ಬಗದಾದ್
ಪಶ್ಚಿಮ ಇರಾಕ್ ನ ಅಂಬರ್ ಪ್ರಾಂತ್ಯದಲ್ಲಿ ಭದ್ರತಾ ಪಡೆ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಇಸ್ಲಾಮಿಕ್ ಸ್ಟೇಟ್ ನ ಮೂವರು ಉಗ್ರರು ಮೃತಪಟ್ಟಿದ್ದಾರೆ.
ಇರಾಕ್ ಸೇನೆ ಹಾಗೂ ಅರೆಸೈನಿಕ ಪಡೆ, ರಾಜಧಾನಿ ರಮಾಡಿಯ ಅಲ್ ತುಯೇಬಾ ಪ್ರದೇಶ ಗುಡ್ಡಗಾಡು ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅಂಬರ್ ಪ್ರಾಂತ್ಯದ ಕಮಾಂಡರ್ ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರ ಹಾಗೂ ದ್ವೀಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಅಂಬರ್ ಪ್ರಾಂತ್ಯದಲ್ಲಿ ಐಎಸ್ ಉಗ್ರರು ಸಕ್ರಿಯವಾಗಿದ್ದು, ಸಿರಿಯಾ, ಜೋರ್ಡಾನ್ ಹಾಗೂ ಸೌದಿ ಅರಬ್ ವರೆಗೆ ಅವರ ಚಟುವಟಿಕೆ ವ್ಯಾಪಿಸಿದೆ. ಇತ್ತೀಚಿಗಷ್ಟೆ ಭಯೋತ್ಪಾದಕರ ಗುಂಪೊಂದು ಹಲವು ನಾಗರಿಕರನ್ನು ಅಪಹರಿಸಿ ಅವರ ಕೊಲೆ ಮಾಡಿತ್ತು.
2017ರಲ್ಲಿ ಇರಾಕ್ ತನ್ನನ್ನು ಐಎಸ್ ಮುಕ್ತ ರಾಷ್ಟ್ರ ಎಂದು ಘೋಷಿಸಿಕೊಂಡಿದ್ದು, ದೇಶದ ಆಂತರಿಕ ಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಆದರೆ, ಕೆಲ ಪ್ರದೇಶಗಳಲ್ಲಿ ಅವಿತುಕೊಂಡಿರುವ ಉಗ್ರರು ಸೈನಿಕರ ಮೇಲೆ ಆಗಾಗ ಗೊರಿಲ್ಲಾ ದಾಳಿ ನಡೆಸುತ್ತಿದ್ದಾರೆ.