ಬೆಂಗಳೂರು
ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳ ಒತ್ತಡಕ್ಕೆ ಮಣಿದು UI ಚಿತ್ರದ ಟೀಸರ್ ರಿಲೀಸ್ ಡೇಟ್ ಯಾವಗ ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಟೀಸರ್ ಕೇಳಿದ ನಿರ್ಮಾಪಕರಿಗೆ ಶಾಕ್ ಕೊಟ್ಟಿದ್ದ ಉಪ್ಪಿ ಫ್ಯಾನ್ಸ್ ಪ್ರೀತಿಯ ಒತ್ತಾಯಕ್ಕೆ ಶರಣಾಗಿದ್ದಾರೆ.
ಒಂದು ವರ್ಷ ಕಳೆದ್ರು ಚಿತ್ರದ ಒಂದೇ ಒಂದು ತುಣಕು ಬಿಟ್ಟುಕೊಡದ ಉಪ್ಪಿ ಟೀಸರ್ ಬಿಡಲು ಒಪ್ಪಿಕೊಂಡಿದ್ದಾರೆ. ರಿಲೀಸ್ ದಿನ ಟೈಮ್ ಮತ್ತು ಪ್ಲೇಸ್ ಎಲ್ಲವನ್ನೂ ತಾವೇ ಹೇಳಿಕೊಂಡಿದ್ದಾರೆ. ಕಳೆದ ಬಾರಿ ಬಂದ ವಿಡಿಯೋದಲ್ಲಿ ಕೇವಲ ಪ್ರಶ್ನೆಗಳೇ ಇದ್ದವು. ನಿರ್ಮಾಪಕರು ಶಾಕ್ ಮೇಲೆ ಶಾಕ್ ತೆಗೆದುಕೊಂಡಿದ್ದರು. ಆದರೆ ಇದೀಗ ಅದೇ ನಿರ್ಮಾಪಕರು ಫುಲ್ ಖುಷ್ ಆಗಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಚಿತ್ರದ ಪ್ರಚಾರವನ್ನ ವಿಭಿನ್ನವಾಗಿಯೇ ಮಾಡುತ್ತಿದ್ದಾರೆ. ಟೀಸರ್ ರಿಲೀಸ್ ಕಾನ್ಸೆಪ್ಟ್ ಅನ್ನೇ ಇಟ್ಟುಕೊಂಡು ಸ್ಪೆಷಲ್ ವಿಡಿಯೋ ಮಾಡಿದ್ದಾರೆ. ಈ ಮೂಲಕ ಸಿನಿಮಾದ ಟೀಸರ್ ಯಾಕೆ ಬಿಡ್ಬೇಕು ಅಂತಲೇ ವಿಡಿಯೊ ಮೊದಲ ಭಾಗದಲ್ಲಿ ಕೇಳಿದ್ದರು.
ಉಪ್ಪಿ ಜನ್ಮ ದಿನಕ್ಕೆ UI ಸಿನಿಮಾ ಟೀಸರ್ ರಿಲೀಸ್
ಹೌದು, ಉಪೇಂದ್ರ ತಮ್ಮ ಜನ್ಮ ದಿನದಂದು UI ಸಿನಿಮಾ ಟೀಸರ್ ರಿಲೀಸ್ ಮಾಡುತ್ತಿದೆ. ಬೆಂಗಳೂರಿನ ಅತಿ ಆಧುನಿಕ ಥಿಯೇಟರ್ ಆಗಿರೋ ಊರ್ವಶಿ ಥಿಯೇಟರ್ನಲ್ಲಿಯೇ ಚಿತ್ರದ ಮೊದಲ ಟೀಸರ್ ರಿಲೀಸ್ ಆಗುತ್ತಿದೆ. ಮಧ್ಯಾಹ್ನ ೩ ಗಂಟೆಗೆ ಈ ಒಂದು ಟೀಸರ್ ರಿಲೀಸ್ ಆಗುತ್ತಿದೆ.
ಇದರಿಂದ ಇಂಡಸ್ಟ್ರಿಯಲ್ಲಿ ಉಪ್ಪಿಕೇಳಿದ ಪ್ರಶ್ನೆಗೆ ಅನೇಕರು ಉತ್ತರ ಹುಡುಕೊ ಪ್ರಯತ್ನ ಮಾಡಿದ್ದರು. ಚಿತ್ರದಕ್ಕೆ ಕೋಟಿ ಕೋಟಿ ದುಡ್ಡು ಹಾಕಿರೋ ನಿರ್ಮಾಪಕರಾದ ನವೀನ್ ಮತ್ತು ಕೆ.ಪಿ.ಶ್ರೀಕಾಂತ್ ತಲೆಕರೆದುಕೊಂದು ಮನೆಗೂ ಬಂದಿದ್ದರು. ಆದರೆ ಎರಡನೇಯ ವಿಡಿಯೋದಲ್ಲಿ ಎಲ್ಲವೂ ಕ್ಲಿಯರ್ ಆಗಿದೆ. ಸ್ವತಃ ಉಪೇಂದ್ರ ತಮ್ಮ ಟೀಸರ್ ಡಿಟೈಲ್ಸ್ ಕೊಟ್ಟಿದ್ದಾರೆ.








