ದಾವಣಗೆರೆ:
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಸುಮಾರು 7.05 ಕೋಟಿ ರೂ ವೆಚ್ಚದಲ್ಲಿ ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿಗೆ ಭಾನುವಾರ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.
ನಗರದ ದುರ್ಗಾಂಬಿಕಾ ದೇವಸ್ಥಾನದ ಬಳಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಭಾರೀ ಮಳೆ ಬಂದ ವೇಳೆ ಚರಂಡಿಗಳಿಲ್ಲದೇ ಮನೆಗಳಿಗೆ ನೀರು ನುಗ್ಗುತ್ತಿರುವುದನ್ನು ಮನಗಂಡು ದೇವಸ್ಥಾನ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 7.05 ಕೋಟಿ ರೂ ವೆಚ್ಚದಲ್ಲಿ ಮಳೆ ನೀರು ಚರಂಡಿಗಳನ್ನು ನಿರ್ಮಾಣ ಮಾಡಲು ಸ್ಮಾರ್ಟ್‍ಸಿಟಿ ಯೋಜನೆಯಡಿ 8-10 ತಿಂಗಳ ಹಿಂದೆಯೇ ಒಪ್ಪಿಗೆ ನೀಡಿದ್ದು, ಟೆಂಡರ್ ಮುಗಿದು ಇದೀಗ ಕಾಮಗಾರಿ ಆರಂಭಗೊಂಡಿವೆ ಎಂದರು.
ಗುತ್ತಿಗೆದಾರರು ಇನ್ನೂ 6 ತಿಂಗಳ ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು.
ಕಾರ್ಯಕ್ರಮದಲ್ಲಿ ಉಪ ಮೇಯರ್ ಕೆ.ಚಮನ್ ಸಾಬ್, ಸದಸ್ಯ ಹೆಚ್.ಬಿ.ಗೋಣೆಪ್ಪ, ಡೂಡಾ ಮಾಜಿ ಅಧ್ಯಕ್ಷ ಮಾಲತೇಶ್ ಪೈಲ್ವಾನ್, ಕಾರ್ಯಪಾಲಕ ಅಭಿಯಂತರರಾದ ಗುರುಪಾದಯ್ಯ, ಚಂದ್ರಶೇಖರ್, ಹೈಡೆಕ್ ಸಂಸ್ಥೆಯ ಶ್ರೀನಾಥ್ ರೆಡ್ಡಿ, ಚಂದ್ರಶೇಖರ್, ದೇವಸ್ಥಾನ ಸಮಿತಿಯ ಶಿಂಧೆ ಬಾಬುರಾವ್, ಜೆ.ಕೆ.ಕೊಟ್ರಬಸಪ್ಪ, ಪಿಸಾಳೆ ಸತ್ಯನಾರಾಯಣ, ಹನುಮಂತರಾವ್ ಸಾವಂತ್, ಗೌಡ್ರು ಚನ್ನಬಸಪ್ಪ, ಬಿ.ಹೆಚ್.ವೀರಭದ್ರಪ್ಪ, ಉಮೇಶ್ ಸಾಳಂಕಿ, ಬಿ.ಕೆ.ರಾಮಕೃಷ್ಣ, ಸೊಪ್ಪಿನ ಗುರುರಾಜ್, ಹನುಮಂತರಾವ್ ಜಾಧವ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
