ಆಯಸಿಡ್ ದಾಳಿ ಪ್ರಕರಣ: ಮಾಸ್ಕ್ ನಿಂದ ಪೊಲೀಸರ ಕಣ್ತಪ್ಪಿಸುತ್ತಿರುವ ಆರೋಪಿ!

ಬೆಂಗಳೂರು:

 ನಗರದಲ್ಲಿ ಯುವತಿ ಮೇಲೆ ಆಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿರುವ ಆರೋಪಿಗೆ ಮಾಸ್ಕ್ ಕಡ್ಡಾಯ ನಿಯಮ ಸಹಾಯ ಮಾಡುತ್ತಿದ್ದು, ಮಾಸ್ಕ್ ನಿಂದಾಗಿ ಆರೋಪಿ ಪೊಲೀಸರ ಕಣ್ತಪ್ಪಿಸುತ್ತಿದ್ದಾರೆಂದು ತಿಳಿದುಬಂದಿದೆ.

ಯುವತಿ ಮೇಲೆ ಆಯಸಿಡ್ ದಾಳಿ ನಡೆದು 12 ದಿನಗಳಾದಲೂ ಪೊಲೀಸರಿಗೆ ಆರೋಪಿ ನಾಗೇಶ್ ಕುರಿತು ಯಾವುದೇ ಸುಳಿವುಗಳೂ ದೊರೆತಿಲ್ಲ.ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಾಸ್ಕ್ ನಿಯಮವನ್ನು ಕಡ್ಡಾಯಗೊಳಿಸಿದೆ. ಈ ನಿಯಮ ಆರೋಪಿಗೆ ಸಹಾಯ ಮಾಡುತ್ತಿದೆ.

ಕುತೂಹಲ ಮೂಡಿಸಿದೆ ಐಪಿಎಲ್ ಪ್ಲೇಆಫ್​ ರೇಸ್; ಹೀಗಿದೆ ಲೆಕ್ಕಾಚಾರ

ಫೋಟೋ ಹೊರತುಪಡಿಸಿದರೆ, ಆರೋಪಿಯನ್ನು ಪೊಲೀಸರು ನೇರವಾಗಿ ಎಲ್ಲಿಯೂ ನೋಡಿಲ್ಲ. ಹೀಗಾಗಿ ಮಾಸ್ಕ್ ಜೊತೆಗೆ ಆರೋಪಿಯನ್ನು ಗುರ್ತಿಸುವುದು ಪೊಲೀಸರಿಗೆ ಕಷ್ಟಕರವಾಗಿದೆ. ಸಾಕಷ್ಟು ಆರೋಪಿಗಳು ಪೊಲೀಸರ ಮುಂದೆ ತಲೆಗೆ ಟೋಪಿ ಹಾಗೂ ಮಾಸ್ಕ್ ಧರಿಸಿ ಓಡಾಡುತ್ತಾರೆ. ಇದರಿಂದ ಅವರನ್ನು ಗುರ್ತಿಸುವುದು ಕಷ್ಟಕರವಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಆಯಸಿಡ್ ದಾಳಿಗೊಳಗಾದ ಯುವತಿಯ ಕುಟುಂಬಸ್ಥರು ಮಾತನಾಡಿ, ಆಶಾ (ಹೆಸರು ಬದಲಿಸಲಾಗಿದೆ) ಈಗಾಗಲೇ ನೋವಿನಲ್ಲಿದ್ದು, ಪೊಲೀಸರು ಇನ್ನೂ ಆರೋಪಿಯನ್ನು ಪತ್ತೆ ಮಾಡಿಲ್ಲ ಎಂದು ಹೇಳಿ ಆಕೆಗೆ ಮತ್ತಷ್ಟು ನೋವು ಕೊಡುವುದು ನಮಗಿಷ್ಟವಿಲ್ಲ. ಆ ಭಯಾನಕ ಸನ್ನಿವೇಶವನ್ನು ಆಕೆ ನೆನೆಸಿಕೊಳ್ಳುವಂತೆ ಮಾಡುವುದು ನಮಗಿಷ್ಟವಿಲ್ಲ. ಸೋಮವಾರ ನಾಲ್ಕನೇ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಮತ್ತೊಂದು ದಾಖಲೆ: 25ನೇ ದಿನಕ್ಕೆ ರಾಜಮೌಳಿಯ RRR ಕಲೆಕ್ಷನ್’ಗೆ ಸೆಡ್ಡು ಹೊಡೆದ ‘KGF 2’

ಪ್ರಕರಣದ ಕುರಿತು ಮಾಹಿತಿ ಪಡೆದುಕೊಳ್ಳಲು ನಾನು ಸೋಮವಾರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದೆ. ಆರೋಪಿ ಪತ್ತೆ ಮಾಡಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ಆಶಾ ಅವರ ಚಿಕ್ಕಪ್ಪ ಸುಂದರೇಶ್ ಅವರು ಹೇಳಿದ್ದಾರೆ.

ಆರೋಪಿ ಮಾಸ್ಕ್ ಧರಿಸುತ್ತಿರುವುದು ಆತನನ್ನು ಪತ್ತೆ ಮಾಡಲು ಕಷ್ಟವಾಗುತ್ತಿದೆ. ಆರೋಪಿ ಪತ್ತೆ ಮಾಡುವಂತೆ ಸರ್ಕಾರ ನಮ್ಮ ಮೇಲೆ ಒತ್ತಡ ಹೇರುತ್ತಿದೆ. ಆರೋಪಿ ಪತ್ತೆ ಮಾಡಲು ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲೆಡೆ ಆರೋಪಿಯ ಪೋಟೋಗಳನ್ನು ಹಾಕಿದ್ದೇನೆ.

 ಪೆಟ್ರೋಲ್ ಬಾಂಬ್ ತಯಾರು, ಪೊಲೀಸರನ್ನ ಯಾಮಾರಿಸಲು ಹೋಗಿ ಸಿಕ್ಕಿಬಿದ್ದ ಗ್ಯಾಂಗ್

ಆರೋಪಿ ತನ್ನ ವೇಷಭೂಷಣಗಳನ್ನು ಬದಲಿಸುವ ಸಾಧ್ಯತೆಗಳಿದ್ದು, ಪತ್ತೆ ಮಾಡುವುದು ಕಷ್ಟಕವಾಗುತ್ತಿದೆ. ಆರೋಪಿ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಕ್ಕಿದ್ದೇ ಆದರೆ, ನಮಗೆ ಮಾಹಿತಿ ನೀಡಬಹುದು. ಆರೋಪಿ ಪತ್ತೆಗಾಗಿ 7 ತಂಡಗಳ ರಚಿಸಲಾಗಿದ್ದು, ಆರೋಪಿ ಪತ್ತೆಗೆ ವಿವಿಧ ಮಾದರಿಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap