರ ಬೈಕ್‍ನಲ್ಲಿ ಹಿಂದೆ ಕುಳಿತು ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಬೈಕ್ ಅನ್ನು ತಪ್ಪಿಸಲು ಹೋದ ಸುಬ್ರಮಣಿ ಆಯತಪ್ಪಿ ಬಿದ್ದಿದ್ದು, ಹಿಂದೆ ಕುಳಿತಿದ್ದ ಲಕ್ಷ್ಮಣ್ ಅವರ ಗುಪ್ತಾಂಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ವೈಟ್ ಫೀಲ್ಡ್ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಜಗದೀಶ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link