ಕುಣಿಗಲ್ :
ಕೃಷಿಕ ಇಲ್ಲದಿದ್ದರೆ ಜಗತ್ತೇ ಬದುಕುವುದಿಲ್ಲ. ರೈತ ಸಮುದಾಯಕ್ಕೆ ನೂರೆಂಟು ಸಮಸ್ಯೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನ. ಪ್ರತಿಯೊಬ್ಬ ರೈತರೂ ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳಿ ಹಲವು ಉತ್ತಮ ಯೋಜನೆಗಳೊಂದಿಗೆ ಸರ್ಕಾರ ಸದಾ ನಿಮ್ಮ ಜೊತೆಗಿರುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರಿಗೆ ಕರೆ ನೀಡಿದರು.
ಶನಿವಾರ ಸಂಜೆ ಪಟ್ಟಣದಲ್ಲಿ ಹಾಗೂ ಅಮೃತೂರಿನಲ್ಲಿ ನಿರ್ಮಿಸಿರುವ ನೂತನ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿ, ಇಂದು ರೈತಾಪಿ ವರ್ಗ ಕಷ್ಟದಲ್ಲಿದೆ ಅಲ್ಲದೇ ಈ ಇಲಾಖೆಯೇ ಮುಳ್ಳಿನ ಹಾಸಿಗೆ ಇದ್ದಂತೆ, ಹೀಗಿದ್ದರೂ ನಾನು ಅರಣ್ಯ ಇಲಾಖೆ ಬಿಟ್ಟು ಕೃಷಿ ಸಚಿವನಾದೆ. ನಾನೊಬ್ಬ ರೈತನ ಮಗ ಆದಷ್ಟು ರೈತರ ಸಮಸ್ಯೆ ಪರಿಹರಿಸುವ ಗುರಿಯೊಂದಿದ್ದು ರೈತರೊಂದಿಗೆ ಒಂದುದಿನ ಎಂಬ ಕಾರ್ಯಕ್ರಮದೊಂದಿಗೆ ಸಮಸ್ಯೆ ತಿಳಿದು ರೈತ ಸಮುದಾಯಕ್ಕೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ರೈತರ ಬದುಕನ್ನು ಉತ್ತಮ ಪಡಿಸುವ ಗುರಿಯನ್ನು ನಾನು ವೈಯಕ್ತಿಕ ಹಾಗೂ ಸರ್ಕಾರ ಯೋಜನೆಯೂ ಆಗಿದೆ ಎಂದರು.
ಆತ್ಮಹತ್ಯೆ ಮಾಡಿಕೊಳ್ಳುವ ರೈತಾಪಿ ವರ್ಗದ ಬಗ್ಗೆ ತಜ್ಞರೊಂದಿಗೆ ಮಾಹಿತಿ ತಿಳಿದಾಗ ನೀರಾವರಿ ಪ್ರದೇಶ ಮಂಡ್ಯ ಭಾಗದಲ್ಲಿ ಹೆಚ್ಚು ಆತ್ಮಹತ್ಯೆ ಆದರೆ ಬರ ಪ್ರದೇಶ ಕೋಲಾರದಲ್ಲಿ ಕಡಿಮೆ ಆತ್ಮಹತ್ಯೆ ಅದಕ್ಕಾಗಿ ರೈತರು ಸಂಪೂರ್ಣವಾಗಿ ಸಮಗ್ರ ಬೆಳೆಯನ್ನು ಬೆಳೆಯಿರಿವ ಬರೀ ಭತ್ತ ಕಬ್ಬು ಬೆಳೆದರೆ ಸಮಸ್ಯೆ ಹೆಚ್ಚು ಎಂದು ಮಂಡ್ಯ ಮತ್ತು ಕೋಲಾರದ ರೈತರನ್ನು ಉದಾಹರಣೆ ನೀಡಿದರು.
ತುಮಕೂರು ಜಿಲ್ಲೆಗೆ ಯಂತ್ರಧಾರೆ ಯೋಜನೆಗೆ 4.60 ಕೋಟಿ ನೀಡಿದ್ದು ಮುಂದಿನ ದಿನದಲ್ಲಿ ಇನ್ನೂ 2ಕೋಟಿ ಹಣ ಮಂಜೂರು ಮಾಡುವುದಾಗಿ ತಿಳಿಸಿದರು.
ರೈತರು ಹೆಚ್ಚು ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ಉತ್ತಮ ಆರೋಗ್ಯವಂತರಾಗುವುದರ ಜೊತೆಗೆ ಹೊಸ ಕೃಷಿ ನೀತಿಗಳನ್ನು ಅನುಸರಿಸಿಕೊಂಡು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಮನವಿ ಮಾಡಿದ ಚಿಬ ಬಿಸಿ.ಪಾಟೀಲ್, ಸದಾ ಉತ್ತಮ ಅಭಿವೃದ್ಧಿ ಚಿಂತನೆಯೊಂದಿಗೆ ರೈತರು ಸರ್ಕಾರದ ಸೌಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಹೇಳಿದರು.
ಸಂಸದ ಡಿ.ಕೆ ಸುರೇಶ್ ಮಾತನಾಡಿ, ಕೋವಿಡ್ ಸಮಯದಲ್ಲಿಯೂ ಬಿ.ಸಿ.ಪಾಟೀಲರು ಉತ್ತಮ ಕೆಲಸ ಮಾಡುವ ಮೂಲಕ ಕೃಷಿ ಕ್ಷೇತ್ರದಲ್ಲಿ ರೈತರು ಇಂದು ಶೇ.15ರಷ್ಟು ಹೆಚ್ಚು ಆರ್ಥಿಕ ಪ್ರಗತಿ ಸಾಧಿಸಿದೆ, ಇಲಾಖಾ ಅಧಿಕಾರಿಗಳನ್ನು ಕೆಲಸಕ್ಕೆ ಹಾಜರಾಗುವಂತೆ ತಾಕೀತು ಮಾಡಿ ರೈತರ ಕೆಲಸ ಮಾಡಿಸಿದ್ದಾರೆ ಎಂದು ಹೇಲಿದರು.
ರೈತರ ಸಮಸ್ಯೆಗಳು ಅಪಾರ, ಉತ್ತಮ ಬೆಳೆ ಬೆಳೆದರೂ ಮಧ್ಯವರ್ತಿಗಳ ಉಪಟಳದಿಂದ ರೈತರಿಗೆ ಅನ್ಯಾಯವಾಗುತ್ತಲೇ ಇದೆ. ಎಲ್ಲ ಹಂತದಲ್ಲಿಯೂ ತಪ್ಪಿಸಿ ರೈತರಿಗೆ ನ್ಯಾಯಸಿಗಬೇಕು, ಹಿಂದಿನ ಹಳೆಯ ಬೆಂಬಲ ಬೆಲೆಯಡಿ ರಾಗಿ ಕೊಂಡರೂ ಆ ಹಣ ಇನ್ನೂ ರೈತರ ಕೈ ತಲುಪಿಲ್ಲ, ಅಲ್ಲದೇ ರೈತರೆಲ್ಲರೂ ಆರ್‍ಟಿಸಿ ಕೊಡಬೇಕೆಂದರೆ ಸಾಧ್ಯವಿಲ್ಲ, ಎಷ್ಟೋ ರೈತರ ಹೆಸರಿಗೆ ಇನ್ನೂ ಜಮೀನುಗಳು ಆಗಿಲ್ಲ ಆದ್ದರಿಂದ ರಾಗಿ ಬೆಳೆದ ಎಲ್ಲ ರೈತರಿಂದಲೂ ಕೊಳ್ಳುವ ಕೆಲಸ ಆಗಬೇಕು. ಈ ಬಾರಿ ಬೇಗ ಬೆಂಬಲ ಬೆಲೆ ಘೋಷಿಸಿ ಕೂಡಲೇ ಖರೀದಿ ಕೇಂದ್ರಗಳನ್ನು ಸ್ಥಾಪಿಸುವಂತೆ ಮನವಿ ಮಾಡಿದರು.
ಶಾಸಕ ಡಾ. ರಂಗನಾಥ್ ಮಾತನಾಡಿ, ಹಿಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದ ಉತ್ತಮ ಯೋಜನೆಯಾದ ಕೃಷಿಭಾಗ್ಯ ಯೋಜನೆಯಡಿ ಸಾವಿರಾರು ರೈತರಿಗೆ ಹಲವು ಉಪಕರಣಗಳನ್ನು ನೀಡಲಾಗುತ್ತಿತ್ತು. ಅದರಿಂದ ರೈತರಿಗೆ ಬಹಳ ಉಪಯೋಗದೊರೆಯುತ್ತಿತ್ತು. ಆದರೆ ಅದು ನಿಂತಿದೆ ಸಚಿವರು ಮುಂದುವರೆಸುವಂತೆ ಮನವಿ ಮಾಡಿದರು. ಅಲ್ಲದೆ ತಾಲ್ಲೂಕಿಗೆ ಬರಬೇಕಾದ ಹೇಮಾವತಿ ನೀರು ಸಮರ್ಪಕವಾಗಿ ಹರಿದರೆ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಹಿಂದಿನ ಸರ್ಕಾರದಲ್ಲಿ ಹೇಮಾವತಿ ಲಿಂಕ್ ಕೆನಾಲ್‍ಗೆ ಮಂಜೂರಾದ ಹಣವನ್ನು ಬಿಡುಗಡೆ ಮಾಡಿಸುವಂತೆಯೂ ಸೇರಿದಂತೆ ರೈತ ಸಂಪರ್ಕ ಕೇಂದ್ರ ಹಾಗೂ ಹಿಂದೆ ಶ್ರೀ ಧರ್ಮಸ್ಥಳ ಸಂಘದವರು ನಡೆಸುತ್ತಿದ್ದ ಯಂತ್ರಧಾರೆ ಯೋಜನೆಯನ್ನು ಮುಂದುವರೆಸುವಂತೆ ಹಾಗೂ ಇನ್ನಿತರೆ ಅಭಿವೃದ್ದಿ ಕೆಲಸಗಳನ್ನು ಮಾಡಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಮಕೂರು ಜಂಟಿ ಕೃಷಿ ನಿರ್ದೇೀಶಕಿ ರಾಜಸುಲೋಚನ, ತಹಸೀಲ್ದಾರ್ ವಿಶ್ವನಾಥ್, ಸಿ.ಪಿ.ಐ. ಗುರುಪ್ರಸಾದ್, ಪುರಸಭಾ ಅಧ್ಯಕ್ಷ ನಾಗೇಂದ್ರಕುಮಾರ್, ಉಪಾಧ್ಯಕ್ಷೆ ಮಂಜುಳಾರಂಗಪ್ಪ, ರೈತ ಸಂಘಟನೆಗಳ ಅಧ್ಯಕ್ಷರಾದ ಶ್ರೀ ಚಿಕ್ಕಣ್ಣಸ್ವಾಮಿ ಕ್ಷೇತ್ರದ ಪಾಪಣ್ಣ, ಅನುಸೂಯಮ್ಮ, ಆನಂದ್ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
