ಬೆಂಗಳೂರು:
ವಿಶಾಲ್ ಏಪ್ರಿಲ್ 26ರಂದು ನನ್ನ ಮದುವೆ. ದಯವಿಟ್ಟು ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು. ನಿನ್ನನ್ನು ಪ್ರೀತಿಸುತ್ತೇನೆ. ನಾನು ನಿನ್ನ ಕುಸುಮ್(ವಿಶಾಲ್ ‘ಮೇರಿ ಶಾದಿ ಏಪ್ರಿಲ್ 26ಕೋ ಹೈ. ಮುಝೇ ಭಾಗ್ ಕೇ ಲೇ ಜಾನಾ.ತುಮ್ಹಾರಿ ಕುಸುಮ್)… ಇದು ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ 10 ರೂಪಾಯಿ ನೋಟಿನ ಮೇಲೆ ಪ್ರೇಮ ಸಂದೇಶ ಬರೆದಿರುವ ಪರಿ. ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
2022-23ನೇ ಸಾಲಿನ ‘ಶೈಕ್ಷಣಿಕ ವೇಳಾಪಟ್ಟಿ’ ಬಿಡುಗಡೆ: ಮೇ.14ರಿಂದ ಶಾಲೆ ಪ್ರಾರಂಭ, ಅಕ್ಟೋಬರ್.3ರಿಂದ 16 ದಸರಾ ರಜೆ
ಕುಸುಮ್ ಎಂಬಾಕೆ ತನ್ನ ಮನದಲ್ಲಿರುವ ಆಸೆಯನ್ನು 10 ರೂಪಾಯಿ ನೋಟಿನ ಮೂಲಕ ತನ್ನ ಪ್ರಿಯಕರ ವಿಶಾಲ್ ರವಾನಿಸಿದ್ದಾಳೆ. ತನ್ನ ಮದುವೆ ನಿಶ್ಚಯವಾಗಿದೆ. ಆ ಮದುವೆ ಇಷ್ಟ ಇಲ್ಲ. ಎಲ್ಲಿಗಾದರೂ ನಾವಿಬ್ಬರೂ ಓಡಿಹೋಗೋಣ ಎಂದು ಪ್ರಿಯಕರನಿಗೆ ಸಂದೇಶ ರವಾನಿಸಿದ್ದಾಳೆ.
‘ಕೆಜಿಎಫ್ 2’, ‘ಬಾಹುಬಲಿ 2’, ‘RRR’ ದಾಖಲೆ ಮುರಿಯಲು ‘ಪುಷ್ಪ 2’ ಮಾಸ್ಟರ್ ಪ್ಲ್ಯಾನ್
ಆ 10 ರೂಪಾಯಿ ನೋಟಿನ ಚಿತ್ರವನ್ನು ಟ್ವಿಟರ್ನಲ್ಲಿ ವಿಪುಲ್ ಎಂಬುವವರು ಅಪ್ಲೋಡ್ ಮಾಡಿಕೊಂಡಿದ್ದು, ಈ ಸಂದೇಶ ವಿಶಾಲ್ಗೆ ತಲುಪಲಿ. ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್ ಹೆಸರಿನವರಿಗೆ ಟ್ಯಾಗ್ ಮಾಡಿ. ಅದರಲ್ಲಿ ಯಾರಾದರೂ ಕುಸುಮ್ರ ಪ್ರಿಯಕರ ಇದ್ದರೆ ಅವರಿಗೆ ಇದು ತಲುಪಲಿ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಈ ನೋಟಿನ ಮೇಲೆ ಬರೆದ ಪ್ರೇಮ ಸಂದೇಶ ಕಂಡ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
