ಮುಂಬೈ:
ಕ್ಷಿಪ್ರ ರಾಜಕೀಯ ಬೆಳವಣಿಗೆ ಬಳಿಕ ದೇಶದ ಗಮನ ಮಹಾರಾಷ್ಟ್ರ ಮೇಲೆಯೇ ನೆಟ್ಟಿದೆ. ತನ್ನ ಚಿಕ್ಕಪ್ಪನ ವಿರುದ್ಧವೇ ತಿರುಗಿಬಿದ್ದ ಅಜಿತ್ ಪವಾರ್ ಎನ್‌ಸಿಪಿ ಬಿಟ್ಟಿದ್ದಾರೆ. ಬಿಜೆಪಿ ಮತ್ತು ಶಿವಸೇನೆ ಸರ್ಕಾರಕ್ಕೆ ಬೆಂಬಲ ಕೊಟ್ಟು ಅಜಿತ್ ಪವಾರ್ ಡಿಸಿಎಂ ಆಗಿದ್ದಾರೆ. ಈ ನಡುವೆ ತಮ್ಮ ಚಿಕ್ಕಪ್ಪನ ವಿರುದ್ಧ ಅಜಿತ್ ಪವಾರ್ ಹರಿಹಾಯ್ದಿದ್ದಾರೆ.
ಶರದ್ ಪವಾರ್ ತಮ್ಮ ಪುತ್ರಿ ಸುಪ್ರಿಯಾ ಸುಳೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಸಲುವಾಗಿ ಹಲವು ಬಾರಿ ನನಗೆ ಉನ್ನತ ಹುದ್ದೆ ನಿರಾಕರಿಸುವ ಮೂಲಕ ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ. ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ನನಗೆ ಮುಖ್ಯಮಂತ್ರಿ ಸ್ಥಾನ ಸಿಗಬಹುದಿತ್ತು, ಆದರೆ ನನ್ನ ಚಿಕ್ಕಪ್ಪ ಅದನ್ನು ನಿರಾಕರಿಸಿದರು, ನನಗೆ ಡಿಸಿಎಂ ಹುದ್ದೆಯಿಂದ ಬೇಸರವಾಗಿದೆ. ಅಪ್ಪಾ ನೀವು ಎಷ್ಟು ಬಾರಿ ಡಿಸಿಎಂ ಆಗುತ್ತೀರಿ? ಎಂದು ನನ್ನ ಮಗ ಪ್ರಶ್ನಿಸುತ್ತಾರೆ ಎಂದು ಅಜಿತ್ ಹೇಳಿದರು.
83 ವರ್ಷದ ಶರದ್ ಪವಾರ್ ಅವರು ಸಕ್ರಿಯ ರಾಜಕಾರಣದಿಂದ ಸುಲಲಿತವಾಗಿ ನಿವೃತ್ತಿ ಹೊಂದಬೇಕು ಮತ್ತು ಅವರ ಸೋದರ ಸಂಬಂಧಿಗೆ ಅಧಿಕಾರ ಹಸ್ತಾಂತರಿಸಬೇಕು ಎಂದು ಅವರು ಹೇಳಿದರು. ಬಾಂದ್ರಾದಲ್ಲಿ ಅಜಿತ್ ಪವಾರ್ ಕರೆದಿದ್ದ ಸಭೆಯಲ್ಲಿ 53 ಎನ್‌ಸಿಪಿ ಶಾಸಕರ ಪೈಕಿ 31 ಶಾಸಕರು ಭಾಗವಹಿಸಿದ್ದರು.
ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ ದಿನದಿಂದಲೂ ಬಿಜೆಪಿ ತನ್ನ ಕುಟುಂಬ ಮತ್ತು ಪಕ್ಷವನ್ನು ಒಡೆಯುತ್ತದೆ ಎಂದು ಅನುಮಾನ ಪಟ್ಟಿದ್ದೆ, ಹೀಗಾಗಿ ನಾನು ಮತ್ತೆ ಜನರ ಬಳಿಗೆ ಹೋಗುತ್ತೇನೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಅವರು ಬಿಜೆಪಿಯೊಂದಿಗೆ ಏಕೆ ಮೈತ್ರಿ ಮಾಡಿಕೊಳ್ಳಲಿಲ್ಲ ಮತ್ತು ಶಿವಸೇನೆಯೊಂದಿಗೆ ಸರ್ಕಾರವನ್ನು ರಚಿಸಲಿಲ್ಲ, ಶಿವಸೇನೆಯ ಹಿಂದುತ್ವವು ಎಲ್ಲಾ ಜಾತಿಗಳು ಮತ್ತು ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಳ್ಳುತ್ತದೆ ಎಂದು ಪವಾರ್ ಹೇಳಿದರು. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವ ಬಿಜೆಪಿಯ ‘ಮಯೋಪಿಕ್ ಹಿಂದುತ್ವ’ದಂತಲ್ಲ ಎಂದು ಅವರು ಶರದ್ ಪವಾರ್ ಕೌಂಟರ್ ಕೊಟ್ಟಿದ್ದಾರೆ.
ನಾವು ಶಿವಸೇನೆಯೊಂದಿಗೆ ಅಧಿಕಾರವನ್ನು ಹಂಚಿಕೊಳ್ಳಬಹುದಾದರೆ, ಬಿಜೆಪಿಯೊಂದಿಗೆ ಏಕೆ ಅಧಿಕಾರ ಹಂಚಿಕೆ ಮಾಡಿಕೊಳ್ಳಬಾರದು ಎಂದು ಅಜಿತ್ ಪ್ರಶ್ನಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ