ಒಂಟಿನ ಸಾಕಾಗಿದೆ ,ನನಗೂ ಪಾರ್ಟ್ನರ್‌ ಬೇಕು : ಅಮೀರ್‌ ಖಾನ್

ಮುಂಬೈ :

   ಆಮಿರ್ ಖಾನ್ ಅವರು ಆಗಿದ್ದ ಎರಡೂ ಮದುವೆ ವಿಚ್ಛೇದನದಲ್ಲಿ ಕೊನೆಯಾಗಿದೆ. ಮೊದಲು ಅವರು ರೀನಾ ದತ್ತ ಅವರನ್ನು ವಿವಾಹ ಆಗಿದ್ದರು. ಇವರ ಜೊತೆಗಿನ ವಿಚ್ಛೇದನದ ಬಳಿಕ ಕಿರಣ್ ರಾವ್ ಜೊತೆ ವಿವಾಹ ಆದರು. ಅದೂ ಕೂಡ ಕೊನೆ ಆಗಿದೆ. ಈಗ ಅವರು ಮೂರನೇ ಮದುವೆ ಬಗ್ಗೆ ಆಲೋಚನೆ ಮಾಡುತ್ತಿದ್ದಾರಾ? ಹೀಗೊಂದು ಪ್ರಶ್ನೆ ಎದುರಾಗಿದೆ. ಇದಕ್ಕೆ ಸ್ವತಃ ಆಮಿರ್ ಖಾನ್ ಅವರು ಉತ್ತರಿಸಿದ್ದಾರೆ. ‘ನನಗೆ ಪಾರ್ಟ್ನರ್ ಬೇಕು’ ಎಂದಿರುವ ಅವರು ಮೂರನೇ ಮದುವೆ ಅಸಾಧ್ಯ ಎಂದು ಹೇಳಿದ್ದಾರೆ.

   ರಿಯಾ ಚಕ್ರವರ್ತಿ ಜೊತೆಗಿನ ಸಂದರ್ಶನದಲ್ಲಿ ಆಮಿರ್ ಖಾನ್ ಅವರು ಮಾತನಾಡಿದ್ದಾರೆ. ಮದುವೆ ಆಗಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ರಿಯಾ ಅವರು ಪ್ರಶ್ನೆ ಮಾಡಿದ್ದಾರೆ. ‘ನಾನು ಎರಡು ಬಾರಿ ಸಂಸಾರದಲ್ಲಿ ಸೋತವನು. ಹೀಗಾಗಿ, ವಿವಾಹದ ಕುರಿತು ನನಗೆ ಯಾವುದೇ ಸಲಹೆ ಕೇಳಬಾರದು. ನಾನು ಒಂಟಿಯಾಗಿ ಬದುಕೋಕೆ ಇಷ್ಟಪಡಲ್ಲ. ನನಗೆ ಪಾರ್ಟ್ನರ್ ಬೇಕೆ ಬೇಕು. ನಾನು ಒಂಟಿ ಜೀವಿ ಅಲ್ಲ. ನಾನು ನನ್ನ ಮಾಜಿ ಪತ್ನಿಯರ ಜೊತೆ ಒಳ್ಳೆಯ ನಂಟು ಹೊಂದಿದ್ದೇನೆ. ನಾವು ಒಂದು ಕುಟುಂಬದಂತೆ ಇದ್ದೇವೆ. ಜೀವನವನ್ನು ಯಾರೂ ಊಹಿಸೋಕೆ ಸಾಧ್ಯವಿಲ್ಲ. ನಾವು ಹೇಗೆ ನಂಬೋದು?’ ಎಂದಿದ್ದಾರೆ ಅವರು.

   ‘ಮೂರನೇ ಮದುವೆ ಆಗುತ್ತೀರಾ’ ಎಂದು ಆಮಿರ್ ಖಾನ್​ಗೆ ಕೇಳಲಾಗಿದೆ. ‘ನನಗೆ ಈಗ 59 ವರ್ಷ. ನಾನು ಮತ್ತೆ ಹೇಗೆ ಮದುವೆ ಆಗಲಿ? ಕಷ್ಟ ಆಗುತ್ತದೆ. ನಾನು ಸಾಕಷ್ಟು ರಿಲೇಶನ್​ಶಿಪ್​ಗಳನ್ನು ಈಗ ಹೊಂದಿದ್ದೇನೆ. ನಾನು ಕುಟುಂಬದ ಜೊತೆ, ಮಕ್ಕಳ ಜೊತೆ ಮತ್ತೆ ಕನೆಕ್ಟ್ ಆಗಿದ್ದೇನೆ. ನಾನು ಯಾರ ಜೊತೆ ಕ್ಲೋಸ್ ಇದ್ದೇನೋ ಅವರ ಜೊತೆ ಇರೋದು ನನಗೆ ಖುಷಿ ಕೊಡುತ್ತದೆ’ ಎಂದಿದ್ದಾರೆ ಅವರು. 

   ‘ಲಾಲ್​ ಸಿಂಗ್ ಛಡ್ಡಾ’ ಬಳಿಕ ಆಮಿರ್ ಖಾನ್ ಅವರು ಬ್ರೇಕ್ ಪಡೆದಿದ್ದಾರೆ. ಆಮಿರ್ ಖಾನ್ ಅವರು ಸದ್ಯ ‘ಸಿತಾರೇ ಜಮೀನ್ ಪರ್’ ಸಿನಿಮಾದಲ್ಲಿ ನಟಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap