ಒಂದೇ ದಿನದಲ್ಲಿ 6000 ನೋಂದಣಿ ಗಳಿಸಿದ ಸೆಲ್ಟೋಸ್..!!!

ಹೈದರಾಬಾದ್:

    ವಿಶ್ವದ 8ನೇ ಅತಿ ದೊಡ್ಡ ಆಟೊಮೊಬೈಲ್ಸ್ ಉತ್ಪಾದನಾ ಸಂಸ್ಥೆಯಾದ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಹೊಸದಾಗಿ ಪರಿಚಯಿಸುತ್ತಿರುವ ಸೆಲ್ಟೋಸ್ ವಾಹನವನ್ನು ಮೊದಲ ದಿನವೇ ಬರೋಬ್ಬರಿ 6,046 ಜನರು ಕಾಯ್ದಿರಿಸಿದ್ದಾರೆ .ಸೆಲ್ಟೋಸ್ ಕಾರುಗಳನ್ನು ಆಂಧ್ರಪ್ರದೇಶದ ಅನಂತಪುರದ ಕಿಯಾ ಸಂಸ್ಥೆಯ 536 ಎಕರೆ ಪ್ರದೇಶದಲ್ಲಿ ತಯಾರಿಸಲಾ ಗುತ್ತಿದ್ದು , ವಾರ್ಷಿಕ 3 ಲಕ್ಷ ವಾಹನಗಳನ್ನು ತಯಾರಿಸುವ ಗುರಿ ಹೊಂದಿದೆ.

   ಮಧ್ಯಮ ಗಾತ್ರದ ಈ ಎಸ್ ಯವಿ ವಾಹನ ಭಾರತದಲ್ಲಿ ಆಗಸ್ಟ್ 22ರಂದು ಬಿಡುಗಡೆಯಾಗಲಿದ್ದು, ಸದ್ಯ 25 ಸಾವಿರ ರೂ. ಟೋಕನ್ ಮೊತ್ತ ಪಾವತಿಸಿ ವಾಹನವನ್ನು ಕಾಯ್ದಿರಿಸಬಹುದು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.ಮೊದಲ ದಿನವೇ ದಾಖಲೆಯ ಕಾಯ್ದಿರಿಸುವಿಕೆ ಯೊಂದಿಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸಾಧಸಿರುವ ಕಂಪನಿ, 6 ಸಾವಿರಕ್ಕೂ ಹೆಚ್ಚು ಜನರು ಚಾಲನೆಯ ಅನುಭವ ಪಡೆಯುವ ಮುನ್ನವೇ ಸಂಸ್ಥೆಯ ಮೇಲೆ ವಿಶ್ವಾಸ ತೋರಿರುವುದು ಸಂತಸ ತಂದಿದೆ ಎಂದಿದೆ.

     ಕಿಯಾ ಮೋಟಾರ್ಸ್ ಇಂಡಿಯಾ, ಮಂಗಳವಾರವಷ್ಟೇ ದೇಶದ 160 ನಗರಗಳಲ್ಲಿ ವಾಹನದ ಪೂರ್ವ ನೋಂದಣಿಯನ್ನು ಆರಂಭಿಸಿದ್ದು, ಒಂದೇ ದಿನದಲ್ಲಿ ನಿರೀಕ್ಷೆಗೂ ಮೀರಿ ಸ್ಪಂದನೆ ಗಳಿಸಿದೆ. ಕಂಪನಿಯ ಉಪಾಧ್ಯಕ್ಷ ಹಾಗೂ ಮಾರಾಟ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮನೋಹರ್ ಭಟ್, ಇದೊಂದು ಮಹತ್ವದ ಹೆಜ್ಜೆ. ಇದರಿಂದ ದೇಶದ ಜನರು ಕಂಪನಿಯ ಬ್ರಾಂಡ್ ಅನ್ನು ಒಪ್ಪಿಕೊಂಡಿರುವುದು ಸಾಬೀತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಮಧ್ಯಮ ಗಾತ್ರದ ಎಸ್ ಯುವಿ , ಸೆಲ್ಟೋಸ್ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಗೇರು ಹಾಗೂ ಗೇರು ರಹಿತ ವಾಹನಗಳು ಲಭ್ಯವಿದೆ. ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ವಿಸ್ತರಿಸಲು ಬದ್ಧವಾಗಿದ್ದು, ಗ್ರಾಹಕರಿಗೆ ನಿಗದಿತ ಅವಧಿಗೆ ವಾಹನಗಳನ್ನು ತಲುಪಿಸಲು ಸಿದ್ಧರಾಗಿದ್ದೇವೆ. ಗ್ರಾಹಕರು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿ ಮಾಡುವುದಿಲ್ಲ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link