ನಿನ್ನ ನೆನೆದಾಗಲೆಲ್ಲ ನನ್ನ ಕಣ್ಣ
ಹನಿಯೊಂದು ಇಳೆಗೆ
ಜಾರಿಬಿಡುತ್ತದೆ!
ಆಸ್ಥೆಯಿಂದ ಬರೆಯಲು
ಕೂತಾಗಲೆಲ್ಲ ಲೇಖನಿಯೂ
ನಿನ್ನ ಹೆಸರೇ ಬರೆಯುತ್ತಿದೆ!
ಈಗೀಗ ಹೃದಯದ ಪ್ರತೀ
ಬಡಿತದಲ್ಲೂ ನಿನ್ನ ಹೆಸರೇ
ಪ್ರತಿಧ್ವನಿಸುತ್ತಿದೆ!
ಗೌಜು ಗದ್ದಲದ ಮಧ್ಯೆಯೂ ನಿನ್ನ
ಕಾಲಂದುಗೆಯ ಸದ್ದು
ಎನ್ನ ಕರ್ಣಗಳಲಿ
ಅನುರಣಿಸುತ್ತಿದೆ!
ಇನ್ನೂ…
ಹಗಲು-ರಾತ್ರಿಗೆ ಏನೂ ವ್ಯತ್ಯಾಸ ಕಾಣದಾಗಿದೆ
ಗೆಳತಿ
ನಿನ್ನ
ನೆನೆನೆನೆದು!
-ರುದ್ರಸ್ವಾಮಿ ಹರ್ತಿಕೋಟೆ
