ಬಳ್ಳಾರಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸರಕಾರದ ವಿವಿಧ ಯೋಜನೆಗಳ ಕುರಿತು ಬೀದಿನಾಟಕದ ಮೂಲಕ ಜನರಲ್ಲಿ ಅರಿವು(ಜಾಗೃತಿ) ಮೂಡಿಸುವ ಜಾಥಾಗೆ ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು, ಸರಕಾರದ ವಿವಿಧ ಯೋಜನೆಗಳ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಮತ್ತು ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಅಗತ್ಯ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವಿವಿಧ ಯೋಜನೆಗಳ ಕುರಿತು ಹೊರತಂದ ಕಿರುಹೊತ್ತಿಗೆಗಳು ಮತ್ತು ಕರಪತ್ರಗಳನ್ನು ಜನರಿಗೆ ತಮ್ಮ ಬೀದಿನಾಟಕದ ಸಂದರ್ಭದಲ್ಲಿ ವಿತರಿಸಿ ಎಂದರು.
ಇಸ್ರೆಲ್ ಕೃಷಿ ಪದ್ದತಿ ಅಳವಡಿಕೆ, ಸಾವಯವ ಕೃಷಿಗೆ ಒತ್ತು, ಕೃಷಿ ಸಾಲಮನ್ನಾ, ಆತ್ಮಹತ್ಯೆ ಮಾಡಿಕೊಳ್ಳದಿರಿ ರೈತರೇ ನಿಮ್ಮ ಬೆನ್ನಿಗೆ ಸರಕಾರವಿದೆ, ಸ್ವಚ್ಛತೆ ಮತ್ತು ಶೌಚಾಲಯ, ಸಮಾಜಕಲ್ಯಾಣ ಇಲಾಖೆ ಸಹಾಯವಾಣಿ, ಆರೋಗ್ಯ ಕರ್ನಾಟಕ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಿಯೋಜಿತವಾದ ಪ್ರಶಾಂತ ನೇತೃತ್ವದ ರಂಗಸಂಸ್ಕøತಿ ಕಲಾತಂಡದ ಕಲಾವಿದರು ಬೀದಿನಾಟಕದ ಮೂಲಕ ಅರಿವು ಮೂಡಿಸುವ ಕೆಲಸವನ್ನು ಮಾಡಲಿದ್ದಾರೆ.
ಈ ಕಲಾತಂಡವು ಸೆ.20ರಿಂದ 29ರವರೆಗೆ ಜಿಲ್ಲೆಯ ಸಿರಗುಪ್ಪ ಮತ್ತು ಕುರುಗೋಡು ತಾಲೂಕುಗಳ ಬೈಲೂರು, ಸಿಂಧಿಗೇರಿ,ಕುರಿಗನೂರು, ಉತ್ತನೂರು, ತೆಕ್ಕಲಕೋಟೆ, ನಡವಿ, ಹಳೇಕೋಟೆ,ಉಡೇಗೊಳ,ಬಿ.ಎಂ.ಸುಗೂರ, ಮಾಟ್ರದಿನ್ನಿ, ಉಜ್ಜಲಪೇಟೆ,ಯಲ್ಲಾಪುರ, ಗೆಣಕಿಹಾಳ, ಬಸಾಪುರ, ಸಿದ್ದಮ್ಮನಳ್ಳಿ, ಬಾದನಹಟ್ಟಿ, ಏಳುಬೆಂಚಿ, ತಿಮ್ಮಲಾಪುರ, ಯರ್ರಂಗಳಿಗಿ, ವದ್ದಟ್ಟಿ ಗ್ರಾಪಂಗಳಲ್ಲಿ ಬೀದಿನಾಟಕ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಿದೆ.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಅಧೀಕ್ಷಕ ಗುರುರಾಜ, ಸಿಬ್ಬಂದಿಗಳಾದ ವಿಜಯ್, ಹನುಮಂತಪ್ಪ ಹಾಗೂ ಕಲಾವಿದರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ