ಭಾರತ ದೇಶವು ಕೊಟ್ಯಂತರ ಯುವಕರಿಂದ ಕೂಡಿದ ಯುವ ಭಾರತ ಅಭಿವೃದ್ಧಿ ಆಗಬೇಕೆಂದರೆ ಅದು ಬಿಸಿ ರಕ್ತದಿಂದ ಕೂಡಿದ ಯುವಕರಿಂದಲೆ ಸಾಧ್ಯ. ಒಂದು ರಾಷ್ಟçದ ಸರ್ವತೋಮುಖ ಬೆಳವಣಿಗೆಗೆ ಯುವಕರ ಪಾತ್ರ ಬಹುಪಾಲು. ಯುವಕರೇ ದೇಶದ ಸಂಪತ್ತು ಎಂದು ಹೇಳಿದರೂ ತಪ್ಪಾಗಲಾರದು. ಪ್ರಸ್ತುತ ನಿರುದ್ಯೋಗ ಸಮಸ್ಯೆ ದೇಶದಲ್ಲಿ ಬಹಳಷ್ಟು ಉಂಟಾಗಿ ಪದವಿ ಪಡೆದ ಕೋಟ್ಯಂತರ ಯುವಕರನ್ನು ಕಂಗಾಲಾಗಿಸಿದೆ.
ಉದ್ಯೋಗವು ಸಮಾಜದಲ್ಲಿ ಒಬ್ಬ ವ್ಯಕ್ತಿಯ ಪಾತ್ರವಾಗಿರುತ್ತದೆ. ಉದ್ಯೋಗವೆಂದರೆ ಒಬ್ಬ ವ್ಯಕ್ತಿಯ ಮಾನಸಿಕ ಅಥವಾ ದೈಹಿಕ ಶ್ರಮದ ಅಗತ್ಯವಿರುವ ಒಂದು ಚಟುವಟಿಕೆಯಾಗಿದೆ. ಒಬ್ಬ ವ್ಯಕ್ತಿಯು ನಿರ್ದಿಷ್ಟ ಬಗೆಯ ಉದ್ಯೋಗಕ್ಕಾಗಿ ತರಬೇತಿ ಪಡೆದಿದ್ದರೆ ಅವರು ಒಂದು ವೃತ್ತಿಯನ್ನು ಹೊಂದಿರಬಹುದು. ಸಾಮಾನ್ಯವಾಗಿ ಉದ್ಯೋಗವು ಒಬ್ಬರ ವೃತ್ತಿ ಜೀವನದ ಉಪ ವರ್ಗವಾಗಿದೆ.
ಪ್ರಸ್ತುತ ದಿನಗಳಲ್ಲಿ ಆಗುತ್ತಿರುವ ಧಾರ್ಮಿಕ ಸಾಮಾಜಿಕ ರಾಜಕೀಯ ಆಧುನೀಕರಣ ತಾಂತ್ರಿಕ ಯುಗದಲ್ಲಿ ಉದ್ಯೋಗ ಗಳಿಸುವುದು ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರಿ ನೌಕರಿಗಳ ಬಗ್ಗೆ ಮಾತನಾಡುವ ಹಾಗೆ ಇಲ್ಲ ಬಿಡಿ. ಏಕೆಂದರೆ ಸರ್ಕಾರ ನೇಮಕಾತಿ ಮಾಡುವ ಹುದ್ದೆಗಳನ್ನು ಹಣಕ್ಕೆ ಮಾರುತ್ತಿದ್ದಾರೆ.
ಹಲವಾರು ಪದವಿ ಇದ್ದರೂ, ಸುಮಾರು ವರ್ಷಗಳವರೆಗೆ ಅಭ್ಯಾಸ ಮಾಡಿದ ಸಾಮಾನ್ಯ ವರ್ಗದ ಯುವಕರು ಈ ಭ್ರಷ್ಟ ಅಧಿಕಾರಿ ಮತ್ತು ರಾಜಕಾರಣಿಗಳಿಗೆ ಲಂಚ ನೀಡದೆ ಉದ್ಯೋಗ ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಈ ಸರ್ಕಾರಿ ಹುದ್ದೆಗಳಲ್ಲಿ ಪ್ರತಿ ಹುದ್ದೆಗೆ ಇಂತಿಷ್ಟು ಲಂಚದ ಶ್ರೇಣಿ ಎಂದು ವರ್ಗೀಕರಿಸಲಾಗಿದೆ.
ಇತ್ತೀಚೆಗಂತೂ ಹಣವಿರುವವರು ಯಶಸ್ವಿಯಾಗಿ ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುತ್ತಾರೆ, ಹೊರತು ಸಾಮಾನ್ಯ ವರ್ಗದ ಜನರು ಕೆಳ ದರ್ಜೆಯ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಪದವಿ ಮುಗಿದ ನಂತರ ಸರ್ಕಾರಿ ಹುದ್ದೆಗಳನ್ನು ಕಾಯುತ್ತ ಕೂತರೆ ವಯಸ್ಸಿನ ಜೊತೆಗೆ ಸಮಯವೂ ಮುಗಿದು ಹೋಗಿರುತ್ತದೆ. ಆದ ಕಾರಣ ಇತ್ತೀಚಿನ ದಿನಗಳಲ್ಲಿ ಖಾಸಗೀಕರಣವು ಬಹಳಷ್ಟು ಸದ್ದು ಮಾಡುತ್ತಿದೆ. ಸುಮಾರು ಲಕ್ಷಾಂತರ ಕಂಪನಿಗಳು ದೇಶಾದ್ಯಂತ ಬೆಳೆದು ನಿಂತಿವೆ ಖಾಸಗಿ ಕ್ಷೇತ್ರದಲ್ಲಿ ಲಕ್ಷಾಂತರ ನೇಮಕಾತಿ ನಡೆಯುತ್ತಿದೆ. ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಪದವಿಯ ಜೊತೆಗೆ ತಮ್ಮ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು.
ಉತ್ತಮ ಕೌಶಲ್ಯ ಅಗತ್ಯ;
ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂದರೆ ಅಷ್ಟೊಂದು ಸುಲಭದ ಮಾತಲ್ಲ. ಅಂಕಪಟ್ಟಿಯಲ್ಲಿ ಉತ್ತಮವಾದ ಅಂಕವಿದ್ದರೆ ಸಾಲದು, ಜೊತೆಗೆ ವಿವಿಧ ರೀತಿಯ ಕೌಶಲ್ಯಗಳಾದ ಸಂವಹನ, ಉತ್ತಮ ವ್ಯಕ್ತಿತ್ವ, ತಾಂತ್ರಿಕ ಮತ್ತು ಗಣಕಯಂತ್ರ ಕಲೆ ಪ್ರಮುಖವಾಗುತ್ತದೆ.
ಸಂವಹನ ಕಲೆ
ಖಾಸಗಿ ಕ್ಷೇತ್ರದಲ್ಲಿ ಸಂವಹನ ಕಲೆಯು ಬಹಳಷ್ಟು ಮುಖ್ಯವಾದ ಪಾತ್ರವಹಿಸುತ್ತದೆ. ವಿವಿಧ ಭಾಷೆಗಳ ಜೊತೆಗೆ ನಮ್ಮ ಬಾಂಧವ್ಯ ಮತ್ತು ಇತರರೊಂದಿಗೆ ಹೇಗೆ ಮಾತನಾಡುವುದು ಬಹಳಷ್ಟು ಮುಖ್ಯವಾಗುತ್ತದೆ. ಇತ್ತೀಚಿನ ಆಧುನಿಕ ಯುಗದಲ್ಲಿ ಖಾಸಗಿ ಕ್ಷೇತ್ರದಲ್ಲಿ ಕನಿಷ್ಠ ಮೂರು ಭಾಷೆಗಳ ಕಲಿಕೆಯು ಬಹಳಷ್ಟು ಪ್ರಮುಖ ಪಾತ್ರ ವಹಿಸುತ್ತಿದೆ.
ಉತ್ತಮ ವ್ಯಕ್ತಿತ್ವ
ವ್ಯಕ್ತಿತ್ವವೆಂದರೆ ಇತರೊಂದಿಗೆ ಸ್ನೇಹ ಪ್ರೀತಿ ಬಾಂಧವ್ಯದಿAದ ಕೂಡಿರುತ್ತದೆ. ಹಿರಿಯರೊಂದಿಗೆ ಕಿರಿಯರೊಂದಿಗೆ ಅಪರಿಚಿತರೊಂದಿಗೆ ನಮ್ಮ ನಡವಳಿಕೆ ಬಹಳಷ್ಟು ಪ್ರಮುಖ ಪಾತ್ರ ವಹಿಸುತ್ತದೆ.
ಕಂಪ್ಯೂಟರ್ ಮತ್ತು ತಾಂತ್ರಿಕ ಜ್ಞಾನ;
ಆಧುನಿಕ ಜಗತ್ತು ಬಹಳಷ್ಟು ಮುಂದುವರೆಯುತ್ತಿದೆ. ಅದಕ್ಕಾಗಿ ತಂತ್ರಜ್ಞಾನ ಮತ್ತು ಕಂಪ್ಯೂಟರ್ ಜ್ಞಾನ ಬಹಳಷ್ಟು ಉಪಯುಕ್ತವಾಗಿದೆ. ಒಟ್ಟಾರೆ ಹೇಳುವುದಾದರೆ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಬೇಕೆಂದರೆ ಕಂಪ್ಯೂಟರ್ ಜ್ಞಾನ ಅತ್ಯಗತ್ಯ.
ಹಲವಾರು ಪದವಿಗಳಾದ ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ, ಎಂಎಸ್‌ಸಿ, ಎಂಬಿಎ, ಎಂಕಾಂ ಅಂತಹ ವೈಜ್ಞಾನಿಕ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸಗಳನ್ನು ಪಡೆಯಬೇಕೆಂದರೆ ತಮ್ಮಲ್ಲಿರುವ ಪದವಿಯ ಜೊತೆಗೆ ಕೌಶಲ್ಯಗಳನ್ನು ರೂಢಿಸಿಕೊಂಡರೆ ಸುಲಭವಾಗಿ ಗಿಟ್ಟಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಗೀಳಿನಿಂದ ದೂರವಿದ್ದು, ಕೌಶಲ್ಯ ಅಭಿವೃದ್ಧಿಯ ಕಡೆಗೆ ಗಮನಹರಿಸಿದರೆ ಯಾವುದೇ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವುದರಲ್ಲಿ ಕಷ್ಟ ಆಗಲಾರದು.
ಮಲ್ಲೇಶ ನಾಯ್ಕ ಎಂ.
ಉಪನ್ಯಾಸಕರು, 9632818431
ಸಿದ್ದು ಬಿ ಎಸ್, ಸೂರನಹಳ್ಳಿ
ತಿಪಟೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ