ಪಾಕ್ ಗೂಢಾಚಾರರ ನೂತನ ನಾಯಕನಾಗಿ ಲೆಫ್ಟಿನೆಂಟ್ ಜನರಲ್ ಅಸಿಮ್ ಮುನಿರ್ ನೇಮಕ

0
34
ಸ್ಲಾಮಾಬಾದ್:
       ನೆರೆಯ ದೇಶ ಪಾಕಿಸ್ಥಾನ ತನ್ನ ದೇಶದ ನೂತನ ಗೂಢಾಚಾರ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಅಸಿಮ್ ಮುನಿರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. 
       ಮುನಿರ್ ಅವರು ಈ ಹಿಂದೆ ಮಿಲಿಟರಿ ಗುಪ್ತಚರ (ಎಂಐ) ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು ಅವರಿಗೆ ಇತ್ತೀಚೆಗಷ್ಠೆ ಲೆಫ್ಟಿನೆಂಟ್ ಜನರಲ್ ಶ್ರೇಣಿಗೆ ಭಡ್ತಿ ನೀಡಲಾಗಿತ್ತು. ಸೇನಾ ಮುಖ್ಯಸ್ಥರಾದ ಜನರಲ್ ಖಮರ್ ಜಾವೇದ್ ಭಾಜ್ವಾ ನೇತೃತ್ವದ ಆರ್ಮಿ ಪ್ರಮೋಷನ್ ಮಂಡಳಿ ಮುನಿರ್ ಅವರ ಭಡ್ತಿಗೆ ಸಮ್ಮತಿಸಿತ್ತು ಎಂದು ಸೇನಾ ಮಾಧ್ಯಮ ವಿಭಾಗ ವರದಿ ಮಾಡಿದೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here