ಪೆಟ್ರೋಲ್ ಬಾಂಬ್ ತಯಾರು, ಪೊಲೀಸರನ್ನ ಯಾಮಾರಿಸಲು ಹೋಗಿ ಸಿಕ್ಕಿಬಿದ್ದ ಗ್ಯಾಂಗ್

ಬೆಂಗಳೂರು:

ಬೆಂಗಳೂರು(ಮೇ.10) ಕಿಡಿಗೇಡಿಗಳ ಗ್ಯಾಂಗ್ ಒಂದು ಸಮಾಜದಲ್ಲಿ ವಿದ್ವಂಸಕ‌ ಕೃತ್ಯಗಳನ್ನೆಸಗಲು ಸಜ್ಜಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಆ ಮಾಹಿತಿ ಎಷ್ಟರ ಮಟ್ಟಿಗೆ ಪೊಲೀಸ್ರ (Police) ನಿದ್ದೆಗೆಡಿಸಿತ್ತು ಅಂದ್ರೆ 4 ದಿನ ಊಟ ನೀರು ಬಿಟ್ಟು‌ ಓಡಾಡಿದ್ರು.ಕೊನೆಗೆ ಆರೋಪಿಗಳು ಸಿಕ್ಕಬಳಿಕ ಅವರು ಕಟ್ಟಿದ ಕಥೆಯೇ ಕೇಳಿ ಪೊಲೀಸರೇ ಶಾಕ್ ಆಗಿರೋ ಘಟನೆ ಇದು. ಈ ಸ್ಟೋರಿ ನೋಡಿದರೆ ಸಿನಿಮಾ ಕಥೆಯಂತೆಯೇ ಇದ್ದರೂ ಇದು ಸಿಲಿಕಾನ್ ಸಿಟಿಯಲ್ಲಿ ನಡೆದಿರುವ ರಿಯಲ್ ಸ್ಟೋರಿ. ಸೇಡಿಗಾಗಿ ಪೆಟ್ರೋಲ್ ಬಾಂಬ್​ಗಳನ್ನೇ ತಯಾರಿಸಿದ ಖತರ್ನಾಕ್ ಕ್ರಿಮಿನಲ್ಸ್ ಉದ್ದೇಶ ಏನಿತ್ತು? ಇಲ್ಲಿದೆ ವಿವರ.
ಎದುರಾಳಿ ಮೇಲಿನ ಸೇಡಿಗೆ ಸುಳ್ಳು ಮಾಹಿತಿ..!

ಎದುರಾಳಿಯ ವಿರುದ್ದ ಸೇಡಿ ತೀರಿಸಿಕೊಳ್ಬೇಕಾದ್ರೆ ಒಂದಷ್ಟು ಮಂದಿ ಗ್ಯಾಂಗ್ ಕಟ್ಟಿಕೊಂಡ್ ಅಟ್ಯಾಕ್ ಮಾಡೋದನ್ನ ನೋಡಿದ್ದೇವೆ. ಮನ ಬಂದಂತೆ ಕೊಚ್ಚೋದನ್ನ ಕಂಡಿದ್ದೇವೆ. ಆದ್ರೆ ಇಲ್ಲೊಂದ್ ಗ್ಯಾಂಗ್ ಎದುರಾಳಿಯ ಮೇಲೆ ಸೇಡು ತೀರಿಸಿಕೊಳ್ಳದಕ್ಕೆ ಖತರ್ನಾಕ್ ಪ್ಲಾನ್ ಮಾಡಿದ್ದರು.

ಅದು ಪೊಲೀಸ್ರನ್ನೇ ಬಳಸಿಕೊಂಡ್ ಎದುರಾಳಿಗಳು ಸಾಯೋವರೆಗೂ ಜೈಲಿನಲ್ಲಿ ಕೊಳೆಯುವಂತೆ ಮಾಡ್ಬೇಕು ಅನ್ನೋದು ಅವ್ರ ಆಸೆಯಾಗಿತ್ತು. ಅಂದಹಾಗೆ ಈ ಕೃತ್ಯ ಮಾಡಿದೋರ ಹೆಸರು ಫಯಾಜುಲ್ಲಾ, ಸೈಯದ್ ಅಸ್ಗರ್ ಹಾಗೂ ಮುನಾವರ್ ಪಾಷಾ.

ಪೊಲೀಸರ ದಾಳಿ ವೇಳೆ ಸೀಜ್ ಆಯ್ತು 19 ಪೆಟ್ರೋಲ್ ಬಾಂಬ್ ಗಳು..!

ಬಂಧಿತರಲ್ಲಿ ಈ ಫಯಾಜುಲ್ಲ ಇದಾನಲ್ಲ ಈತನೇ ಇಡೀ ಕೇಸ್ ನ ಮಾಸ್ಟರ್ ಮೈಂಡ್. ಈತನಿಗೂ ರೌಡಿ ಅಜೀವುಲ್ಲಾಖಾನ್ ಗೂ ಆಗ್ತಾ ಇರಲಿಲ್ಲ. ಯಾಕಂದ್ರೆ ಫಯಾಜ್ ಈ ಹಿಂದೆ ಸಾರಾಯಿಪಾಳ್ಯದಲ್ಲಿದ್ದ ಮನೆಯನ್ನ 35 ಲಕ್ಷಕ್ಕೆ ಮಾರಾಟ ಮಾಡಿದ್ದ. ಈ ವೇಳೆ 25 ಲಕ್ಷ ಹಣವನ್ನು‌ ಪಡೆದಿದ್ದ. ಆದ್ರೆ ಕೊನೆಗೆ ಮತ್ತೆ ಹತ್ತು ಲಕ್ಷ ಹೆಚ್ಚುವರಿಯಾಗಿ ಕೊಡುವಂತೆ ಬೇಡಿಕೆ ಇಟ್ಟಿದ್ದ ಆಗ್ಲೆ ಈ ಅಜೀವುಲ್ಲಾಖಾನ್ ಬಂದು ರೌಡಿಸಂ ಮಾಡಿ ಫಯಾಜ್ ನ ಮನೆ ಖಾಲಿ ಮಾಡಿಸಿದ್ದ. ಆಗ್ಲಿಂದ ಇಬ್ಬರ ಮಧ್ಯೆ ಮನಸ್ತಾಪ ಬೆಳೆದಿತ್ತು.

ಇದೇ ಕೋಪದಿಂದ ತನ್ನ ಸ್ನೇಹಿತ ಅಸ್ಗರ್ ಹಾಗೂ ಮುನ್ನವರ್ ನನ್ನ ಬಳಸಿಕೊಂಡ ಫಯಾಜುಲ್ಲಾ ಖಾನ್ ಅಸ್ಗರ್ ಕೈಲಿ ಬಾರೊಂದರಿಂದ ಖಾಲಿ ಬಿಯರ್ ಬಾಟೆಲ್ ಗಳನ್ನ ತರಸಿದ್ದ. ನಂತ್ರ ಪೆಟ್ರೋಲ್‌ ಬಾಂಬ್ ಗಳನ್ನ ತಯಾರಿಸಿದ್ದ. ಬಳಿಕ ಅವುಗಳು ಹಾಗೂ ಒಂದ್ ನಾಡ ಪಿಸ್ತೂಲ್ ನ್ನ ಎದುರಾಳಿ ಮೊಹಮ್ಮದ್ ಅಜೀವುಲ್ಲಾಖಾನ್ ಗೆ ಸಂಬಂಧಿಸಿದ ಸ್ಥಳಗಳಲ್ಲಿಟ್ಟು, ಮೊಹಮ್ಮದ್ ಅಜೀವುಲ್ಲಾ ಅಂಡ್ ಗ್ಯಾಂಗ್ ಸಮಾಜಘಾತುಕರೆಂದು, ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಮುಂದಾಗಿದ್ದಾರೆಂದು ಬಂಧನ ಮಾಡಿಸೋ ಫ್ಲಾನ್ ಇವರದ್ದಾಗಿತ್ತು.
ಪೆಟ್ರೋಲ್ ಬಾಂಬ್ ನ ವಾಸ್ತವಿಕ ವರದಿಯನ್ನು ನೀಡಿದ್ದೇ ನ್ಯೂಸ್ 18 ಕನ್ನಡ..!

ಇನ್ನು ಆರೋಪಿಗಳು ಹಿಂದೂ ಮುಖಂಡರ ಹತ್ಯೆಗೆ ಸ್ಕೆಚ್ ಹಾಕಿದ್ರು, ದೇವಸ್ಥಾನಗಳ ಮೇಲೆ ಪೆಟ್ರೋಲ್ ಬಾಂಬ್ ಹಾಕಲು ಸ್ಕೆಚ್ ಹಾಕಿದ್ರು ಅಂತ ಕೆಲ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿತ್ತು. ಆದ್ರೆ ನ್ಯೂಸ್‌ ೧೮ ಕನ್ನಡ ಮಾತ್ರ ವಾಸ್ತವ ತೋರಿಸಿತ್ತು. ನ್ಯೂಸ್ 18 ಗೆ ಪ್ರತಿಕ್ರಿಯೆ ನೀಡೋವಾಗ ಸುಳ್ಳು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳಿಗೆ ಡಿಸಿಪಿ ವಾರ್ನ್ ಸಹ ಮಾಡಿದ್ರು.

ಒಟ್ನಲ್ಲಿ ಪೆಟ್ರೋಲ್ ಬಾಂಬ್ ಹಾಕೋ ಉದ್ದೇಶ ಇತ್ತೋ ಇಲ್ಬೋ ಗೊತ್ತಿಲ್ಲ, ಆದ್ರೆ ಮಾಹಿತಿ ಗೊತ್ತಾಗಿದ್ದೇ ಕಾರ್ಯಪ್ರವೃತ್ತರಾಗಿ ಹೆಣ್ಣೂರು ಪೊಲೀಸರು ಮಾಡಿದ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತ ಮಾಡಿದ್ದಾರೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap