ಚಿಕ್ಕನಾಯಕನಹಳ್ಳಿ :
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತೆರಳುವ ಮುಖ್ಯ ರಸ್ತೆಯಲ್ಲಿನ ಒಂದು ಭಾಗವು ಮಳೆ ನೀರಿನಿಂದ ಕೊರೆದುಕೊಂಡು ಗುಂಡಿ ಬಿದ್ದಿದ್ದು, ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳು ಹಾಗೂ ನಾಗರಿಕರು ಅಪಘಾತ ಎದುರಿಸುವ ಸಂಭವ ಎದುರಾಗಿದೆ.
ಮಳೆ ನೀರಿನಿಂದ ರಸ್ತೆಯ ಮಣ್ಣಿನ ಭಾಗವು ಕೊರೆದು ಗುಂಡಿ ಬಿದ್ದಿದೆ. ಮಣ್ಣಿನ ಭಾಗದ ರಸ್ತೆಯು ಗುಂಡಿ ಬಿದ್ದಿರುವ ಸ್ಥಳದಲ್ಲಿ ವಿದ್ಯಾರ್ಥಿಗಳು, ನೂರಾರು ಪ್ರಯಾಣಿಕರು ಬೈಕ್‍ಗಳಲ್ಲಿ, ಸೈಕಲ್‍ನಲ್ಲಿ ತೆರಳುತ್ತಾರೆ. ಈ ಸಂದರ್ಭದಲ್ಲಿ ಭಾರೀ ವಾಹನಗಳು ರಸ್ತೆಯಲ್ಲಿ ಸಂಚರಿಸಿದರೆ ಪಕ್ಕದಲ್ಲಿ ಬರುವ ವಾಹನ ಅಥವಾ ಪ್ರಯಾಣಿಕರು ರಸ್ತೆ ಕೊರೆದಿರುವ ಗುಂಡಿಯಲ್ಲಿ ಬಿದ್ದು ಅಪಘಾತ ಎದುರಾಗುವ ಸಂಭವವಿದೆ.
ರಸ್ತೆ ಕೊರೆದು ಗುಂಡಿಯಾಗಿರುವ ಸ್ಥಳದಲ್ಲಿ ಪುರಸಭೆಗೆ ಸಂಬಂಧಪಟ್ಟ ನೀರಿನ ಪೈಪ್‍ಲೈನ್ ಕೂಡ ಹಾದು ಹೋಗಿದೆ. ಈ ಪೈಪ್‍ಲೈನ್‍ನಿಂದ ಸರ್ಕಾರಿ ಪಿಯು ಕಾಲೇಜಿನ ಹಿಂಭಾಗದ ಮನೆಗಳಿಗೆ ನೀರು ಸರಬರಾಜಾಗುತ್ತಿದ್ದು, ಗುಂಡಿ ಬಿದ್ದಿರುವ ಸ್ಥಳದಲ್ಲಿ ಪೈಪ್‍ಲೈನ್ ಸಹ ಹಾದು ಹೋಗಿರುವುದರಿಂದ ಯಾವ ಸಮಯದಲ್ಲಿ ಬೇಕಾದರೂ ಪೈಪ್‍ಲೈನ್ ಹಾಳಾಗಿ ನೀರು ಪೋಲಾಗಬಹುದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿದರೆ ಮುಂದೆ ಉಂಟಾಗಬಹುದ ಅನಾಹುತವನ್ನು ತಪ್ಪಿಸಬಹುದು ಎಂದು ಡಿಎಸ್‍ಎಸ್ ಯುವ ಮುಖಂಡ ಪ್ರವೀಣ್ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ