ಬೆಳಕಿನೆಡೆಗೆ…..

0
60

 ಬೆಳಗಿದೆ ಭವ್ಯಧರೆ ಭಕ್ತಿ ಭಾವದಿ ಮನುಕುಲದ ಉದ್ದಾರದೆಡೆಗೆ
ಕರಗಿದೆ ಅಜ್ಞಾನದ ಬರದ ನೊರೆ ದಿಟ ನಿರ್ದಾರದಿ
ತ್ರಿವಿದ ದಾಸೋಹಿಗಳ ಪಾದಗಳಡಿಯಲಿ
ನೂರುಂಟು ಜಾತಿ,ನೂರುಂಟು ಭೇದ, ನೂರುಂಟು ಜಗದಿ…

ವೇದ,ಘೋಷ,ಮಂತ್ರ ಪಠಣಗಳೊಂದೆ
ಭಜಿಸಿ ನುಡಿದಿವೆ ಮನುಕುಲವೊಂದೆ
ಸ್ವರ್ಗವೆಂಬ ಧರೆ ಸಿದ್ದಗಂಗೆಯ ಗುರು ಪಾದ ಚರಣದಲಿ..

ಭಕ್ತಿ ಭಾವದಿ ಹೃದಯಗಳು ತುಂಬಿವೆ
ಜ್ಙಾನ ಬೆಳಗಿ ಸುಜ್ಙಾನದೆಡೆಗೆ ಅಜ್ಙಾನವ ಸೀಳಿ..ಅಂತರಾತ್ಮದ ಬೆಳಕು ಪಳಪಳಿಸುತ್ತಿದೆ..
ಗಂಗೆತನುಜರ ಆಶೀರ್ವಚನಗಳಲಿ…

ಕಂಡು ಕಾಣದ ದೇವರ ಕಂಡೆ
ಗರ್ಭ ಗುಡಿಗಳಲಿ,ಶಿಕರಗಳಲಿ,ಗಿರಿಕಂದರಗಳಲಿ
ನಡೆವ ದೇವರ ಕಂಡೆ ಸಿದ್ದಗಂಗೆಯ ಸನ್ನಿಧಿಯಲ್ಲಿ, ದಾಸೋಹ ದಲ್ಲಿ, ಗುರುಗಳ
ಪಾದಸ್ಪರ್ಷದಲಿ
ಶತಮಾನ ಕಂಡ ಶತಾಯುಶಿ ಗುರುವರ್ಯ 
ಶ್ರೀ ಶ್ರೀ ಶ್ರೀ ಶಿವ ಕುಮಾರ ಸ್ವಾಮಿ ಗಳಪಾದಾರವಿಂದಕ್ಕೆ
ಶಿರಬಾಗಿ ನಮಸುವೆ ಅನಂತ ಭಾವದಿ ನನ್ನ ಬಾಳುಬೆಳಗಿದ್ದಕ್ಕೆ ,ಕೈ ಹಡಿದು ನಡೆಸಿದ್ದಕೆ……

-ಸತೀಶ್ ಎನ್ ಗರಣಿ

LEAVE A REPLY

Please enter your comment!
Please enter your name here