ಬೆಂಗಳೂರು :
ನಟ ದರ್ಶನ್ ಅವರು ಜೈಲೂಟ ಚೆನ್ನಾಗಿಲ್ಲ, ಮನೆ ಊಟ ಕೊಡಿ ಎಂದು ಪದೇ ಪದೇ ಕೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ಕೋರ್ಟ್ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಕೆ ಆಗಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಬಳಿ ಮನೆ ಊಟ ಕೊಡೋಕೆ ಕೇಳಿದ್ದರು. ಆದರೆ, ಈ ಅರ್ಜಿ ತಿರಸ್ಕರಿಸಲ್ಪಟ್ಟಿದೆ. ಇದನ್ನು ದರ್ಶನ್ ಅವರು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಮಧ್ಯೆ ‘ಆ ದಿನಗಳು’ ಚೇತನ್ ಅವರು ಜೈಲೂಟವನ್ನು ಹೊಗಳಿದ್ದಾರೆ. ‘ನಂಗೆ ಜೈಲೂಟ ಸಖತ್ ಇಷ್ಟ’ ಎಂದಿದ್ದಾರೆ.
ದರ್ಶನ್ ಅವರನ್ನು ಚೇತನ್ ಭೇಟಿ ಮಾಡಿದ್ದು ಕೆಲವೇ ಕೆಲವು ಬಾರಿಯಂತೆ.
ಈ ಬಗ್ಗೆ ಮಾತನಾಡಿರೋ ಅವರು, ‘ದರ್ಶನ್ ಅವರನ್ನು ಎರಡು ಮೂರು ಭೇಟಿ ಮಾಡಿದ್ದೆ ಅಷ್ಟೆ. ಅವರ ಬಗ್ಗೆ ನನಗೆ ಗೊತ್ತಾಗೋದು ಮಾಧ್ಯಮದವರಿಂದ. ನ್ಯಾಯಾಲಯದ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಈ ಪ್ರಕರಣದಲ್ಲಿ ಪೊಲೀಸರು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಪ್ಪು ಮಾಡದೆ ಇದ್ದರೆ ಶಿಕ್ಷೆ ಆಗಬಾರದು’ ಎಂದಿದ್ದಾರೆ ಚೇತನ್.