ಕುತೂಹಲ ಮೂಡಿಸಿದೆ ಐಪಿಎಲ್ ಪ್ಲೇಆಫ್​ ರೇಸ್; ಹೀಗಿದೆ ಲೆಕ್ಕಾಚಾರ

IPL2022 :

 ಎರಡು ಹೊಸ ತಂಡಗಳ ಸೇರ್ಪಡೆಯಿಂದ 10 ತಂಡಗಳ ಹಣಾಹಣಿಯಾಗಿ ಮಾರ್ಪಟ್ಟಿರುವ ಐಪಿಎಲ್ 15ನೇ ಆವೃತ್ತಿ ಹಲವು ಬದಲಾವಣೆಗಳನ್ನು ಕಂಡಿದೆ. ಟೂರ್ನಿಯ ಅಗ್ರ 4 ತಂಡಗಳು ಆಡುವ ಪ್ಲೇಆಫ್​ ಲೆಕ್ಕಾಚಾರವೂ ಇದರಲ್ಲಿ ಪ್ರಮುಖವಾದುದು. ಹೀಗಾಗಿ ಟೂರ್ನಿಯಲ್ಲಿ ಇದುವರೆಗೆ 56 ಲೀಗ್ ಪಂದ್ಯಗಳು ಮುಗಿದಿದ್ದರೂ ಇನ್ನೂ ಯಾವ ತಂಡಕ್ಕೂ ಪ್ಲೇಆಫ್​ ಸ್ಥಾನ ಖಚಿತಗೊಂಡಿಲ್ಲ.

5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಾತ್ರ ಇದುವರೆಗೆ ಅಧಿಕೃತವಾಗಿ ಪ್ಲೇಆಫ್​ ರೇಸ್‌ನಿಂದ ಹೊರಬಿದ್ದಿದೆ. ಇನ್ನು 14 ಲೀಗ್ ಪಂದ್ಯಗಳು ಬಾಕಿ ಉಳಿದಿದ್ದು, ಸದ್ಯ 4 ಪ್ಲೇಆಫ್​ ಸ್ಥಾನಕ್ಕೆ ಉಳಿದ 9 ತಂಡಗಳೂ ರೇಸ್‌ನಲ್ಲಿವೆ. ಈ ತಂಡಗಳ ಪ್ಲೇಆಫ್​ ಲೆಕ್ಕಾಚಾರ ಇಲ್ಲಿದೆ.

ಮತ್ತೊಂದು ದಾಖಲೆ: 25ನೇ ದಿನಕ್ಕೆ ರಾಜಮೌಳಿಯ RRR ಕಲೆಕ್ಷನ್’ಗೆ ಸೆಡ್ಡು ಹೊಡೆದ ‘KGF 2’

ಬದಲಾದ ಪ್ಲೇಆಫ್​ ಲೆಕ್ಕಾಚಾರ

8 ತಂಡಗಳ ಐಪಿಎಲ್‌ನಲ್ಲಿ 8 ಪಂದ್ಯ ಗೆದ್ದರೆ ಪ್ಲೇಆಫ್​ ಸ್ಥಾನ ಖಚಿತವೆನಿಸುತ್ತಿತ್ತು ಮತ್ತು 7 ಪಂದ್ಯ ಗೆದ್ದ ತಂಡಗಳಿಗೂ ಪ್ಲೇಆಗೇರುವ ಅವಕಾಶವಿರುತಿತ್ತು. ಆದರೆ 10 ತಂಡಗಳ ಹಣಾಹಣಿಯಲ್ಲಿ ಎಲ್ಲ ತಂಡಗಳಿಗೆ ತಲಾ 14 ಲೀಗ್ ಪಂದ್ಯಗಳೇ ಇದ್ದರೂ, ಪ್ಲೇಆಫ್​ ಖಚಿತವೆನಿಸಲು 9 ಗೆಲುವು ಅಗತ್ಯವಾಗಿದೆ. 8 ಪಂದ್ಯ ಗೆದ್ದವರಿಗೂ ಪ್ಲೇಆಫ್​ ಅವಕಾಶವಿದ್ದರೂ ರನ್‌ರೇಟ್ ಲೆಕ್ಕಾಚಾರ ನಿರ್ಣಾಯಕವಾಗಲಿದೆ. ಇನ್ನೊಂದು ಲೆಕ್ಕಾಚಾರದ ಪ್ರಕಾರ 7 ಪಂದ್ಯ ಗೆದ್ದ ತಂಡಗಳಿಗೂ ‘ಔಟ್‌ಸೈಟ್ ಚಾನ್ಸ್’ ಇದ್ದರೂ ಅದು ತೀರಾ ವಿರಳ ಸಾಧ್ಯತೆ. 2011ರಲ್ಲಿ 10 ತಂಡಗಳು ಆಡಿದಾಗ 7 ಪಂದ್ಯ ಗೆದ್ದ ತಂಡ ಹೊರಬಿದ್ದಿತ್ತು.

ಲಖನೌ ಸೂಪರ್‌ಜೈಂಟ್ಸ್

ಅಗ್ರಸ್ಥಾನಿ ಲಖನೌ ಪ್ಲೇಆಫ್​ ಅರ್ಹತೆಯಿಂದ ಕೇವಲ 1 ಹೆಜ್ಜೆ ಹಿಂದಿದೆ. ಇನ್ನುಳಿದ 3 ಪಂದ್ಯಗಳಲ್ಲಿ 1ರಲ್ಲಿ ಗೆದ್ದರೂ ಪ್ಲೇಆಫ್​ ಖಚಿತಗೊಳ್ಳಲಿದೆ. ಉತ್ತಮ ರನ್‌ರೇಟ್‌ನಿಂದಾಗಿ ಇನ್ನೊಂದು ಗೆಲ್ಲದೆ ಇದ್ದರೂ ಹೊರಬೀಳಲಿದೆ ಎನ್ನುವುದು ಕಷ್ಟಕರ.
ಮುಂದಿನ ಎದುರಾಳಿಗಳು: ಗುಜರಾತ್ (ಮೇ 10), ರಾಜಸ್ಥಾನ (ಮೇ 15), ಕೆಕೆಆರ್ (ಮೇ 18).
ಪ್ಲೇಆಫ್​ ಸಾಧ್ಯತೆ: 99.9%

 ಪೆಟ್ರೋಲ್ ಬಾಂಬ್ ತಯಾರು, ಪೊಲೀಸರನ್ನ ಯಾಮಾರಿಸಲು ಹೋಗಿ ಸಿಕ್ಕಿಬಿದ್ದ ಗ್ಯಾಂಗ್

 

ಗುಜರಾತ್ ಟೈಟಾನ್ಸ್

ಪ್ಲೇಆಫ್​ ಖಚಿತತೆಗೆ ಇನ್ನೊಂದು ಗೆಲುವು ಅಗತ್ಯ. ಕಳೆದೆರಡು ಪಂದ್ಯಗಳಲ್ಲಿ ಟೈಟಾನ್ಸ್ ಈ ಅವಕಾಶ ಕೈಚೆಲ್ಲಿತ್ತು. ಹೀಗಾಗಿ ಮುಂದಿನ 3 ಪಂದ್ಯಗಳಲ್ಲಾದರೂ 1 ಗೆಲುವಿನ ಅಗತ್ಯವಿದೆ. ಆದರೆ ಉಳಿದ 3ರಲ್ಲೂ ಗೆಲ್ಲದೆ, ರನ್‌ರೇಟ್ ಕೂಡ ಭಾರಿ ಕುಸಿತ ಕಂಡರೆ ಗುಜರಾತ್ ಟೂರ್ನಿಯಿಂದ ಹೊರಬೀಳುವ ಅಪಾಯ ಈಗಲೂ ಇದೆ.
ಮುಂದಿನ ಎದುರಾಳಿಗಳು: ಲಖನೌ (ಮೇ 10), ಸಿಎಸ್‌ಕೆ (ಮೇ 15), ಆರ್‌ಸಿಬಿ (ಮೇ 19).
ಪ್ಲೇಆಫ್​ ಸಾಧ್ಯತೆ: 99.9%

ರಾಜಸ್ಥಾನ ರಾಯಲ್ಸ್

ಉಳಿದ 3 ಪಂಧ್ಯಗಳಲ್ಲಿ 1ರಲ್ಲಿ ಗೆದ್ದರೂ ರಾಜಸ್ಥಾನ ಸುರಕ್ಷಿತ ವಲಯ ತಲುಪಲಿದೆ. ಉತ್ತಮ ರನ್‌ರೇಟ್ ಕೂಡ ಇರುವುದರಿಂದ ರಾಯಲ್ಸ್‌ಗೆ ಪ್ಲೇಆಫ್​ಗೇರಲು 1 ಗೆಲುವು ಸಾಕಾಗಬಹುದು. ಆದರೆ ಅಗ್ರ 2ರೊಳಗೆ ಸ್ಥಾನ ಪಡೆಯಬೇಕಾದರೆ ಉಳಿದ 2 ಅಥವಾ ಮೂರರಲ್ಲೂ ಗೆಲ್ಲಬೇಕು.
ಮುಂದಿನ ಎದುರಾಳಿಗಳು: ಡೆಲ್ಲಿ (ಮೇ 11), ಲಖನೌ (ಮೇ 15), ಸಿಎಸ್‌ಕೆ (ಮೇ 20).
ಪ್ಲೇಆಫ್​ ಸಾಧ್ಯತೆ: 93.8%

ಆರ್‌ಸಿಬಿ
ಸನ್‌ರೈಸರ್ಸ್‌ ವಿರುದ್ಧದ ಬೃಹತ್ ಗೆಲುವಿನಿಂದ ರನ್‌ರೇಟ್ ಸುಧಾರಣೆ ಕಂಡಿರುವುದು ಸಮಾಧಾನಕರ ಅಂಶ. ಆದರೂ, ಯಾವುದೇ ಇತರ ಪಂದ್ಯಗಳ ಲೆಕ್ಕಾಚಾರದ ಅಗತ್ಯವಿಲ್ಲದೆ ಪ್ಲೇಆಫ್​ಗೆ ಏರಬೇಕಾದರೆ ಆರ್‌ಸಿಬಿ ತನ್ನ ಉಳಿದೆರಡು ಪಂದ್ಯಗಳಲ್ಲೂ ಗೆಲ್ಲಬೇಕು. ಆರ್‌ಸಿಬಿ ಇನ್ನೊಂದು ಪಂದ್ಯ ಮಾತ್ರ ಗೆದ್ದರೂ ಪ್ಲೇಆಗೇರಲು ಅವಕಾಶವಿದೆ. ಆದರೆ ಆಗ ಡೆಲ್ಲಿ, ಸನ್‌ರೈಸರ್ಸ್‌ ಮತ್ತು ಪಂಜಾಬ್ ತಂಡಗಳು ಇನ್ನೊಂದು ಪಂದ್ಯದಲ್ಲಿ ಸೋಲಬೇಕು ಅಥವಾ ರನ್‌ರೇಟ್‌ನಲ್ಲಿ ಆರ್‌ಸಿಬಿಗಿಂತ ಹಿಂದುಳಿಯಬೇಕು.
ಮುಂದಿನ ಎದುರಾಳಿಗಳು: ಪಂಜಾಬ್ (ಮೇ 13), ಗುಜರಾತ್ (ಮೇ 19).
ಪ್ಲೇಆಫ್​ ಸಾಧ್ಯತೆ: 63%

ಡೆಲ್ಲಿ ಕ್ಯಾಪಿಟಲ್ಸ್
ಪ್ಲೇಆಫ್​ಗೇರಲು ಉಳಿದ 3ರಲ್ಲೂ ಗೆಲ್ಲುವುದು ಅನಿವಾರ‌್ಯ. ಜತೆಗೆ ಇತರ ಪಂದ್ಯಗಳ ಲಿತಾಂಶಗಳೂ ಪೂರಕವಾಗಿ ಬರಬೇಕು. ಅಂದರೆ ರಾಜಸ್ಥಾನ ಇನ್ನೆರಡು ಸೋಲು ಕಾಣಬೇಕು ಅಥವಾ ಆರ್‌ಸಿಬಿ ಇನ್ನೊಂದು ಪಂದ್ಯ ಸೋಲಬೇಕು. ಆಗ ರನ್‌ರೇಟ್ ಲೆಕ್ಕಾಚಾರದಲ್ಲಿ ಮುಂದಿದ್ದರೆ ಡೆಲ್ಲಿ ಪ್ಲೇಆಫ್​ಗೆ ಏರಬಹುದು. ಇನ್ನೊಂದು ಸೋತರೂ ಪಂತ್ ಪಡೆಗೆ ಬಾಗಿಲು ಮುಚ್ಚಲಿದೆ.
ಮುಂದಿನ ಎದುರಾಳಿಗಳು: ರಾಜಸ್ಥಾನ (ಮೇ 11), ಪಂಜಾಬ್ (ಮೇ 16), ಮುಂಬೈ (ಮೇ 21).
ಪ್ಲೇಆಫ್​ ಸಾಧ್ಯತೆ: 41.4%

ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 4 ದಿನ ಭಾರೀ ಮಳೆ

ಸನ್‌ರೈಸರ್ಸ್‌ ಹೈದರಾಬಾದ್
ಸತತ 5 ಜಯದೊಂದಿಗೆ ಪ್ಲೇಆಫ್​ನತ್ತ ಮುನ್ನುಗ್ಗುತ್ತಿದ್ದ ಸನ್‌ರೈಸರ್ಸ್‌ ಈಗ ಸತತ 4 ಸೋಲಿನಿಂದ ಪ್ಲೇಆಗೇರಲು ಪರದಾಡಬೇಕಾಗಿದೆ. ಉಳಿದ 3ರಲ್ಲೂ ಗೆದ್ದರೆ ಸನ್‌ರೈಸರ್ಸ್‌ಗೆ ಪ್ಲೇಆಫ್​ಗೇರುವ ಅವಕಾಶ ಈಗಲೂ ಇದೆ. ಆದರೆ ಇತರ ಪಂದ್ಯಗಳ ಫಲಿತಾಂಶ ಮತ್ತು ರನ್‌ರೇಟ್ ಕೂಡ ನಿರ್ಣಾಯಕ ಪಾತ್ರ ವಹಿಸಲಿದೆ.
ಮುಂದಿನ ಎದುರಾಳಿಗಳು: ಕೆಕೆಆರ್ (ಮೇ 14), ಮುಂಬೈ (ಮೇ 17), ಪಂಜಾಬ್ (ಮೇ 22).
ಪ್ಲೇಆಫ್​ ಸಾಧ್ಯತೆ: 42.5%

ಪಂಜಾಬ್ ಕಿಂಗ್ಸ್
ಮಯಾಂಕ್ ಅಗರ್ವಾಲ್ ಬಳಗ ಪ್ಲೇಆಫ್​ಗೇರಲು ಉಳಿದ 3ರಲ್ಲಿ ಗೆಲ್ಲಲೇಬೇಕು. ಜತೆಗೆ ಇತರ ಪಂದ್ಯಗಳ ಫಲಿತಾಂಶವೂ ವರದಾನವಾಗಬೇಕು. ಪ್ಲೇಆಫ್​ ರೇಸ್‌ನಲ್ಲಿ ತನಗೆ ನಿಕಟ ಪೈಪೋಟಿ ಒಡ್ಡುತ್ತಿರುವ ತಂಡಗಳೇ ಕೊನೇ 3 ಪಂದ್ಯಗಳಲ್ಲಿ ಎದುರಾಳಿ ಆಗಿರುವುದರಿಂದ 1ರಲ್ಲಿ ಸೋತರೂ ಆಸೆ ಕೈಚೆಲ್ಲಬೇಕಾಗುತ್ತದೆ.
ಮುಂದಿನ ಎದುರಾಳಿಗಳು: ಆರ್‌ಸಿಬಿ (ಮೇ 13), ಡೆಲ್ಲಿ (ಮೇ 16), ಸನ್‌ರೈಸರ್ಸ್‌ (ಮೇ 22).
ಪ್ಲೇಆಫ್​ ಸಾಧ್ಯತೆ: 24.6%

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ಶೀಘ್ರ ತುಟ್ಟಿಭತ್ಯೆ ಹೆಚ್ಚಳ, ಸಂಬಳ ₹27,312ಕ್ಕೆ ಏರಿಕೆ

ಚೆನ್ನೈ ಸೂಪರ್‌ಕಿಂಗ್ಸ್

ಧೋನಿ ಮತ್ತೆ ಸಾರಥ್ಯ ವಹಿಸಿಕೊಂಡ ಬಳಿಕ ಸಿಎಸ್‌ಕೆ ಅಭಿಮಾನಿಗಳು ಪವಾಡದ ನಿರೀಕ್ಷೆಯಲ್ಲಿದ್ದಾರೆ. ಯಾಕೆಂದರೆ ಒಂದು ಲೆಕ್ಕಾಚಾರದ ಪ್ರಕಾರ ಈಗಲೂ ಸಿಎಸ್‌ಕೆಗೆ ಪ್ಲೇಆಫ್​ ಅವಕಾಶವಿದೆ. ಅಂದರೆ ಗರಿಷ್ಠ 7 ಗೆಲುವು ಕಾಣಲು ಅವಕಾಶವಿರುವ ನಡುವೆಯೂ ಸಿಎಸ್‌ಕೆಗೆ ಪ್ಲೇಆಫ್​ ಅವಕಾಶವಿದೆ. ಆರ್‌ಸಿಬಿ ಇನ್ನೆರಡೂ ಪಂದ್ಯ ಸೋತು, ಪಂಜಾಬ್ ತಂಡ ಆರ್‌ಸಿಬಿ ವಿರುದ್ಧ ಗೆದ್ದು ಉಳಿದ 2ರಲ್ಲಿ ಸೋತರೆ, ಡೆಲ್ಲಿ, ಸನ್‌ರೈಸರ್ಸ್‌ ತಂಡಗಳು ಪಂಜಾಬ್ ವಿರುದ್ಧ ಗೆದ್ದು ಉಳಿದ 2 ಪಂದ್ಯಗಳಲ್ಲಿ ಸೋತರೆ ಆಗ ಈ 5 ತಂಡಗಳು ತಲಾ 7 ಗೆಲುವು ಕಾಣಲಿದ್ದು, ರನ್‌ರೇಟ್‌ನಲ್ಲಿ ಮುಂದಿದ್ದರೆ ಸಿಎಸ್‌ಕೆ 4ನೇ ಸ್ಥಾನಿಯಾಗಿ ಪ್ಲೇಆಫ್​ಗೇರಬಹುದಾಗಿದೆ ಎಂಬುದು ಲೆಕ್ಕಾಚಾರವಾಗಿದೆ.
ಮುಂದಿನ ಎದುರಾಳಿಗಳು: ಮುಂಬೈ (ಮೇ 12), ಗುಜರಾತ್ (ಮೇ 15), ರಾಜಸ್ಥಾನ (ಮೇ 20).
ಪ್ಲೇಆಫ್​ ಸಾಧ್ಯತೆ: 2%

ಕೋಲ್ಕತ ನೈಟ್‌ರೈಡರ್ಸ್‌

ಲೆಕ್ಕಾಚಾರದ ಪ್ರಕಾರ ಕೆಕೆಆರ್‌ಗೆ ಇನ್ನೂ ಪ್ಲೇಆಫ್​ ಅವಕಾಶವಿದೆ. ಮುಂಬೈ ವಿರುದ್ಧ ಬೃಹತ್ ಗೆಲುವಿನಿಂದ ರನ್‌ರೇಟ್ ಸುಧಾರಿಸಿದೆ. ಆದರೆ, ಇನ್ನೆರಡು ಪಂದ್ಯ ಗೆದ್ದರೂ ಇತರ ಫಲಿತಾಂಶ ಪೂರಕವಾಗಿ ಬರುವುದು ಕಷ್ಟಕರ.
ಮುಂದಿನ ಎದುರಾಳಿಗಳು: ಸನ್‌ರೈಸರ್ಸ್‌ (ಮೇ 14), ಲಖನೌ (ಮೇ 18).
ಪ್ಲೇಆಫ್​ ಸಾಧ್ಯತೆ: 3.3%

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap