ಉತ್ತರಪ್ರದೇಶ :
ಸ್ಕಾರ್ಪಿಯೋ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಪರಿಣಾಮ 9 ಜನ ಸಾವನ್ನಪ್ಪಿರುವ ದುರ್ಘಟನೆ ಲಕ್ನೋ – ಪ್ರಯಾಗ್ರಾಜ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ರಾಜಸ್ಥಾನದಿಂದ ಬಿಹಾರಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬಲಿಯಾದವರಲ್ಲಿ ನಾಲ್ವರು ಪುರುಷರು, ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ.
ಮೃತಪಟ್ಟವರು ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದು, ಬಿಹಾರ ರಾಜ್ಯಕ್ಕೆ ತಮ್ಮ ಮನೆಗೆ ಸ್ಕಾರ್ಪಿಯೋ ದಲ್ಲಿ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ.