​ಚಂದ್ರಯಾನ-2 : ಕೊನೆಗೂ ಪತ್ತೆಯಾಯ್ತು ವಿಕ್ರಮ್ ಲ್ಯಾಂಡರ್!!

ವಾಷಿಂಗ್ಟನ್:

     ಇಸ್ರೋ ಕನಸಿನ ಕೂಸಾಗಿದ್ದ ಚಂದ್ರಯಾನ 2 ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಮೂರು ತಿಂಗಳ ನಂತರ ನಾಸಾ ಪತ್ತೆಹಚ್ಚಿದೆ.

     ಹೌದು ನಾಸಾದ ಲೂನಾರ್ ರೆಕೊನಸೆನ್ಸ್ ಆರ್ಬಿಟರ್ (ಎಲ್‌ಆರ್‌ಓ) ಕ್ಯಾಮೆರಾ ಸೆರೆ ಹಿಡಿದ ಚಿತ್ರವನ್ನು ಮಂಗಳವಾರ ಮುಂಜಾನೆ ಬಿಡುಗಡೆ ಮಾಡಲಾಗಿದ್ದು, ಇದರ ವಿಶ್ಲೇಷಣೆ ನಡೆಸಿದಾಗ ಸೆಪ್ಟೆಂಬರ್ 7ರಂದು ಚಂದ್ರನ ಮೇಲ್ಮೈನಲ್ಲಿ ಇಳಿಯುವ ಪ್ರಯತ್ನದಲ್ಲಿ ಧ್ವಂಸವಾದ ವಿಕ್ರಮ್ ಲ್ಯಾಂಡರ್‌ನ ಅವಶೇಷಗಳು ಪತ್ತೆಯಾಗಿವೆ.

     ನೀಲಿ ಮತ್ತು ಹಸಿರು ಚುಕ್ಕೆಗಳಿರುವ ಚಂದ್ರನ ಚಿತ್ರವು ವಿಕ್ರಮ್‌ನ ಪರಿಣಾಮ ಬೀರಿದ ಬಿಂದುವನ್ನು ಮತ್ತು ಸಂಬಂಧಿತ ಅವಶೇಷಗಳನ್ನು ತೋರಿಸುತ್ತದೆ” ಎಂದು ನಾಸಾ ಹೇಳಿದೆ.

      ಚಂದ್ರಯಾನ-2 ಯೋಜನೆಯ ಕೊನೆ ಹಂತದಲ್ಲಿ ವಿಕ್ರಮ್​ ಲ್ಯಾಂಡರ್ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತು. ವಿಕ್ರಮನ ಹುಡುಕಾಟಕ್ಕೆ ನಾಸಾ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಆದರೂ ಲ್ಯಾಂಡರ್ ಪತ್ತೆಯಾಗಿರಲಿಲ್ಲ.

      ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ನಾಸಾದ ಲುನಾರ್ ರಿಕನಸೈನ್ಸ್​​ ಆರ್ಬಿಟರ್​(LRO) ಸದ್ಯ ವಿಕ್ರಮ್​​ ಲ್ಯಾಂಡರ್​ ಪತ್ತೆ ಮಾಡಿದೆ. ಈ ಮೂಲಕ ಇಸ್ರೋ ವಿಜ್ಞಾನಿಗಳು ಸೇರಿದಂತೆ ಕೋಟ್ಯಂತರ ಭಾರತೀಯರ ಅನುಮಾನಗಳಿಗೆ ಉತ್ತರ ದೊರೆತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link