ಟ್ಯುನಿಸ್
ಇಲ್ಲಿನ ಸಫಕ್ಸ್ ಪ್ರಾಂತ್ಯದಿಂದ 40 ಮೈಲಿ ದೂರದಲ್ಲಿನ ಮೆಡಿಟೇರಿಯನ್ ಸಮುದ್ರಲ್ಲಿ ಶುಕ್ರವಾರ ದೋಣಿಯೊಂದು ಮುಳುಗಿದ್ದು, ಸಹರನ್ ಮೂಲದ ಕನಿಷ್ಠ 70 ಅಕ್ರಮ ವಲಸಿಗರು ಸಾವನ್ನಪ್ಪಿದ್ದಾರೆ.
ಮೀನುಗಾರರು ದೋಣಿ 16 ಜನರನ್ನು ರಕ್ಷಿಸಿದೆ ಎಂದು ಟ್ಯುನೇಷಿಯಾ ಮಾಧ್ಯಮಗಳು ವರದಿ ಮಾಡಿವೆ.
ಈ ಘಟನೆ ವರ್ಷದ ಘೋರ ದುರಂತವಾಗಿದ್ದು, ವಲಸಿಗರು ಅಕ್ರಮವಾಗಿ ಯೂರೋಪ್ ಪ್ರವೇಶಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ.ದೋಣಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
