ಜಮ್ಮು:
ಗಡಿನಿಯಂತ್ರಣ ರೇಖೆಯ ಸಮೀಪ ಭಾರತೀಯ ಸೇನೆ ನಡೆಸಿದ ಪ್ರತಿದಾಳಿಗೆ ಹತ್ತು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ.
ಜಮ್ಮು-ಕಾಶ್ಮೀರದ ರಾಜೌರಿ ಮತ್ತು ಪೂಂಚ್ ಜಿಲ್ಲೆಯ ಗಡಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಗುರಿಯಾಗಿರಿಸಿಕೊಂಡು ಶೆಲ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಮಂಗಳವಾರ ತಿರುಗೇಟು ನೀಡಿದ್ದು, ಗಡಿನಿಯಂತ್ರಣ ರೇಖೆ ಸಮೀಪದ 7 ಪಾಕಿಸ್ತಾನಿ ಪೋಸ್ಟ್ ಗಳನ್ನು ಧ್ವಂಸಗೊಳಿಸಿದೆ.
ಭಾರತೀಯ ಸೇನೆ ದಾಳಿಗೆ ಪಾಕಿಸ್ತಾನದ ಸುಬೇದಾರ್ ಮುಹಮ್ಮದ್ ರಿಯಾಜ್, ಲ್ಯಾನ್ಸ್ ಹವಾಲ್ದಾರ್ ಅಝೀಜ್ ಉಲ್ಲಾ ಮತ್ತು ಶಾಹಿದ್ ಮನ್ ಸಿಬ್ ಸಾವನ್ನಪ್ಪಿರುವುದಾಗಿ ಪಾಕ್ ಟ್ವೀಟ್ ಮಾಡುವ ಮೂಲಕ ತಿಳಿಸಿದೆ. ಆದರೆ 10 ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ವರದಿಯನ್ನು ಅಲ್ಲಗಳೆದಿದೆ.
ಪಾಕಿಸ್ತಾನವು ಸಾವಿನ ಸಂಖ್ಯೆಯನ್ನು ಮತ್ತು ತಮಗಾದ ಹಾನಿಯ ಪ್ರಮಾಣವನ್ನು ಕಡಿಮೆ ಮಾಡಿ ಹೇಳುತ್ತಿರುವುದು ಇದೇ ಮೊದಲಲ್ಲ. ಜೊತೆಗೆ ನಾವು ಕೂಡ ಯಶಸ್ವಿಯಾಗಿ ಪ್ರತಿದಾಳಿ ನಡೆಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ.
Indian troops resorted to unprovoked fire in Rakhchakri, Rawalakot Sector along Line of Control( LOC). Subedar Muhammad Riaz, Lance Havaldar Aziz Ullah and Sepoy Shahid Mansib embraced Shahadat, while one soldier got injured.
Pakistan army responded effectively. #PakistanArmy— Dr Mohammad Faisal (@DrMFaisal) April 2, 2019
ಪಾಕಿಸ್ತಾನದ 10 ಸೈನಿಕರು ಸತ್ತಿದ್ದಾರೆ ಎಂಬ ಸುದ್ದಿ ಇದ್ದರೂ, ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ, ಗಡಿಯ ಮುಂಚೂಣಿ ನೆಲೆಗಳಲ್ಲಿ ಕಾವಲು ಕಾಯುತ್ತಿದ್ದ ತನ್ನ ಮೂವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಅಪರೂಪವಾಗಿ ಪಾಕಿಸ್ತಾನವು ಒಪ್ಪಿಕೊಂಡಿದೆ. ಪಾಕಿಸ್ತಾನ ವಿದೇಶಾಂಗ ವಕ್ತಾರ ಮಹಮದ್ ಫೈಸಲ್ ಅವರು ಇದನ್ನು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಗಡಿಯಲ್ಲಿ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿ ಹೆಚ್ಚಿರುವುದರಿಂದ, ಗಡಿಯ ಐದು ಕಿಮೀ ವ್ಯಾಪ್ತಿಯ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಪೂಂಛ್ ವಲಯದ ಜಿಲ್ಲಾ ಮ್ಯಾಜಿಸ್ಟ್ರೇಟರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ