ಕೆಜಿಎಫ್ ಚಾಪ್ಟರ್ 2 ದಾಖಲೆ: ಅತೀ ಹೆಚ್ಚು ಗಳಿಕೆ ಕಂಡ ಭಾರತದ ಟಾಪ್ 10 ಸಿನಿಮಾ ಇವು

ನವದೆಹಲಿ: 

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಗೂ ಮುನ್ನ ಹಾಗೂ ತೆರೆ ಕಂಡ ನಂತರ ಭರ್ಜರಿ ದಾಖಲೆಗಳನ್ನು ಬರೆದಿದೆ. ಈಗಾಗಲೇ ಕೆಜಿಎಫ್ 2 ಚಿತ್ರ ಒಂದು ಸಾವಿರ ಕೋಟಿ ರೂಪಾಯಿ ಕ್ಲಬ್ ಗೆ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಾಗೂ ಜಾಗತಿಕವಾಗಿ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರರಂಗದ ನಾಲ್ಕನೇ ಸಿನಿಮಾವಾಗಿದೆ.ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಜರಂಗಿ ಭಾಯಿಜಾನ್ ಮತ್ತು ಸೀಕ್ರೇಟ್ ಸೂಪರ್ ಸ್ಟಾರ್ ಚಿತ್ರಗಳ ದಾಖಲೆಗಳನ್ನು ಮುರಿದಿದೆ. ಭಜರಂಗಿ ಭಾಯಿಜಾನ್ ಜಾಗತಿಕವಾಗಿ 969 ಕೋಟಿ ರೂಪಾಯಿ ಗಳಿಸಿದ್ದು, ಸೀಕ್ರೆಟ್ ಸೂಪರ್ ಸ್ಟಾರ್ ಜಾಗತಿಕವಾಗಿ 977 ಕೋಟಿ ರೂಪಾಯಿ ಗಳಿಕೆ ಕಂಡಿತ್ತು.

ಡಾ.ಪುನೀತ್‌ ರಾಜ್‌ಕುಮಾರ್​ಗೆ ಬಸವಶ್ರೀ ಪ್ರಶಸ್ತಿ: ಮುರುಘಾ ಶರಣರಿಂದ ಪ್ರಶಸ್ತಿ ಸ್ವೀಕರಿಸಿದ ಅಶ್ವಿನಿ

ರಾಕಿ ಭಾಯ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ 3ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಭಾರತದಲ್ಲಿಯೇ 900 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಜಾಗತಿಕವಾಗಿ 1,000 ಕೋಟಿ ಗಳಿಕೆ ದಾಟಿ ದಾಖಲೆ ಬರೆದಿದೆ.

ತೆಲುಗಿನ ಆರ್ ಆರ್ ಆರ್ ಸಿನಿಮಾ ಭಾರತದ ಬಾಕ್ಸಾಫೀಸ್ ನಲ್ಲಿ 900 ಕೋಟಿ ರೂಪಾಯಿ ಗಳಿಸಿದ್ದು, ಜಾಗತಿಕವಾಗಿ 1,120 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಈ ಹಿನ್ನೆಲೆಯಲ್ಲಿ ಜಾಗತಿಕವಾಗಿ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರರಂಗದ ಹತ್ತು ಸಿನಿಮಾಗಳ ವಿವರ ಇಲ್ಲಿದೆ.

ಎನ್‌ಇಪಿ ನೀತಿಯನ್ನು ಸ್ವೀಕರಿಸಿದ ಮೊದಲ ರಾಜ್ಯ ಕರ್ನಾಟಕ – ಕೇಂದ್ರ ಗೃಹ ಸಚಿವ ಅಮಿತ್ ಶಾ

1)ದಂಗಲ್ 2,024 ಕೋಟಿ ರೂಪಾಯಿ

2) ಬಾಹುಬಲಿ 2 (ಎಲ್ಲಾ ಭಾಷೆ ಸೇರಿ) 1810 ಕೋಟಿ ರೂಪಾಯಿ

3)ಆರ್ ಆರ್ ಆರ್ (ಎಲ್ಲಾ ಭಾಷೆ ಸೇರಿ) 1,120 ಕೋಟಿ

4) ಕೆಜಿಎಫ್ ಚಾಪ್ಟರ್ 2 (ಎಲ್ಲಾ ಭಾಷೆ ಸೇರಿ) 1,032 ಕೋಟಿ

5) ಬಜರಂಗಿ ಭಾಯಿಜಾನ್ 910 ಕೋಟಿ ರೂಪಾಯಿ

6) ಸೀಕ್ರೆಟ್ ಸೂಪರ್ ಸ್ಟಾರ್ 858 ಕೋಟಿ

7) ಪಿಕೆ- 743 ಕೋಟಿ

8) 2.0- 648 ಕೋಟಿ ರೂಪಾಯಿ

9) ಸಂಜು 585 ಕೋಟಿ ರೂಪಾಯಿ

10) ಸುಲ್ತಾನ್ 584 ಕೋಟಿ ರೂಪಾಯಿ

PSI ಎಕ್ಸಾಂಗೂ ಮೊದಲೇ ಆಯ್ಕೆ ಪಟ್ಟಿ ಸಿದ್ಧವಾಗಿತ್ತು! ಈ ಬಾರಿ ಕೆಲಸ ಆಗದವರಿಗೆ ಮುಂದಿನ ಬ್ಯಾಚ್​ನಲ್ಲಿ ನೌಕರಿ

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link