ಲಾಹೋರ್: 

ಪಾಕಿಸ್ತಾನದಿಂದ ಎಂದೂ ಜಗತ್ತು ಕೆಟ್ಟದ್ದನ್ನೇ ಕೆಳುತ್ತಿರುವ ವೇಳೆಯಲ್ಲಿ ಪಾಕಿಸ್ತಾನ ಒಂದು ಒಳ್ಳೆಯ ಕೆಲಸವನ್ನೂ ಮಾಡಿದೆ ಅದೇನೆಂದರೆ 7 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯೂ ಸೇರಿದಂತೆ ಸರಣಿ ಅತ್ಯಾಚಾರ ಪ್ರಕರಣಗಳಿಂದಾಗಿ ಕುಖ್ಯಾತಿ ಪಡೆದಿದ್ದ ಇಮ್ರಾನ್ ಅಲಿ ಎಂಬ ಅಪರಾಧಿಯನ್ನು ಪಾಕಿಸ್ತಾನ ಗಲ್ಲಿಗೇರಿಸಿದೆ.
ಇಂದು ಬೆಳಗ್ಗೆ ಲಾಹೋರ್ ನ ಕೋಟ್ ಲಕಪತ್ ಜೈಲಿನಲ್ಲಿ ಇಮ್ರಾನ್ ಅಲಿಯನ್ನು ನ್ಯಾಯಾಧೀಶರ ಸಮಕ್ಷಮದಲ್ಲಿ ಕೋರ್ಟ್ ಆದೇಶದಂತೆ ಗಲ್ಲಿಗೇರಿಸಲಾಗಿದೆ. ಇಮ್ರಾನ್ ಅಲಿ ಕಸೂರ್ ಜಿಲ್ಲೆಯಲ್ಲಿ 7 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಬಳಿಕ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಅಲ್ಲದೆ ಆಕೆಯ ಶವವನ್ನು ಕಸದ ತೊಟ್ಟಿಗೆ ಎಸೆದು ಪರಾರಿಯಾಗಿದ್ದ.
ಅತ್ಯಾಚಾರ ನಡೆದು ಸುಮಾರು 2 ವಾರಗಳ ಬಳಿಕ ಇಮ್ರಾನ್ ಅಲಿಯನ್ನು ಬಂಧಿಸಲಾಗಿತ್ತು. ಈ ವೇಳೆಗಾಗಲೇ ಪಾಕಿಸ್ತಾನದಲ್ಲಿ ಬಾಲಕಿ ಮೇಲಿನ ಹತ್ಯಾಚಾರ ಸುದ್ದಿ ವ್ಯಾಪಕ ಸುದ್ದಿಗೆ ಗ್ರಾಸವಾಗಿ ಭಾರಿ ಪ್ರತಿಭಟನೆಗೂ ಕಾರಣವಾಗಿತ್ತು. ಇಮ್ರಾನ್ ಅಲಿ ಬಂಧನದ ಬಳಿಕ ಆತನ್ನು ವಿಚಾರಣೆಗೊಳಪಡಿಸಿದಾಗ ಆತ ಮತ್ತಷ್ಟು ಅತ್ಯಾಚಾರಗಳ ಕುರಿತು ಬಾಯಿಬಿಟ್ಟಿದ್ದ. ಜಿಲ್ಲೆಯಲ್ಲಿ ನಡೆದಿದ್ದ ವಿವಿಧ ಸರಣಿ ಅತ್ಯಾಚಾರ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದು ಬಯಲಾಗಿತ್ತು.
