ಬೆಂಗಳೂರು:

ದಿನಾಂಕ 14-06-2022ಕ್ಕೆ ಕೊನೆಗೊಳ್ಳುತ್ತಿರುವಂತ ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣಾ ಆಯೋಗದಿಂದ ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ಕರ್ನಾಟಕ ವಿಧಾನ ಪರಿಷತ್ತಿನ 7 ಸ್ಥಾನಗಳ ಅವಧಿಯು ದಿನಾಂಕ 14-06-2022ರಂದು ಕೊನೆಗೊಳ್ಳಲಿದೆ.ಈ ಸ್ಥಾನಗಳಿಗೆ ದಿನಾಂಕ 03-06-2022ರಂದು ಮತದಾನ ನಡೆಯಲಿದೆ ಎಂಬುದಾಗಿ ತಿಳಿಸಿದೆ.
ಶಾಲೆಗಳಿಗೆ ಬೇಸಿಗೆ ರಜೆ ಮೇ 30ರವರೆಗೆ ವಿಸ್ತರಣೆ ಮಾಡಲು ಸರ್ಕಾರಿ ನೌಕರರ ಸಂಘ ಮನವಿ
ಈ ಪರಿಷತ್ ಸದಸ್ಯರ ಕಾಲಾವಧಿ ಮುಕ್ತಾಯ
- ಲಕ್ಷ್ಮಣ್ ಸವದಿ
- ರಾಮಪ್ಪ ತಿಮ್ಮಾಪುರ್
- ಅಲ್ಲಂ ವೀರಭದ್ರಪ್ಪ
- ಹೆಚ್ ಎಂ ರಮೇಶ್ ಗೌಡ
- ವೀಣಾ ಅಚ್ಚಯ್ಯ ಎಸ್
- ನಾರಾಯಣ ಸ್ವಾಮಿ ಕೆ.ವಿ
- ಲೇಹರ್ ಸಿಂಗ್
ಪೆಟ್ರೋಲ್ ಬಾಂಬ್ ತಯಾರು, ಪೊಲೀಸರನ್ನ ಯಾಮಾರಿಸಲು ಹೋಗಿ ಸಿಕ್ಕಿಬಿದ್ದ ಗ್ಯಾಂಗ್
ಹೀಗಿದೆ 7 ಸ್ಥಾನಗಳಿ ನಡೆಯುತ್ತಿರುವ ಚುನಾವಣಾ ದಿನಾಂಕಗಳ ಮಾಹಿತಿ
- ದಿನಾಂಕ 17-05-2022ರಂದು ಚುನಾವಣಾ ಅಧಿಸೂಚನೆ ಪ್ರಕ
- ದಿನಾಂಕ 24-05-2022ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ
- ದಿನಾಂಕ 25-05-2022ರಂದು ನಾಮಪತ್ರಗಳ ಪರಿಶೀಲನೆ
- ದಿನಾಂಕ 27-05-2022ರಂದು ನಾಮಪತ್ರ ವಾಪಾಸ್ ಪಡೆಯಲು ಕೊನೆ ದಿನ
- ದಿನಾಂಕ 03-06-2022ರಂದು ಮತದಾನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
- ದಿನಾಂಕ 03-06-2022ರಂದು ಸಂಜೆ 5 ಗಂಟೆಗೆ ಮತಏಣಿಕೆ ಕಾರ್ಯ ನಡೆದು, ಫಲಿತಾಂಶ ಘೋಷಣೆ
- ದಿನಾಂಕ 07-06-2022ರಂದು ಚುನಾವಣಾ ಕಾರ್ಯ ಮುಕ್ತಾಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








