ಪಾವಗಡ
ಖಾಲಿ ಇರುವ ಸರ್ಕಾರಿ ಜಾಗ ಮತ್ತು ಮನೆಯ ಸುಮುತ್ತಾ ಗಿಡಗಳನ್ನು ಶಾಲಾ ಕಾಲೇಜುಗಳಲ್ಲಿ ಗಿಡ ನಡೆಬೇಕು, ಅದೇ ರೀತಿ ಸಂರಕ್ಷಣೆ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯದೀಶರಾದ ವಿ.ಹನುಮಂತಪ್ಪ ತಿಳಿಸಿದರು.
ಬುಧುವಾರ ತಾಲ್ಲೂಕು ಕಾನೂನು ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯತ್, ಅರಣ್ಯ ಇಲಾಖೆ, ಸಮಾಜಕಲ್ಯಾಣ ಇಲಾಖೆ, ತೋಟಗಾರಿಕಾ ಇಲಾಖೆ,ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಇಲಾಖೆ ಸಹಯೋಗದಲ್ಲಿ ಪಾವಗಡ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಅರ್ಥ ಕಲ್ಪಿಸಿಕೊಟ್ಟರು.
ಅಧಿಕ ಸಿವಿಲ್ ನ್ಯಾಯಾಧಿಶರಾದ ಭರತ್ ಕರಗುದರಿ ಮಾತನಾಡಿ ಮುಂದಿನ ದಿನಗಳಲ್ಲಿ ಮಕ್ಕಳ ಭಷ್ಯ ಸುಖವಾಗಿರಲಿ ಎಂದು ಇಂದು ಮರಗಳನ್ನು ಬೆಳೆಸಲು ಮುಂದಾಗಬೇಕಾಗಿದ್ದು,ಎ.ಸಿ.ಕೆಲಗೆ ಕೆಲಸ ಮಾಡುವುದು ಬಿಟ್ಟು ನ್ಯಾಚರಲಾಗಿ ಕೆಲಸಮಾಡಲು ನಾವು ಗಿಡಗಳನ್ನು ಬೆಳೆಸಲು ಪ್ರತಿಯೋಬ್ಬರು ಜವಾಬ್ದಾರಿ ಬಹಿಸಲು ಮುಂದಾಗಬೇಕಾಗಿದ್ದು, ಯಾರೇ ಅಗಲಿ ಮರ ಕಡಿದರೆ ಅಂತಹ ಕಡೆ ಮರ ಇಟ್ಟು ,ಮರ ಕಡಿಹಿರಿ ಎಂದು ನೀವು ಕೇಳ ಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾದೀಶರಾದ ಜಗದೀಶ ಬೀಸೆರೊಟ್ಟಿ ಮಾತನಾಡಿ,ಗಿಡ ನಡೆವ ಕಾರ್ಯಕ್ರಮ ಕೇವಲ ಆಚರಣೆ ಮಾಡದೆ ನೆಟ್ಟ ಗಿಡಗಳನ್ನು ಸಂರಕ್ಷಿಸಬೇಕಾಗಿದೆ, ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದ ಅಚರಣೆಯನ್ನು ಸಸಿ ನೆಟ್ಟು ಅಚರಿಸಬೇಕು ತುಮಕೂರು ಜಿಲ್ಲೆಯಲ್ಲಿ 1 ಲಕ್ಷ ಸಸಿ ನಡೆಸುವ ಕಾರ್ಯಕ್ರಮ ಇದ್ದು,ಪಾವಗಡ ತಾಲ್ಲೂಕಿನಲ್ಲಿ ಕನಿಷ್ಟ 20 ಸಾವಿರ ನೆಡಬೇಕಾಗಿದೆ, ವೃಕ್ಷ ಕ್ರಾಂತಿ ಮಾಡಬೇಕಾಗಿದೆ ಎಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿ ಸುರೇಶ್ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಆಚರಣೆ ಮಾಡಿ ಸುಮ್ಮನಾಗದೆ,ಈ ಹಿಂದೆ ನೆಟ್ಟ ಗಿಡಗಳನ್ನು ಪೋಷಿಸಬೇಕಾಗಿದೆ,ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವುದರಿಂದ 1988 ರಲ್ಲಿ ರಾಷ್ಟ್ರೀಯ ಅರಣ್ಯ ನೀತಿಯನ್ನು ಜಾರಿಗೆ ತರಲಾಗಿದೆ, ದೇಶದಲ್ಲಿ ಶೇ 33 ರಷ್ಟು ಅರಣ್ಯ ಇರಬೇಕಾಗಿದೆ, ಅದರೆ ಶೇ 20 ರಷ್ಟು ಅರಣ್ಯ ಇದೆ, ಪಾವಗಡದಲ್ಲಿ ಕೇವಲ 10 ರಷ್ಟು ಅರಣ್ಯ ಇಲ್ಲಾ ಅದ್ದರಿಂದಲೇ ಪಾವಗಡ ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳು ಗ್ರಾಮದೊಳಗೆ ನುಗ್ಗುತ್ತಿರುವುದು, ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷ ಉಂಟಾಗುತ್ತಿದ್ದು, ಇದನ್ನು ತಪ್ಪಿಸಲು ತಾಲ್ಲೂಕಿನಲ್ಲಿ ಹೆಚ್ಚು, ಹೆಚ್ಚು ಅರಣ್ಯ ಬೆಳೆಸಬೇಕು ಎಂದರು.
ತಾ.ಪಂ. ಈ.ಓ. ನರಸಿಂಹಮೂರ್ತಿ ಮಾತನಾಡಿ, ಗ್ರಾಮಪಂಚಾಯಿತಿ ವ್ಯಾಪ್ತಿಗಳಲ್ಲಿ ಸಸಿ ನಡೆವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ನರೇಗಾ ಯೋಜನೆಯಲ್ಲಿ ರೈತರ ಹೊಲಗಳಲ್ಲಿ ಗಿಡನಡೆವ ಕಾರ್ಯಕ್ರಮ ಹಮಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ವಾಸುದೇವ್‍ಮೂರ್ತಿ,ರಾಜಣ್ಣರವರು ಮಾತನಾಡಿದರು, ತಾ.ಪಂ. ಅಧ್ಯಕ್ಷ ಸೊಗಡು ವೆಂಕಟೇಶ್,ಸಮಾಜಕಲ್ಯಾಣ ಇಲಾಖಾಧಿಕಾರಿ ಶಿವಣ್ಣ,ಸರ್ಕಾರಿ ಅಭಿಯೋಜಕ ಮಂಜುನಾಥ್,ಸಿ.ಡಿ.ಪಿ.ಓ ಶಿವಕೂಮರ್,ವಕೀಲರ ಸಂಘದ ಅಧ್ಯಕ್ಷ ಅಕ್ಕಲಪ್ಪ, ಪ್ರಧಾನ ಕಾರ್ಯದರ್ಶಿ ಪಿ. ರಮೇಶ್, ಬಿ.ಇ.ಒ. ಸಿದ್ದಗಂಗಯ್ಯ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳಿಯ ಸಂಸ್ಥೆ ಅಧ್ಯಕ್ಷ ಕಮಲ್‍ಬಾಬು,ನಮ್ಮಹಕ್ಕು ಸಂಘಟನೆಯ ತಾ. ಅಧ್ಯಕ್ಷ ಗಿರೀಶ್, ಮೂರಾರ್ಜಿ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂಶಶಿಕಿರಣ್, ಮುರಾರ್ಜಿ ಶಾಲಾ ನಿಲಯಪಾಲಕರಾದ ಅಶ್ವಥಪ್ಪ,ಶಿಕ್ಷಣಾ ಇಲಾಖೆ ಬಸವರಾಜು, ವಕೀಲ ವೆಂಕಟರಾಮರೆಡ್ಡಿ,ಜಯರಾಂ, ರಾಧಕೃಷ್ಣ,ಅರಣ್ಯ ಇಲಾಖೆಯ ಸಿಬ್ಬಂದಿ ಬಸವರಾಜು, ಗಂಗರಾಜು, ಗಂಗಾಧರ್, ಕೃಷ್ಣಪ್ಪ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
