ವಾಷಿಂಗ್ಟನ್ :
ಫೇಸ್ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿಕೊಳ್ಳಲಿಲ್ಲವೆಂದು ವ್ಯಕ್ತಿ ತನ್ನ ಮಾಜಿ ಬಾಸ್‍ಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಅಮೆರಿಕದ ಉತ್ತರ ಡಕೋಟದಲ್ಲಿ ನಡೆದಿದೆ.
ಅಮೆರಿಕದ ಉತ್ತರ ಡಕೋಟಾದ 29 ವರ್ಷದ ಕ್ಯಾಲೆಬ್ ಬರ್ಸಿಕ್ ತನ್ನ ಮಾಜಿ ಬಾಸ್‍ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ರಿಕ್ವೆಸ್ಟ್ ಕಳುಹಿಸಿ ಎರಡು ದಿನವಾದರೂ ಎಕ್ಸೆಪ್ಟ್ ಮಾಡಿಕೊಳ್ಳದ್ದಕ್ಕೆ ಅವರ ಮನೆಗೇ ತೆರಳಿದ್ದಾನೆ. ಅಲ್ಲದೆ ಮಾಜಿ ಬಾಸ್ ಮನೆಗೆ ತೆರಳಿ ಮನೆ ಬಾಗಿಲನ್ನು ಕಾಲಿಂದ ಒದ್ದು, ನನ್ನ ಫ್ರೆಂಡ್ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿಕೊಳ್ಳದಿದ್ದಲ್ಲಿ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಆಘಾತಕಾರಿ ಘಟನೆ ಬಳಿಕ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಮಾಜಿ ಬಾಸ್ ಮನೆಗೆ ತೆರಳಿ ಬಾಗಿಲಿಗೆ ಒಡೆಯುತ್ತಿರುವ ಬರ್ಸಿಕ್ ನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೋರ್ಟ್ ಕೂಡ ದೃಶ್ಯವನ್ನು ಗಮನಿಸಿ ಬರ್ಸಿಕ್ಗೆ ಶಿಕ್ಷೆ ವಿಧಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
