ನಾಯಕನಹಟ್ಟಿ :
ಹೋಬಳಿಯ ರಾಮಸಾಗರದಲ್ಲಿ ಗಾದ್ರಿಪಾಲನಾಯಕ ದೇವಸ್ಥಾನದ ಕಳಶ ಧಾರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಹಿಂದೂ ಸನಾತನ ಸಂಸ್ಕೃತಿ ಶ್ರೀಮಂತ ವಾಗಬೇಕಾದರೆ ಚಿತ್ರದುರ್ಗದಂತಹ ಜಿಲ್ಲೆಗಳಲ್ಲಿರುವ ಬುಡಕಟ್ಟು ಸಮುದಾಯದವರು ಕೈಗೊಳ್ಳುವಂತಹ ಇಂಥ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಲ ಕಾರಣವಾಗಿವೆ ಈ ಬುಡಕಟ್ಟು ಸಮುದಾಯಗಳು ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರಂತ ಸಾಮಾಜಿಕ ಪರಿವರ್ತನೆಯ ಸಂದೇಶಗಳನ್ನು ಕೂಡ ಪರಿಪಾಲಿಸುತ್ತಿವೆ.
ಚಿತ್ರದುರ್ಗದ ಪರಂಪರೆ ಮತ್ತು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವಂತ ಗಾದ್ರಿಪಾಲ ನಾಯಕ ಮತ್ತು ಎರಮಂಜ ನಾಯಕ ದೇವರುಗಳ ಆರಾಧನೆಯು ಈ ಜನಾಂಗಗಳಿಗೆ ಈ ಜನಾಂಗಗಳಿಗೆ ಸ್ವಾಭಿಮಾನದ ಸಂಕೇತವಾಗಿದೆ ಕಟ್ಟು ನಿಟ್ಟಿನ ವ್ರತಾ ಮತ್ತು ಪೂಜಾ ವಿಧಿ ವಿಧಾನಗಳು ಇವರ ಶಿಸ್ತು ಏಕಾಗ್ರತೆಯನ್ನು ಹೆಚ್ಚಿಸಿವೆ.ಈ ದೇವರ ಆರಾಧನೆಯಿಂದ ಮತ್ತು ಹೊಸ ವರ್ಷದ ಈ ದಿನದ ಪೂಜೆಯಿಂದ ಸಮಸ್ತ ತಾಲ್ಲೂಕಿನ ಜನತೆಯ ಬದುಕು ಹಸನಾಗಲಿ ಈ ಭಾಗದ ರೈತರು ನಿರೀಕ್ಷಿಸಿದಂತೆ ನೆಮ್ಮದಿಯ ಬದುಕು, ನಿಮ್ಮದಾಗಲಿ ಎಂದು ಆಶಿಸಿದರು.
ಆರಕ್ಷಕರು ತನಿರೀಕ್ಷಕರದ ಉಮೇಶ್ ಮಾತನಾಡಿ ಈ ಬುಡಕಟ್ಟು ಸಮುದಾಯದವರು ಪುರಾಣಗಳು ಹೇಳುವಂತೆ ಈ ದೇಶದ ಮೂಲ ನಿವಾಸಿಗಳು ಇವರ ಆಚರಣೆ ಮತ್ತು ಸಂಪ್ರದಾಯಗಳು ವಿಶಿಷ್ಟವಾದಂತ ಆಗಿರುತ್ತವೆ.ಈ ಆಚರಣೆಗಳಿಂದ ಮನುಕುಲ ಮತ್ತು ಸಮಾಜಕ್ಕೆ ಒಳಿತನ್ನೇ ಕೋರುವುದಾಗಿದೆ ಮೂರು ಸಾವಿರ ವರ್ಷಗಳ ಇತಿಹಾಸ ಇರುವಂತ ಈ ಸಮಾಜ ಪರಂಪರೆ ಇದ್ದರೂ ಕೂಡ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹೆಚ್ಚಿನ ರೀತಿಯ ಪ್ರಗತಿ ಕಾಣುವುದು ಅನಿವಾರ್ಯವಾಗಿದೆ.ಈ ದಿಕ್ಕಲ್ಲಿ ಸಮುದಾಯದ ಎಲ್ಲರೂ ಕೂಡ ಮುಂದಾಗಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರದ ತಿಪ್ಪೇಸ್ವಾಮಿ ಮಹಾಂತೇಶ ವಾಲ್ಮೀಕಿ ಸಮಾಜದ ಮುಖಂಡರು ಯುವಕರು ಮತ್ತು ಭಕ್ತಾದಿಗಳು ಇನ್ನು ಇತರರು ಇದ್ದರು.
