ಗೊರುಚ ಸೇರಿದಂತೆ 3 ಸಾಧಕರಿಗೆ ಕನ್ನಡ ವಿವಿಯ ನಾಡೋಜ ಗೌರವ ಪದವಿ

ಹಂಪಿ:


ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರತಿ ವರ್ಷ ನೀಡುವ ನಾಡೋಜ ಗೌರವ ಪದವಿಗೆ ಈ ವರ್ಷ ಜಾನಪದ ಸಾಹಿತಿ ಗೊ.ರು.ಚನ್ನಬಸಪ್ಪ, ಭಾಷಾ ಜ್ಞಾನಿ ಡಾ.ಭಾಷ್ಯಂ ಸ್ವಾಮಿ, ಹಾಗೂ ಸಂಸ್ಕೃತ ಲೋಕದ ಜ್ಞಾನಿ ಪ್ರೋ ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರನ್ನು ಆಯ್ಕೆ ಮಾಡಲಾಗಿದೆ.

ಈ ತಿಂಗಳ 12 ರಂದು ನಡೆಯುವ ವಿವಿಯ 30 ನೇ ಘಟಿಕೋತ್ಸವ ನುಡಿಹಬ್ಬದಲ್ಲಿ ಈ ಗೌರವ ಪದವಿ ಪ್ರದಾನ ಮಾಡಲಿದೆ ಎಂದು ವಿವಿಯ ಕುಲಪತಿ ಡಾ.ಸ.ಚಿ.ರಮೇಶ ತಿಳಿಸಿದ್ದಾರೆ.ಇಂದು ವಿವಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಈ ವಿಷಯ ತಿಳಿಸಿದ್ದಾರೆ.

ಕನ್ನಡ ಕಲಿಕೆ ಕಡ್ಡಾಯಕ್ಕೆ ತಡೆ: ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ

ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಸಿ.ಎಸ್.ಅಶ್ವಥನಾರಾಯಣ ಆಂದ್ರಪ್ರದೇಶ ಕೇಂದ್ರೀಯ ಬುಡುಗಟು ವಿಶ್ವವಿದ್ಯಾಲಯ ದ ಡಾ. ತೇಜಸ್ವಿ ಕಟ್ಟೀಮನಿ ನುಡಿ ಹಬ್ಬದ ಭಾಷಣ ಮಾಡಲಿದ್ದಾರೆ

ಪದ್ಮರಾಜ ದಂಡಾವತೆ,.ಮುರುಘಾ ಶರಣರು, ಬಿ.ಎಸ್.ಪುಟ್ಟಸ್ವಾಮಿ ,ಕಲ್ಲಕುಡಿ ವಿಠ್ಠಲ ಹೆಗಡೆ ಸೇರಿದಂತೆ 427 ವಿದ್ಯಾರ್ಥಿಗಳು ವಿವಿದ ಪದವಿಯನ್ನು ಪಡೆಯಲಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap