ಫೆಂಟಾಸ್ಟಿಕ್ ತ್ರೀ ಡೈಸ್ ಗೇಮ್ ಆಡುತ್ತಿದ್ದವರ ಬಂಧನ

0
26

ಬೆಂಗಳೂರು

      ರೆಸ್‍ಕೋರ್ಸ್ ರಸ್ತೆಯ ಸ್ವಿಸ್ ಕಾಂಪ್ಲೆಕ್ಸ್‍ನ ನೆಲಮಹಡಿಯಲ್ಲಿ ಫೆಂಟಾಸ್ಟಿಕ್ ತ್ರೀ ಡೈಸ್ ಗೇಮ್ ಜೂಜಾಟವಾಡುತ್ತಿದ್ದ ಐವರು ಜೂಜಾಟ ನಡೆಸುತ್ತಿದ್ದ ಮೂವರು ಸೇರಿ 8 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಪಾಪರೆಡ್ಡಿ ಪಾಳ್ಯದ ರಾಜೇಶ್ (31), ಅವಿನ್ಯೂ ರಸ್ತೆಯ ಕಲ್ಪೇಶ್ (25),ಜೋಧ್‍ಪುರ ಸ್ಟ್ರೀಟ್‍ನ ಗೌತಮ್ (25), ವಾಲ್ಮೀಕಿ ನಗರದ ದೀಪಕ್ (26), ಶೇಷಾದ್ರಿಪುರಂನ ಹರೀಶ್ (38) ಎಂಬ ಜೂಜಾಡುತ್ತಿದ್ದವರನ್ನು ಬಂಧಿಸಲಾಗಿದೆ.

     ಜೂಜಾಟದ ಅಡ್ಡೆ ನಡೆಸುತ್ತಿದ್ದ ಸಂಜಯ್ ನಗರದ ರಮೇಶ್ (42), ಗಂಗಾನಗರದ ಪ್ರಸಾದ್ (32) ಹಾಗೂ ಸುನಿಲ್ ಕುಮಾರ್‍ನನ್ನು ಬಂಧಿಸಿ 82,350 ರೂ.ಗಳ ನಗದನ್ನು ವಶಪಡಿಸಿಕೊಂಡು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗಾಂಜಾ ಆರೋಪಿ ಸೆರೆ

    ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೆÇಲೀಸರು 1 ಕೆಜಿ ಗಾಂಜಾ ಹಾಗೂ ಟಾಟಾ ಇಂಡಿಕಾ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಗಾಂಜಾ ಮಾರಾಟ ಮಾಡುತ್ತಿದ್ದ ನಲ್ಲೂರಳ್ಳಿಯ ಸೋಮಣ್ಣ ಅಲಿಯಾಸ್ ಸೋಮ ಬಂಧಿಸಲಾಗಿದೆ. ಆರೋಪಿಯು ನಲ್ಲೂರಳ್ಳಿಯ ಸಿದ್ದಾಪುರದ ಬಳಿ ಟಾಟಾ ಇಂಡಿಕಾ ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಗಿರಾಕಿಯೊಬ್ಬ ನೀಡಿದ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ

   ಬಂಧಿತನಿಂದ 1 ಕೆಜಿ ಗಾಂಜಾ, ಮೊಬೈಲ್, ಟಾಟಾ ಇಂಡಿಕಾ ಕಾರು ಸೇರಿ 3 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ವೈಟ್‍ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here