ಐಐಎಸ್‌ಸಿ ಜೊತೆ ವಿಪ್ರೊ ಡೀಲ್ : ಭಾರತಕ್ಕೆ ‘ಡ್ರೈವರ್‌ಲೆಸ್’ ಕಾರು!!!

ಬೆಂಗಳೂರು :

      ವಿದೇಶಗಳಲ್ಲಿ ಡ್ರೈವರ್ ಲೆಸ್ ಕಾರುಗಳ ಸಂಶೋಧನೆ ನಡೆಯುತ್ತಿದ್ದು, ಈಗ ಈ ಡ್ರೈವರ್ ಲೆಸ್ ಕಾರುಗಳು ಭಾರತಕ್ಕೂ ಎಂಟ್ರಿ ಕೊಡಲಿವೆಯಂತೆ.

      ಹೌದು, ಭವಿಷ್ಯದ ಕಾರು ಎಂದೇ ಬಿಂಬಿತವಾಗಿರುವ ಡ್ರೈವರ್ ರಹಿತ ಸ್ವಯಂಚಾಲಿತ ಕಾರುಗಳನ್ನು ರಸ್ತೆಗಿಳಿಸಲು ಪ್ರತಿಷ್ಠಿತ ವಿಪ್ರೋ ಸಂಸ್ಥೆ ಯೋಜನೆ ರೂಪಿಸಿದೆ. ಈ ಸಂಬಂಧ ಐಐಎಸ್‌ಸಿ ಜೊತೆ ವಿಪ್ರೋ ಒಪ್ಪಂದ ಮಾಡಿಕೊಂಡಿದೆ. ಕಾರು ತಯಾರಿಕೆಗೆ ‘ಮೆಟಲ್ ತ್ರಿಡಿ ಪ್ರಿಂಟಿಂಗ್’ ಯಂತ್ರವನ್ನು ನಿರ್ಮಿಸುವ ಸಂಬಂಧ ವಿಪ್ರೋ ಹಾಗೂ ಐಐಎಸ್‌ಸಿ ಜಂಟಿಯಾಗಿ ಯೋಜನೆ ಕೈಗೆತ್ತಿಕೊಂಡಿದೆ. ಡ್ರೈವರ್‌ಲೆಸ್‌ ತಂತ್ರಜ್ಞಾನದ ಈ ಕಾರು, ಸಂಪೂರ್ಣ ಸ್ವದೇಶೀ ಕಾರ್ ಆಗಿರಲಿದೆ ಎಂದು ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀ ಪ್ರೇಂಜೀ ಸ್ಪಷ್ಟಪಡಿಸಿದ್ದಾರೆ.

Image result for driver less car

     ಜಿಪಿಎಸ್‌ ಬಳಸಿಕೊಂಡು ಹೇಳಿದ ಸ್ಥಳಕ್ಕೆ ತಾನೇ ತಾನಾಗಿ ಸಂಚರಿಸುವ ಕಾರುಗಳನ್ನು ವಿದೇಶಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇನ್ಮುಂದೆ ಸ್ವದೇಶಿ ತಂತ್ರಜ್ಞಾನದಲ್ಲೂ ಉತ್ಪಾದಿಸಲು ಒಪ್ಪಂದವಾಗಿದೆ.

     ಇನ್ನು ಈಗಾಗಲೇ ಡ್ರೈವರ್‌ಲೆಸ್ ಕಾರುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲು ಬಿಎಂಡಬ್ಲೂ, ನಿಸ್ಸಾನ್, ಫೋರ್ಡ್ ಸೇರಿದಂತೆ ಹಲವು ಪ್ರತಿಷ್ಠಿತ ಕಾರು ತಯಾರಿಕಾ ಕಂಪನಿಗಳು ಪೈಪೋಟಿಯಲ್ಲಿವೆ.

      ತಂತ್ರಜ್ಞಾನ ಬೆಳೆದಂತೆಲ್ಲ ನಾವು ಜೀವನವನ್ನು ಸರಳೀಕರಣಗೊಳಿಸುವ ಕಡೆ ಗಮನ ಹರಿಸುತ್ತೇವೆ. ಅದೇ ನಿಟ್ಟಿನಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿದ್ದು, ತಂತ್ರಜ್ಞಾನ ಕೂಡ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap