ತುಮಕೂರು:
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಿವೇಶನಗಳ ಮೇಲೆ ವಿಧಿಸಲಾಗುತ್ತಿರುವ ಆಸ್ತಿ ತೆರಿಗೆ ದಿಢೀರ್ ಹೆಚ್ಚಳವಾಗಿದ್ದು, ತೆರಿಗೆದಾರ ನಾಗರಿಕರು ಬೆಚ್ಚಿ ಬೀಳುತ್ತಿದ್ದಾರೆ. ಈವರೆಗೆ ಪಾವತಿಸುತ್ತಿದ್ದ ತೆರಿಗೆಗಿಂತ ಈ ಬಾರಿÀ ನಾಲ್ಕೈದು ಪಟ್ಟು ಹೆಚ್ಚಳವಾಗಿರುವುದನ್ನು ಕಂಡು ಹೌಹಾರುತ್ತಿದ್ದಾರೆ.
ಪ್ರತಿ ಮೂರು ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಣೆ ಮಾಡಲಾಗುತ್ತದೆ. ಹೀಗೆ ಪರಿಷ್ಕರಣೆ ಮಾಡಿದರೂ ಅಂತಹ ದುಬಾರಿ ವ್ಯತ್ಯಾಸವೇನೂ ಆಗಲಾರದು. ಆದರೆ ಇದೀಗ ಖಾಲಿ ನಿವೇಶನ ಹೊಂದಿರುವ ಖಾತೆದಾರರಿಗೆ ವಿಧಿಸಲಾಗುತ್ತಿರುವ ಆಸ್ತಿ ತೆರಿಗೆ ಅದ್ಯಾವ ಮಾನದಂಡಗಳನ್ನು ಆಧರಿಸಿದೆ ಎಂಬುದೆ ತಿಳಿಯುತ್ತಿಲ್ಲ. ಈ ಬಗ್ಗೆ ಮಾಹಿತಿಯೂ ಸಿಗುತ್ತಿಲ್ಲ. ಗೊಂದಲಕ್ಕೆ ಒಳಗಾಗಿರುವ ತೆರಿಗೆದಾರರು ನಗರ ಪಾಲಿಕೆಯ ಕಚೇರಿಗಳನ್ನು ಎಡತಾಕಿ ಸಮರ್ಪಕ ಉತ್ತರ ಸಿಗದೆ ವಾಪಸ್ಸಾಗುತ್ತಿದ್ದಾರೆ.
ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ: ಪ್ರಕರಣದ ಕಿಂಗ್‌ಪಿನ್ 18 ದಿನಗಳ ಪಯಣ ಹೇಗಿತ್ತು ಗೊತ್ತಾ?
ನಿವೇಶನಗಳಿಗೆ ತೆರಿಗೆ ದರ ವಿಧಿಸುವಾಗ ಚದರ ಮೀಟರ್ ಅಳತೆಯಲ್ಲಿ ತೆರಿಗೆ ವಿಧಿಸಬೇಕು. ಬದಲಾಗಿ ಚದರ ಅಡಿಗೆ ವಿಧಿಸಲಾಗುತ್ತಿದೆ. ಹೀಗಾಗಿ 300 ರೂ. ಪಾವತಿಸುತ್ತಿದ್ದ ನಿವೇಶನದಾರರಿಗೆ 1000 ರೂ.ಗಳ ಆಸುಪಾಸು, 5 ರಿಂದ 6 ಸಾವಿರ ರೂ. ತೆರಿಗೆ ಪಾವತಿಸುತ್ತಿದ್ದವರು 12 ರಿಂದ 15 ಸಾವಿರ ರೂ.ಗಳನ್ನು ಪಾವತಿಸಬೇಕಾಗಿ ಬಂದಿದೆ. ಇನ್ನೂ ಕೆಲವರಿಗೆ 20 ಸಾವಿರದಿಂದ 30 ಸಾವಿರ ರೂ.ಗಳವರೆಗೂ ತೆರಿಗೆ ಪಾವತಿಸಬೇಕಾದ ಮಾಹಿತಿ ನೀಡಲಾಗಿದೆ.
ಪ್ರತಿದಿನ ಮಹಾನಗರ ಪಾಲಿಕೆ ಆವರಣದಲ್ಲಿ ಫಾರಂ ನಂ.2 ಹಿಡಿದು ಕಚೇರಿಗಳಿಗೆ ಅಲೆದಾಡುವವರ ಸಂಖ್ಯೆ ಹೆಚ್ಚುತ್ತಲೆ ಇದೆ. ನಮೂನೆಯಲ್ಲಿ ನಮೂದಾಗಿರುವ ಚದರಡಿ ವಿಸ್ತೀರ್ಣ ಹಾಗೂ ಅದಕ್ಕೆ ವಿಧಿಸಲಾಗಿ ರುವ ತೆರಿಗೆ ಇತ್ಯಾದಿ ವಿವರಗಳ ಮಾಹಿತಿ ಪಡೆಯಲು ಜನ ಅಲೆದಾಡುತ್ತಿದ್ದಾರೆ. ಆದರೆ ಎಲ್ಲಿಯೂ ಸಮ ರ್ಪಕ ಮಾಹಿತಿ ಸಿಗುತ್ತಿಲ್ಲ. ವಾರ್ಡ್‍ಗೊಂದು ಕಂದಾಯ ವಿಭಾಗದ ಅಧಿಕಾರಿಗಳಿದ್ದಾರೆ. ಅಲ್ಲಿಗೆ ಹೋಗಿ ಕೇಳಿದರೆ ಈ ಬಾರಿ ತೆರಿಗೆ ಮೂರುಪಟ್ಟು ಹೆಚ್ಚಳವಾಗಿದೆ.
ನನ್ನ ಕೊನೆಯ ಉಸಿರು ಇರೋವರೆಗೂ ನಾನು ಮುಸ್ಲಿಮರಿಗೆ ದ್ರೋಹ ಮಾಡಲ್ಲ: ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ
ಪಾವತಿಸಿ ಹೋಗಿ ಎನ್ನುತ್ತಾರೆ. ಸರಿಯಾದ ವಿವರಣೆ ನೀಡಿ ಎಂದರೆ ಐಟಿ ವಿಭಾಗಕ್ಕೆ ಕಳುಹಿಸುತ್ತಾರೆ. ಅಲ್ಲಿ ಕೆಲವೊಮ್ಮೆ ಸಂಬಂಧಿಸಿದವರು ಇರುವುದೇ ಇಲ್ಲ. ಹೀಗಾಗಿ ಅತ್ತಿಂದಿತ್ತ ಅಲೆದಾಡಿ ಬರುವುದೇ ತೆರಿಗೆದಾರ ನಾಗರಿಕರ ಕರ್ತವ್ಯ ಎಂಬಂತಾಗಿದೆ. ಸೂಕ್ತ ಮಾಹಿತಿಯೂ ಸಿಗುವುದಿಲ್ಲ, ನಾಲ್ಕೈದು ಪಟ್ಟು ಹೆಚ್ಚಳದ ತೆರಿಗೆ ಪಾವತಿಸಿ ಬರಬೇಕು, ಇದೆಂಥ ನಿಯಮ ಎಂದು ಪ್ರಶ್ನಿಸುತ್ತಿದ್ದಾರೆ ಸಾರ್ವಜನಿಕರು.
ಪ್ರತಿ ಮೂರು ತಿಂಗಳಿಗೊಮ್ಮೆ ಶೇ.15 ರಷ್ಟು ತೆರಿಗೆ ಹೆಚ್ಚಳ ಮಾಡುವ ಬಗ್ಗೆ ತೀರ್ಮಾನವಾಗಿದೆ. ಈವರೆಗೆ 2005ರ ಅವಧಿ ಮಾನದಂಡ ಅನುಸರಿಸಿ ತೆರಿಗೆ ವಿಧಿಸಲಾಗುತ್ತಿತ್ತು. 2021ರ ನಂತರ ಪರಿಷ್ಕರಣೆಯಾಗಿದ್ದು, ಮಾರುಕಟ್ಟೆ ದರ ಅನುಸರಿಸಿ ತೆರಿಗೆ ದರ ವಿಧಿಸಲಾಗುತ್ತಿದೆ. ಹೀಗಾಗಿ ಹೆಚ್ಚಳವಾಗಿದೆ ಎನ್ನುತ್ತಾರೆ ಅಲ್ಲಿನ ಕೆಲವು ಅಧಿಕಾರಿಗಳು.
ತೆರಿಗೆ ಪರಿಷ್ಕರಣೆಯ ಮಾಹಿತಿಯೆ ಇಲ್ಲ, ಎಲ್ಲವೂ ಅವೈಜ್ಞಾನಿಕವಾಗಿದೆ, ತೆರಿಗೆ ಲೆಕ್ಕಾಚಾರವೆ ಸರಿ ಇಲ್ಲ ಎನ್ನುವ ನಾಗರಿಕರಾದ ಜಿ.ಎಸ್.ಶಶಿಧರ್ ಅವರು, ಖಾಲಿ ನಿವೇಶನಕ್ಕೆ ವಿಧಿಸುವ ತೆರಿಗೆಯನ್ನು ಚದರ ಮೀಟರ್‍ಗಳ ಲೆಕ್ಕಾಚಾರದಲ್ಲಿ ನಮೂದಿಸಬೇಕು. ಬದಲಿಗೆ ಚದರ ಅಡಿಗಳ ಲೆಕ್ಕಾಚಾರದಲ್ಲಿ ಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ.
ಪರಿಣಾಮವಾಗಿ ಈವರೆಗೆ ನಮಗೆ 5 ರಿಂದ 6 ಸಾವಿರ ರೂ.ಗಳ ಆಸುಪಾಸಿನಲ್ಲಿ ಬರುತ್ತಿದ್ದ ತೆರಿಗೆ ಈಗ 12 ಸಾವಿರ ರೂ.ಗಳಿಗೂ ಅಧಿಕ ಏರಿಕೆಯಾಗಿದೆ. ನಾವೆ ಮಾಹಿತಿ ನೀಡಲು ಹೋದ ರೂ ಅಧಿಕಾರಿಗಳು ಕೇಳುತ್ತಿಲ್ಲ. ಎಲ್ಲ ಸರಿಯಾಗಿದೆ ಎಂದು ಹೇಳುತ್ತಾರೆ. ಸರಿಯಾದ ಮಾಹಿತಿ ನೀಡಬೇಕಲ್ಲವೆ ಎಂಬ ಪ್ರಶ್ನೆ ತೆರಿಗೆದಾರರದ್ದು.
ಭಾರತೀಯ ಸೇನಾಪಡೆಯ ಉಪ ಮುಖ್ಯಸ್ಥರಾಗಿ ಕನ್ನಡಿಗ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ನೇಮಕ
ಯಾವ ಆಸ್ತಿಗೆ ಎಷ್ಟು ತೆರಿಗೆ ಎಂಬ ಮಾಹಿತಿಯನ್ನು ಪ್ರದರ್ಶಿಸಬೇಕು. ಅದು ಸಾರ್ವಜನಿಕರಿಗೆ ಲಭ್ಯ ವಿರುವಂತೆ ನೋಡಿಕೊಳ್ಳಬೇಕು. ಕೇವಲ ತೆರಿಗೆ ಕಟ್ಟಿಸಿಕೊಳ್ಳುವುದಷ್ಟೇ ಮುಖ್ಯವಾಗದೆ ನಾಗರಿಕರ ಹಿತ ಕಾಯುವುದು ಪಾಲಿಕೆಯ ಜವಾಬ್ದಾರಿಯಾಗಬೇಕು ಎಂಬ ಅಸಮಾಧಾನದ ನುಡಿಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಪ್ರಸ್ತುತ ವಿಧಿಸಲಾಗುತ್ತಿರುವ ಖಾಲಿ ನಿವೇಶನಗಳ ಆಸ್ತಿ ತೆರಿಗೆ ಶೇ.10 ರಷ್ಟು ಹೆಚ್ಚಳವಾಗಿದೆ. ಮುಂದೆ ಭವಿಷ್ಯಕ್ಕೆ ಅನುಕೂಲವಾಗಲೆಂದು ನಿವೇಶನ ಖರೀದಿಸಿ ಬಿಟ್ಟಿರುವವರು ಹೀಗೆಯೇ ಕೆಲವು ವರ್ಷಗಳು ತೆರಿಗೆ ಪಾವತಿಸುತ್ತಾ ಹೋದರೆ ಮೂಲ ಖರೀದಿಯ ಒಂದಷ್ಟು ಭಾಗವನ್ನೇ ನೀಡಿದಂತಾಗುತ್ತದೆ.
ಹೀಗೆ ಇಷ್ಟು ದುಬಾರಿ ತೆರಿಗೆ ಏರಿಕೆ ಮಾಡಿರುವ ಉದ್ದೇಶವಾದರೂ ಏನು? ಖಾಲಿ ನಿವೇಶನ ಇರಬಾರದು ಎಂದೋ ಅಥವಾ ಬೇಗ ಮನೆ ನಿರ್ಮಿಸಿಕೊಳ್ಳಲಿ ಎಂಬ ಉದ್ದೇಶವೋ ಅಥವಾ ಪಾಲಿಕೆಗೆ ಆದಾಯ ಬರಲಿ ಎಂಬ ಕಾರಣವೋ? ಅಂತೂ ಈಗ ಹೆಚ್ಚಳವಾಗಿರುವ ನಿವೇಶನ ತೆರಿಗೆ ದರ ಸಾಕಷ್ಟು ಜನರಲ್ಲಿ ಗೊಂದಲ ಮೂಡಿಸಿರುವುದಂತೂ ಸತ್ಯ.
ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಮೇ 7 ಕ್ಕೆ ಪಶು ಅಂಬುಲೆನ್ಸ್ ಸೇವೆ ಆರಂಭ
ತೆರಿಗೆ ಪರಿಷ್ಕರಣೆ : ಸರ್ಕಾರ ಗಮನಿಸಲಿ
ಮೂರು ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಣೆಯಾಗುತ್ತದೆ. 2021 ರಿಂದ ಹೊಸ ತೆರಿಗೆ ಜಾರಿಗೆ ಬಂದಿದ್ದು, ಮಾರುಕಟ್ಟೆ ಬೆಲೆ ಆಧರಿಸಿ ಸರ್ಕಾರ ಈ ತೆರಿಗೆ ನಿಗದಿ ಮಾಡುತ್ತದೆ. ಪ್ರಸ್ತುತ ಹೆಚ್ಚಳ ಮಾಡಲಾಗಿರುವ ಈ ತೆರಿಗೆಯನ್ನು ಪರಿಷ್ಕರಿಸಿ ಕಡಿಮೆಗೊಳಿಸುವಂತೆ ಪಾಲಿಕೆಯಲ್ಲಿ ರೆಸಲೂಷನ್ ಮಾಡಿ ಸರ್ಕಾರಕ್ಕೆ ಕಳುಹಿಸ ಲಾಗಿದೆ. ಸರ್ಕಾರ ಶೀಘ್ರ ಕ್ರಮ ವಹಿಸಿ ತೆರಿಗೆ ಪರಿಷ್ಕರಣೆ ಮಾಡಬೇಕು. ಅಲ್ಲದೆ ಅಧಿಕಾರಿಗಳು ಸಹ ತಪ್ಪು ಮಾಹಿತಿ ನೀಡದೆ ಸೂಕ್ತ ನಿರ್ಧರಣೆ ಮಾಡುವತ್ತ ಗಮನ ಹರಿಸಬೇಕು ಎನ್ನುತ್ತಾರೆ ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಜೆ.ಕುಮಾರ್.
PSI ನೇಮಕಾತಿ ರದ್ದು ಮಾಡಿದ ‘ರಾಜ್ಯ ಸರ್ಕಾರ’: ಹೆಚ್ಚಿದ ಆಕ್ರೋಶ, ವ್ಯಾಪಕ ಟೀಕೆ, ಇಂದಿನಿಂದ ಉಪವಾಸ ಸತ್ಯಾಗ್ರಹ
ಕಳೆದ ಮೂರು ವರ್ಷಗಳಿಂದ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ಮಹಾಮಾರಿಯಿಂದ ಇನ್ನೂ ಬದುಕು ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಈಗಷ್ಟೇ ಒಂದಷ್ಟು ಆರ್ಥಿಕ ಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ದಿಢೀರ್ ಹೀಗೆ ತೆರಿಗೆ ಪರಿಷ್ಕರಣೆ ಮಾಡಿ ಅವೈಜ್ಞಾನಿಕ ರೀತಿಯಲ್ಲಿ ದರ ವಿಧಿಸಿದರೆ ನಮ್ಮ ಪಾಡೇನು ಎನ್ನುತ್ತಾರೆ ಕೆಲವು ನಾಗರಿಕರು.
– ಸಾ.ಚಿ ರಾಜಕುಮಾರ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
