ನಾಳೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಇಮ್ರಾನ್ ಭೇಟಿ!!

ಇಸ್ಲಾಮಾಬಾದ್​: 

      ಪಾಕ್​​ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಫರಾಬಾದ್​​ಗೆ ನಾಳೆ ಅಲ್ಲಿನ ಪ್ರಧಾನಿ ಇಮ್ರಾನ್​ ಖಾನ್​ ಪ್ರಯಾಣ ಬೆಳೆಸಲಿದ್ದು, ಅಲ್ಲಿನ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

      ಪಾಕ್ ನಲ್ಲಿ  ನಾಳೆ ಪಾಕ್​​ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಿದ್ದು, ಈ ವೇಳೆ ಇಮ್ರಾನ್​ ಖಾನ್​ ಮುಜಫರಾ​ಬಾದ್​​ನಲ್ಲಿ ಮಾತನಾಡಲಿದ್ದಾರೆ. ನಾಳೆ ಇಮ್ರಾನ್​ ಖಾನ್​ ಜತೆ ಅನೇಕ ಸಚಿವ ಸಂಪುಟದ ಮಂತ್ರಿಗಳು ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.

      ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370 ರದ್ದುಗೊಳಿಸಿದ ಬಳಿಕ ಇದೇ ವಿಷಯವನ್ನಿಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಉದ್ಭವ ಮಾಡುವ ಹುನ್ನಾರ ಮಾಡುತ್ತಿದ್ದ ಪಾಕ್​ಗೆ ಇದೀಗ ಅಮೆರಿಕ ಸಹಾಯ ಮಾಡದಿರಲು ನಿರ್ಧರಿಸಿರುವುದು ಹಾಗೂ ಚೀನಾ ಅದರ ಬೆನ್ನಿಗೆ ನಿಲ್ಲಲ್ಲು ಹಿಂದೇಟು ಹಾಕಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

      ಈ ವೇಳೆ, ಭಾರತ ವಿರೋಧಿ ರ‍್ಯಾಲಿ, ಕಾಶ್ಮೀರ್​ ಆವಾಜ್​ ಸಭೆಗಳಲ್ಲಿ ಅವರು ಭಾಗಿಯಾಗಿ ಮಾತನಾಡಲಿದ್ದಾರೆ. ಆರ್ಟಿಕಲ್​ 370 ರದ್ದುಗೊಳ್ಳುತ್ತಿದ್ದಂತೆ ಆಗಸ್ಟ್​ 15ನ್ನು ಕಪ್ಪು ದಿನವನ್ನಾಗಿ ಆಚರಿಸಲು ಪಾಕ್ ನಿರ್ಧಾರಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap