29ರವರೆಗೆ ದಿಲ್ಲಿ ಚಲೋಗೆ ಬ್ರೇಕ್‌ : ಕಾರಣ ಗೊತ್ತಾದ್ರೆ ಶಾಕ್‌ ಆಗ್ತಿರಾ…..?

ಚಂಡೀಗಢ: 

    ದಿಲ್ಲಿ ಚಲೋ ಮೆರವಣಿಗೆಯನ್ನು ಸ್ಥಗಿತಗೊಳಿಸಿದ ಎರಡು ದಿನಗಳ ನಂತರ, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (KMM) ಶುಕ್ರವಾರ ತಮ್ಮ ಹೋರಾಟದ ಮುಂದಿನ ನಿರ್ಧಾರವನ್ನು ಫೆಬ್ರವರಿ 29 ರಂದು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

    ಇಂದು ಶನಿವಾರ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಅಂತಾರಾಜ್ಯ ಗಡಿಗಳಲ್ಲಿ ಮೋಂಬತ್ತಿ ಬೆಳಕು ಮೆರವಣಿಗೆ ನಡೆಸಲಿದ್ದಾರೆ.

   ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್, ನಾಳೆ ಭಾನುವಾರ ವಿಶ್ವ ವ್ಯಾಪಾರ ಸಂಘಟನೆ ಕುರಿತು ವಿಚಾರ ಸಂಕಿರಣಗಳು ನಡೆಯಲಿದ್ದು, ಇದರಲ್ಲಿ ಅನೇಕ ಸಮಾಜಪರ ಮತ್ತು ರೈತಪರ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸೋಮವಾರ ದೊಡ್ಡ ಕಾರ್ಪೊರೇಟ್‌ಗಳು ಮತ್ತು ಬಿಜೆಪಿ ನಾಯಕರ ಪ್ರತಿಕೃತಿ ದಹಿಸಲಾಗುವುದು. ಮರುದಿನ, ಎಸ್ ಕೆಎಂ(ರಾಜಕೀಯೇತರ) ಮತ್ತು ಕೆಎಂಎಂ ಮ್ಮದೇ ಆದ ಸಭೆಗಳನ್ನು ನಡೆಸುತ್ತವೆ. ಬುಧವಾರ ಜಂಟಿ ಸಭೆ ನಡೆಸಿ ಮುಂದಿನ ಕ್ರಿಯಾಯೋಜನೆಯನ್ನು ಗುರುವಾರ ಪ್ರಕಟಿಸಲಾಗುವುದು. ಅಲ್ಲಿಯವರೆಗೆ ನಾವು ನಮ್ಮ ಹೋರಾಟವನ್ನು ಸ್ಥಗಿತಗೊಳಿಸುತ್ತೇವೆ ಎಂದರು.

   ಹರಿಯಾಣದಲ್ಲಿ, ರೈತ ಮುಖಂಡರ ವಿರುದ್ಧದ ತಮ್ಮ ನಿಲುವಿನಲ್ಲಿ ಪೊಲೀಸರು ಮೃದು ಧೋರಣೆಗೆ ಬಂದಿದ್ದಾರೆ, ಅವರ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ನ್ನು ಅನ್ವಯಿಸುವ ಪ್ರಸ್ತಾಪವನ್ನು ಕೈಬಿಟ್ಟಿರುವುದಾಗಿ ಹೇಳಿದರು. ಆದರೆ ಇತರ ಪ್ರತಿಭಟನಾಕಾರರನ್ನು ಸೇರಲು ಖಾನೌರಿ ಅಂತಾರಾಜ್ಯ ಗಡಿಗೆ ಹೋಗಲು ಬಯಸಿದ ರೈತರನ್ನು ಚದುರಿಸಲು ಹಿಸಾರ್‌ನಲ್ಲಿ ಅಶ್ರುವಾಯು ಬಳಸಿತು.

   ಪಂಜಾಬ್‌ನಲ್ಲಿ, ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪ್ರತಿಭಟನೆಯ ಸಮಯದಲ್ಲಿ ಮೃತಪಟ್ಟ ರೈತ ಶುಭಕರನ್ ಸಿಂಗ್ ಅವರ ಸಹೋದರಿಗೆ `1 ಕೋಟಿ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದಾರೆ. ಆದರೆ ಅವರ ಕುಟುಂಬವು ಅದನ್ನು ತಿರಸ್ಕರಿಸಿತು ಬದಲಿಗೆ ನ್ಯಾಯ ಬೇಕು ಎಂದು ಕೇಳಿದರು. ಶುಭಕರನ್‌ನನ್ನು ಗುಂಡಿಕ್ಕಿ ಕೊಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸುವವರೆಗೆ ಆತನ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.

   ಎಸ್ ಕೆಎಂನ ಭಾಗವಾಗಿರುವ ಭಾರ್ತಿ ಕಿಸಾನ್ ಯೂನಿಯನ್ (ಏಕ್ತಾ ಉಗ್ರನ್), ಸಿಂಗ್ ಅವರ ಸಾವಿನ ವಿರುದ್ಧ ಪ್ರತಿಭಟಿಸಿ ಪಂಜಾಬ್‌ನ 47 ಸ್ಥಳಗಳಲ್ಲಿ ಪ್ರದರ್ಶನಗಳನ್ನು ನಡೆಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap