ಬೆಳೆ ನಷ್ಠ ಪರಿಹಾರ ಅರ್ಹ ರೈತರಿಗೆ ತಲುಪಿಲ್ಲ

ಪಾವಗಡ :

ನವೆಂಬರ್ ತಿಂಗಳಲ್ಲಿ ಸುರಿದಾ ದಾರಕಾರ ಮಳೆಯಿಂದ ತಾಲೂಕಿನಲ್ಲಿ ಹಾನಿಯಾದ ಬೆಳೆ ನಷ್ಠ ಪರಿಹಾರ ಅರ್ಹ ರೈತರಿಗೆ ತಲುಪಿಲ್ಲ ಎಂದು ಶಾಸಕರ ವೆಂಕಟರಮಣಪ್ಪ ಕೆಂಡಮಂಡಲರಾದರು.

ತಾ.ಪಂ ಸಭಾಂಗಣದಲ್ಲಿ ಶುಕ್ರವಾರ ನಡೆದಾ ಪ್ರಗತಿ ಪರಿಶೀಲನಾ ಸಭೆಯ ಅದ್ಯಕ್ಷತೆ ವಹಿಸಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಬೆಳೆನಷ್ಠ ಪರಿಹಾರದ ಬಗ್ಗೆ ಮಾಹಿತಿ ಪಡೆದು ಪರಿಹಾರಕ್ಕೆ ಆಯ್ಕೆಯಾದ ರೈತರ ಮಾಹಿತಿ ಪಡೆದಾ ಶಾಸಕರು ವಿವಿಧ ಗ್ರಾಮಗಳಲ್ಲಿ ಬೆಳೆನಷ್ಠ ಅನುಭವಿಸಿದ ರೈತರು ಪರಿಹಾರಕ್ಕೆ ಆಯ್ಕೆಯಾಗದಿರದ ಬಗ್ಗೆ ಕೊಪಗೊಂಡ

ಶಾಸಕರು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ವತಿಯಿಂದ ಬೆಳೆನಷ್ಠ ಸಮೀಕ್ಷೆ ರೈತರ ಜಮೀನುಗಳಿಗೆ ತೆರಳದೆ ಕಚೇರಿಯಲ್ಲೇ ಸಿದ್ದಪಡಿಸಿರುವ ಪಟ್ಟಿ, ಈಗಾದರೆ ಅರ್ಹ ರೈತರಿಗೆ ನ್ಯಾಯ ದೋರಕಿಸಿ ಕೋಡುವುದು ಹೇಗೆ ಬೇಜಬ್ದಾರಿ ತನದಿಂದ ಕೇಲಸ ಮಾಡುವ ನೀವಿಬ್ಬರು ಮೋದಲು ತಾಲೂಕು ಬೀಡಬೇಕು ಎಂದು ಸಭೆಯಲ್ಲಿ ಶಾಸಕರು ಎಚ್ಚರಿಸಿದರು.

ಪಶುಪಾಲನಾ ಇಲಾಖೆ ವತಿಯಿಂದ ಮೂರು ಗೊಂಚಲು ಗ್ರಾಮಗಳ ಆಯ್ಕೆ ಹಾಗೂ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಬಗ್ಗೆ ಮಾಹಿತಿ ನೀಡಿದ ಸಿದ್ದಗಂಗಯ್ಯ, 12 ರೈತರಿಗೆ ಹಳ್ಳಿಕಾರ್ ಕರುಗಳ ವಿತರಣೆ ಮಾಡುತ್ತಿದ್ದು ಒಂದು ಕರು 13 ಸಾವಿರ ಇದ್ದು ರೈತರವಂತಿಕೆ 3250 ರೂ ಮಾತ್ರ ಪಾವತಿಸಿಬೇಕಿದೆ ಎಂದು ಸಭೆಗೆ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ತನಾರಾಯಣ ಮಾತನಾಡಿ 54 ವಿದ್ಯಾರ್ಥಿಗಳಿಗೆ ಕೊವಿಡ್ ಸೊಂಕು ತಗುಲಿರುವ ಬಗ್ಗೆ ಸಭೆಗೆ ತಿಳಿಸಿದಾಗ ವೆಂಕಟಾಪುರ ಶಾಲೆಯಲ್ಲಿ 20 ವರ್ಷಗಳಿಂದ ಬೀಡುಬಿಟ್ಟಿರುವ ಶಿಕ್ಷಕಿ ಶಾಲಾಭಿವೃದ್ದಿ ಸಮಿತಿಯ ಮೇಲೆ ದೌರ್ಜನ್ಯ ಇವರನ್ನ ತಕ್ಷಣವೇ ಬೇರೆಕಡೆ ನಿಯೋಜಿಸುವಂತೆ ಶಾಸಕರು ತಾಕೀತು ಮಾಡಿ ತುಮಕೂರು ಬೆಂಗಳೂರಿನಿಂದ ಓಡಾಡುತ್ತಿರುವ ಶಿಕ್ಷರ ಮೇಲೆ ತಕ್ಷಣವೇ ಅಗತ್ಯ ಕ್ರಮ ವಹಿಸಿಸುವಂತೆ ಸೂಚಿಸಿದರು.

ಬಿಸಿಯೂಟ ಶಾಲೆಗಳು ಆರಂಭವಾದ ನಂತರ ಶಾಲೆಯಲ್ಲೇ ನೀಡುತ್ತಿದ್ದು ವೇತನ ಪಾವತಿಯಾಗಿರುವ ಬಗ್ಗೆ ತಿಳಿಸಿದರು, ಸಿಡಿಪಿಒ ನಾರಾಯಣ ಮಾತನಾಡಿ ಒಂದು ಮಗುವಿಗೆ ಸೊಂಕು ತಗುಲಿದ್ದು ಆಹಾರವನ್ನ ಮನೆಗಳಿಗೆ ವಿತರಣೆ ಮಾಡುತ್ತಿರುವ ಬಗ್ಗೆ ಸಭೆಗೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿಸಿಎಂ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಖೆಯ ವಸತಿ ಶಾಲೆಗಳ ಸ್ವಚ್ಚತೆ ಸ್ಯಾನಿಟೈಜ್ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿನಿತ್ಯ ವಸತಿ ಶಾಲೆಗಳಿಗೆ ಬೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಸೊಂಕು ಹರಡದಂತೆ ತಡೆಗಟ್ಟಬೇಕೆಂದಾ ಶಾಸಕರು

ಕುರುಬರ ಹಳ್ಳಿ ಗೇಟ್ ಬಳಿಯ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಬಸ್‍ನಿಲ್ಲಿಸದ ಬಗ್ಗೆ ಮಾಹಿತಿ ಪಡೆದು ಸಾರಿಗೆ ವ್ಯವಸ್ಥಾಪಕರಾದ ಹನುಮಂತರಾಯಪ್ಪರವರಿಗೆ ಪ್ರತಿನಿತ್ಯ ಎಲ್ಲಾ ಬಸ್ ನಿಲ್ಲಿಸಬೇಕು ಉಚಿತ ಪಾಸ್ ವಿತರಣೆ ಮಾಡಿ ಯಾವುದೇ ವಿದ್ಯಾರ್ಥಿಯಿಂದ ಹಣ ಪಡೆಯಬಾರದೆಂದು ಶಾಸಕರು ಸೂಚನೆ ನೀಡಿದರು.

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap