ನವದೆಹಲಿ :
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಹೋಳಿ ಉಡುಗೊರೆ ನೀಡಬಹುದು. ಮಾರ್ಚ್ 16ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಡಿಎ ಕುರಿತು ತೀರ್ಮಾನವಾಗುವ ಸಾಧ್ಯತೆ ಇದೆ.
ಸಭೆಯಲ್ಲಿ ತುಟ್ಟಿಭತ್ಯೆಯನ್ನ ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಲಾಗುವುದು ಎನ್ನಲಾಗ್ತಿದೆ.
ನರೇಂದ್ರ ಮೋದಿ ಸರ್ಕಾರದ ನಿರ್ಧಾರದಿಂದ 50 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಮತ್ತು 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಅನುಕೂಲವಾಗಲಿದೆ. 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಸರ್ಕಾರವು ಮೂಲ ವೇತನದ ಮೇಲೆ ಡಿಎಯನ್ನ ಲೆಕ್ಕ ಹಾಕುತ್ತದೆ. ಮಾರ್ಚ್ 10ರಂದು ಐದು ರಾಜ್ಯಗಳ ಚುನಾವಣೆಗಳ ಫಲಿತಾಂಶ ಬಂದಿದ್ದು, ಸರ್ಕಾರವು ಡಿಎ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.
ಈಗ ಶೇಕಡಾ 31ರ ದರದಲ್ಲಿ ಲಭ್ಯ
ಸದ್ಯ ಸರ್ಕಾರಿ ನೌಕರರಿಗೆ ಶೇ.31ರಷ್ಟು ಡಿಎ ಸಿಗುತ್ತದೆ. ಶೇಕಡಾ 3ರಷ್ಟು ಹೆಚ್ಚಳವು ಸರ್ಕಾರಿ ನೌಕರರ ವೇತನವನ್ನು ಗರಿಷ್ಠ 20,000ರೂ. ಮತ್ತು ಕನಿಷ್ಠ 6,480ರೂ.ಗಳಷ್ಟು ಹೆಚ್ಚಿಸುತ್ತದೆ.
ಎಐಸಿಪಿಐ (ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ) ದತ್ತಾಂಶದ ಪ್ರಕಾರ, ಡಿಸೆಂಬರ್ 2021ರ ವೇಳೆಗೆ ಡಿಎ ಶೇ.34.04 ಕ್ಕೆ ತಲುಪಿದೆ. ಉದ್ಯೋಗಿಯ ಮೂಲ ವೇತನವು ತಿಂಗಳಿಗೆ 18,000ರೂ.ಗಳಾಗಿದ್ದರೆ, ಹೊಸ ಡಿಎ (34%) ತಿಂಗಳಿಗೆ 6,120ರೂ. ಪಡೆಯುತ್ತದೆ. ಇದೀಗ, ಡಿಎ 31% ಆಗಿದ್ದರೆ 5580 ರೂ. ಪಡೆಯುತ್ತಿದೆ.
ಡಿಎ ಯಾವಾಗ ಪ್ರಾರಂಭವಾಯಿತು?
ನೌಕರರ ಜೀವನ ಮಟ್ಟ ಸುಧಾರಣೆಗೆ ತುಟ್ಟಿಭತ್ಯೆ ನೀಡಲಾಗುತ್ತದೆ. ಪ್ರತಿ ವರ್ಷ ಜನವರಿ ಮತ್ತು ಜುಲೈನಲ್ಲಿ ಡಿಎಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಮೊದಲ ತುಟ್ಟಿಭತ್ಯೆಯನ್ನು 1972ರಲ್ಲಿ ಭಾರತದಲ್ಲಿ ಮುಂಬೈನಲ್ಲಿ ಪರಿಚಯಿಸಲಾಯಿತು. ಇದಾದ ನಂತರ ಕೇಂದ್ರ ಸರ್ಕಾರ ಎಲ್ಲ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ನೀಡಲು ಪ್ರಾರಂಭಿಸಿತು.
ಕಳೆದ ವರ್ಷ ಜುಲೈ ಮತ್ತು ಅಕ್ಟೋಬರ್ ನಲ್ಲಿ ಕೇಂದ್ರ ನೌಕರರ ಡಿಎಯನ್ನು ಎರಡು ಬಾರಿ ಹೆಚ್ಚಿಸಲಾಯಿತು. ಜುಲೈ 2021ರಲ್ಲಿ, ಸರ್ಕಾರವು ತುಟ್ಟಿಪರಿಹಾರ (DR) ಅನ್ನು ಶೇಕಡಾ 17ರಿಂದ ಶೇಕಡಾ 28ಕ್ಕೆ ಹೆಚ್ಚಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
