ವಾಷಿಂಗ್ ಟನ್: 

ಟ್ರಂಪ್ ತಮ್ಮ ಸರ್ಕಾರ ಮಾಡಿದ ಸಾಧನೆಗೆ ತಾವೇ ಮೌಲ್ಯಮಾಪನ ಮಾಡಿಕೊಂಡಿದ್ದು ಅವರೆ ಸ್ವಯಂ ಪ್ರಶಂಸೆ ಮಾಡಿಕೊಂಡಿದ್ದಾರೆ, ತಮಗೆ ತಾವೇ A+ ಅಂಕಗಳನ್ನು ಕೊಟ್ಟುಕೊಂಡಿದ್ದಾರೆ.
ಅಧ್ಯಕ್ಷನಾಗಿ ನಾನು ಅತ್ಯುತ್ತಮ ಕೆಲಸ ಮಾಡುತ್ತಿದ್ದೇನೆ.ನಮ್ಮ ಆರ್ಥಿಕತೆಯೂ ಅತ್ಯುಚ್ಚ ಸ್ಥಿತಿಯಲ್ಲಿದೆ ಎಂದು ಟ್ರಂಪ್ ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನನಗೆ ನಾನೇ ಅಂಕ ಕೊಟ್ಟುಕೊಳ್ಳುವುದನ್ನು ನಾನು ಇಷ್ಟಪಡುವುದಿಲ್ಲ, ಆದರೂ ನಾನು ಅಮೆರಿಕ ಅಧ್ಯಕ್ಷನಾಗಿ ಕೆಲಸ ಮಾಡುತ್ತಿರುವ ವೈಖರಿಗೆ A+ ಅಂಕ ನೀಡುತ್ತೇನೆ, ಅದಕ್ಕಿಂತಲೂ ಹೆಚ್ಚಿನ ಅಂಕ ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








