ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಪ್ರಧಾನ

ಚಿತ್ರದುರ್ಗ:

ಯುವ ವಿಜ್ಞಾನಿಗಳಿಗೆ ಕಸ್ತೂರಿ ರಂಗನ್ ಮಾದರಿ  ಗಗನ ಯಾತ್ರಿಗಳು ಆಗಬೇಕೆಂಬ ವಿದ್ಯಾರ್ಥಿಗಳಿಗೆ ಕಸ್ತೂರಿ ರಂಗನ್ ಬಹುದೊಡ್ಡ ಆದರ್ಶ ವ್ಯಕ್ತಿಗಳಾಗಿದ್ದಾರೆ. ವಿದ್ಯಾರ್ಥಿಗಳು ಮೊದಲು ಸಮಾಜ ಮತ್ತು ಪ್ರಕೃತಿ ಎನ್ನುವ ಪುಸ್ತಕವನ್ನು ಓದಬೇಕು. ನಂತರ ನಿಮ್ಮ ನಿಮ್ಮ ಕ್ಷೇತ್ರಗಳ ಅಧ್ಯಯನ ಮಾಡಬೇಕು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾಮಠದಲ್ಲಿ ನಡೆದ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಬಸವಶ್ರೀ ಪ್ರಶಸ್ತಿ ಸಾಮಾಜಿಕ ಸಾಮರಸ್ಯವನ್ನು ಮೂಡಿಸುವಂತದ್ದು, ಅದಕ್ಕೆ ಗಡಿ-ಮಿತಿಗಳಿಲ್ಲ. ಅದು ಅತ್ಯುತ್ತಮವಾದ ಕೆಲಸ ಮಾಡುತ್ತದೆ. ಕಸ್ತೂರಿ ರಂಗನ್‍ರವರ ಸಂಶೋಧನಾ ಲೇಖನಗಳ ಸಂಖ್ಯೆ 240. ಅವರ ಸಾಧನೆಗಳಿಗೆ ನೊಬೆಲ್ ಪ್ರಶಸ್ತಿ ಸಿಗುವ ಸಾದ್ಯತೆಯು ದೂರವಿಲ್ಲ. ಇಂದಿನ ಯುವ ವಿಜ್ಷಾನಿಗಳಿಗೆ ಮಾದರಿಯಾಗಿ ಡಾ.ಕಸ್ತೂರಿರಂಗನ್‍ರವರು ನಿಲ್ಲುತ್ತಾರೆ. ಇಂತಹ ಸಾಧನೆಗಳಿಂದಲೇ ಅವರ ಮುಖ ಕಳೆ, ವ್ಯಕ್ತಿತ್ವ ರೂಪಗೊಂಡಿರುವುದು ಎಂದು ನುಡಿದರು.

2020ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ, ಇಸ್ರೋ ಮಾಜಿ ಅಧ್ಯಕ್ಷರು, ಬಾಹ್ಯಾಕಾಶ ವಿಜ್ಞಾನಿಗಳಾದ ಡಾ.ಕೆ.ಕಸ್ತೂರಿ ರಂಗನ್, ಬಸವಶ್ರೀ ಪ್ರಶಸ್ತಿ ದೊರೆತಿರುವುದು ನನ್ನ ಸೌಭಾಗ್ಯ. ಇಂತಹ ಪ್ರಶಸ್ತಿ ನೀಡಿದ್ದಕ್ಕಾಗಿ ಶ್ರೀಗಳಿಗೆ ವಂದಿಸುತ್ತೇನೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯ ಮಹತ್ವವನ್ನು ತಿಳಿಸಿದರು. ಬಸವಣ್ಣನವರು ಒಬ್ಬ ಗುರುವಾಗಿ, ಸಮಾಜ ಸುಧಾರಕ ಕಾರ್ಯಕ್ಕೆ ಮಹತ್ವವವನ್ನು ಗೌರವವನ್ನು ನೀಡಿದವರು. ಸಮಾಜಕ್ಕೆ ವಚನ ಸಂವಿಧಾನವನ್ನು ನೀಡಿದವರು. ಅನುಭವ ಮಂಟಪದ ಮೂಲಕ ಜಗತ್ತಿಗೆ ಮೊದಲ ಪ್ರಜಾಪ್ರಭುತ್ವದ ಮೌಲ್ಯವನ್ನು ತೋರಿಸಿಕೊಟ್ಟವರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶರಣ ಸಂಸ್ಕøತಿ ಉತ್ಸವದ ಗೌರವಾಧ್ಯಕ್ಷರಾದ ಶ್ರೀ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ ಕರೋನಾ ಇಡೀ ದೇಶವನ್ನು ತತ್ತರಗೊಳಿಸಿದ ಸಂದರ್ಭದಲ್ಲಿ ಶ್ರೀಗಳ ಆಲೋಚನೆ ಮೂಲಕ ಈ ಬಾರಿಯ ಶರಣ ಸಂಸ್ಕøತಿ ಉತ್ಸವ ಯಶಸ್ವಿಯಾಗಿ ನಡೆದು ಬರುತ್ತಿದೆ. ವರ್ಣ ವರ್ಗ ಎಲ್ಲವನ್ನೂ ಒಳಗೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ಜಾತ್ಯತೀತ ನಿಲುವನ್ನು ತಳೆಯಲು ಎದೆಗಾರಿಕೆ ಬೇಕು. ಅದು ಪರಮಪೂಜ್ಯರಿಂದ ಮಾತ್ರ ಸಾದ್ಯ. ಬಸವಣ್ಣನವರು ಬಂದು 900 ವರ್ಷಗಳ ಹಿಂದೆಯೇ ಶ್ರೀ ಸಾಮಾನ್ಯನಿಗೆ ಸ್ವತಂತ್ರವನ್ನು ಕೊಟ್ಟರೆ, ಬ್ರಿಟಿಷರಿಂದ ಸ್ವಾತಂತ್ರ ಬಂದು ಕೇವಲ 75 ವರ್ಷಗಳು ಮಾತ್ರ ಕಳೆದಿವೆ. ಪರಮಪೂಜ್ಯರ ಕ್ರಿಯಾಶೀಲ ಕಾರ್ಯಗಳಿಗೆ ನಮ್ಮ ನೈತಿಕ ಬೆಂಬಲ ಸದಾ ಇರುತ್ತದೆ. ದಲೈಲಾಮರಿಗೆ ಬಸವಶ್ರೀ ಪ್ರಶಸ್ತಿ ಕೊಟ್ಟ ಸಂದರ್ಭದಲ್ಲಿ ಚೀನಾದಿಂದಲೂ ವಿರೋಧ ವ್ಯಕ್ತವಾಗಿತ್ತು. ಆಗ ಶ್ರೀಮಠದ ಹೆಸರು ದೇಶ ವಿದೇಶಗಳಿಗೂ ಹರಡಿದ್ದು ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದ ಶ್ರೀ.ಸೌಮ್ಯನಾಥನಂದಾ ಸ್ವಾಮಿಗಳು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ

ಬಹಳ ಹಿಂದಿನಿಂದಲೂ ಮಠಗಳ ಕೊಡುಗೆ ಅಪಾರವಾಗಿವೆ. ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಮಠಗಳು ಅತ್ಯುನ್ನತ ಸೇವೆಗಳನ್ನು ಮಾಡುತ್ತಾ ಬಂದಿವೆ. ಮುರುಘಾ ಮಠ ಬಹಳ ಹಿಂದಿನಿಂದಲೂ ಸಮಾಜಕ್ಕೆ ಸಾಕಾಷ್ಟು ಕೊಡುಗೆ ಕೊಡುತ್ತಾ ಬಂದಿದೆ. ಬಸವಣ್ಣನವರ ಹೆಸರಿನಲ್ಲಿ ಪ್ರಶಸ್ತಿಯ ಪ್ರದಾನ ಮಾಡುತ್ತಿರುವುದು ಬಹಳ ಮೌಲ್ಯಯುತವಾದುದು ಎಂದು ಆಶೀರ್ವಚಿಸಿದರು.
ಶರಣ ಸಂಸ್ಕøತಿ ಉತ್ಸವದ ಕಾರ್ಯಧ್ಯಕ್ಷರಾದ ಕೆ.ಎನ್.ನವೀನ್ ಮಾತನಾಡಿ, ಮಾನವ ಮೌಲ್ಯಗಳನ್ನು , ಮಾನವನ ಬದುಕನ್ನು ಯಾವ ರೀತಿಯಲ್ಲಿ ನಡೆಸಬೇಕು, ಸಮ ಸಮಾಜದ ನಿರ್ಮಾಣಕ್ಕೆ ಸರ್ವ ಸಮಾನತೆಯಿಂದ ಜೀವನ ನಡೆಸುವುದಕ್ಕೆ ಹಗಲಿರುಳು ಶ್ರಮಿಸುತ್ತಿರುವ ಡಾ.ಶಿವಮೂರ್ತಿ ಮುರುಘಾ ಶರಣರು ಇಂದು ಬಾಹ್ಯಕಾಶ ಕ್ಷೇತ್ರದಲ್ಲಿ ಭಾರತದ ಹೆಸರು ಜಾಗತಿಕವಾಗಿ ಗುರುತಿಸಿಕೊಳ್ಳಲು ಕಾರಣೀಭೂತರಾದ ಸೆಟಲೈಟ್ ಮ್ಯಾನ್ ಡಾ.ಕೆ.ಕಸ್ತೂರಿ ರಂಗನ್ ಮತ್ತು ಮಿಸೈಲ್ ಮ್ಯಾನ್ ಡಾ.ಎ.ಪಿ.ಜೆ.ಅಬ್ದುಲ್ ಕಲಾಂರವರಿಗೆ ಬಸವಶ್ರೀ ಯಂತಹ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. 27 ವಿಶ್ವವಿದ್ಯಾಲಯಗಳಲ್ಲಿ ಗೌರವ ಡಾಕ್ಟರೇಟ್ ಪಡೆದಿರುವವರು ಡಾ.ಕೆ.ಕಸ್ತೂರಿ ರಂಗನ್ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ರಚಿಸಿರುವ ‘ಎouಡಿಟಿeಥಿ oಜಿ ಒಥಿsಣiಛಿ ಇxಠಿeಡಿieಟಿಛಿe’ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಸವಶ್ರೀ ಪ್ರಶಸ್ತಿ ಪತ್ರವನ್ನು ಡಾ.ಸಿ.ಟಿ.ಜಯಣ್ಣ ಮತ್ತು ಡಾ.ಗೌರಮ್ಮ ವಾಚನ ಮಾಡಿದರು
ಎಸ್.ಜೆ.ಎಂ.ವಿದ್ಯಾಪೀಠದ ಅಡಿಯಲ್ಲಿನ ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಫ್ಯಾಶನ್ ಡಿಸೈಂನಿಂಗ್ ಕೋರ್ಸ್ ಮಾಡುತ್ತಿರುವ ಕು.ಐಶ್ವರ್ಯ ಸುಮಾರು 5 ಕಿಲೋ ಮೀಟರ್ ಉದ್ದದ ದಾರದಲ್ಲಿ 17 ಗಂಟೆಗಳಲ್ಲಿ ಡಾ.ಶಿವಮೂರ್ತಿ ಮುರುಘಾಶರಣರ ಭಾವಚಿತ್ರವನ್ನು ರಚಿಸಿ ಶ್ರೀಗಳಿಗೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮಿಗಳು, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿಗಳಾದ ಎ.ಜೆ.ಪರಮಶಿವಯ್ಯ, ಶಿಕ್ಷಣಾಧಿಕಾರಿಗಳಾದ ಬಿ.ಸಿದ್ದಪ್ಪ, ಹರಚರಗುರುಮೂರ್ತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಂಜನಾ ನೃತ್ಯ ಕಲಾ ಕೇಂದ್ರದ ಡಾ.ನಂದಿನಿ ಶಿವಪ್ರಕಾಶ್ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ ನೆರವೇರಿತು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ವೀರಶೈವ ಸಮಾಜದ ಕಾರ್ಯದರ್ಶಿ ಎನ್.ಬಿ.ವಿಶ್ವನಾಥ್ ಸ್ವಾಗತಿಸಿ, ನಿರಂಜನ್ ದೇವರಮನಿ ನಿರೂಪಿಸಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link