ಜೈಲಿನಲ್ಲಿ ಕೋಮು ಸೌಹಾರ್ದತೆ ಮೆರೆದ ಹಿಂದೂ – ಮುಸ್ಲಿಂ ಖೈದಿಗಳು

ದೇಶದಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಮಧ್ಯೆ ದ್ವೇಷದ ಭಾವನೆ ಬಿತ್ತಲಾಗುತ್ತಿರುವುದು ಈಗ ಎಲ್ಲೆಡೆ ಕಂಡು ಬರುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಈ ಘಟನೆಯು ಮಾನವೀಯತೆಯ ಮೇಲಿನ ನಮ್ಮ ನಂಬಿಕೆಯನ್ನು ಪುನರ್ ಸ್ಥಾಪಿಸುತ್ತದೆ.ಹೌದು, ಉತ್ತರ ಪ್ರದೇಶದ ಈ ಜೈಲಿನಲ್ಲಿ ಖೈದಿಗಳು ಕೋಮು ಸೌಹಾರ್ದತೆ ಮೆರೆದಿದ್ದಾರೆ.

ಬಾರಾಬಂಕಿ ಜೈಲಿನಲ್ಲಿ ರಂಜಾನ್ ಸಂದರ್ಭದಲ್ಲಿ ಹಿಂದೂಗಳು ಮತ್ತು ಮುಸ್ಲಿಂ ಖೈದಿಗಳು ಒಟ್ಟಾಗಿ ಉಪವಾಸ ಮುರಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಜೈಲು ಆಡಳಿತ ಸಿಬ್ಬಂದಿಯೇ ಇಫ್ತಾರ್ ಕೂಟ ಆಯೋಜಿಸಿದ್ದರು.

ಹಣದುಬ್ಬರ ದರ ಏರಿಕೆ ಅತಿಯಾಗಿಲ್ಲ: ನಿರ್ಮಲಾ ಸೀತಾರಾಮನ್

ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿವಿಧ ಧರ್ಮಗಳ ನಡುವಿನ ಈ ಸಾಮರಸ್ಯವನ್ನು ಕಂಡು ನೆಟ್ಟಿಗರು ಕೊಂಡಾಡಿದ್ದಾರೆ. ಇದು ಏಕತೆಯ ಶಕ್ತಿ ಅಂತೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಮಂಕಾದ ಕಾಲದಲ್ಲಿ ಹೊರಗಿಗಿಂತ ಜೈಲಿನಲ್ಲಿ ಹೆಚ್ಚು ಮಾನವೀಯತೆ ಉಳಿದಿದೆ ಎಂದು ತೋರುತ್ತದೆ ಅಂತೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link