ನವ ವಿವಾಹಿತೆ ಸಾವಿನ ಸುತ್ತ ಅನುಮಾನದ ಹುತ್ತ

ಬೆಂಗಳೂರು

          ಪೋಷಕರ ವಿರೋಧವನ್ನು ಲೆಕ್ಕಿಸದೇ ಅಂತರ್ಜಾತಿಯ ವಿವಾಹವಾಗಿದ್ದ ನವ ವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಟರಾಯನಪುರದಲ್ಲಿ ನಡೆದಿದೆ.

          ಬಾಗೇಪಲ್ಲಿ ಮೂಲದ ರೋಜ(18)ಎಂದು ಆತ್ಮಹತ್ಯೆಗೆ ಶರಣಾದವರನ್ನು ಗುರುತಿಸಲಾಗಿದೆ.ಪತಿ ಬಾಬಾಜಾನ್ ಜೊತೆ ಬ್ಯಾಟರಾಯನಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ರೋಜಾ ಬುಧವಾರ ರಾತ್ರಿ 9ರ ವೇಳೆ ಪತಿ ಕೆಲಸಕ್ಕೆ ಹೋಗಿದ್ದಾಗ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಕೊಡಿಗೇಹಳ್ಳಿ ಪೆÇಲೀಸರು ಪ್ರಕರಣ ದಾಖಲಿಸಿ ಬಾಬಾಜಾನ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

4 ತಿಂಗಳ ಹಿಂದೆ ವಿವಾಹ

         ತಂದೆಯಿಲ್ಲದ ಮಗಳೆಂದು ಪ್ರೀತಿಯಿಂದ ಸಾಕಿದ ತಾಯಿ,ಕೂಲಿ ಮಾಡಿ ಮಗಳಿಗೆ ವಿದ್ಯಾಭ್ಯಾಸ ಕೊಡಿಸಿದ್ದರು ಅದರಂತೆ ಯುವತಿ ಪಿಯುಸಿ ಮುಗಿಸಿ ಡಿಗ್ರಿಗೆ ಬಾಗೇಪಲ್ಲಿಯ ಬಳಿಯ ಖಾಸಗಿ ಕಾಲೇಜಿಗೆ ಸೇರಿದಳು.

          ಕಾಲೇಜಿಗೆ ಹೋಗುವಾಗ ಪರಿಚಯವಾದ ಬಾಬಾಜಾನ್‍ನನ್ನು ಪ್ರೀತಿಸಿ ಅಂತರ್ಜಾತಿಯ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸದರೂ ಅದನ್ನು ಲೆಕ್ಕಿಸದೇ ವಿವಾಹ ಮಾಡಿಕೊಂಡು ಕೊಡಿಗೇಹಳ್ಳಿಯ ಬ್ಯಾಟರಾಯನಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

          ಬಾಬಾಜಾನ್ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ ರೋಜ ಮನೆಯಲ್ಲೇ ಇರುತ್ತಿದ್ದಳು ನಿನ್ನೆ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ತನ್ನ ಪತಿಯ ಗೆಳೆಯನಾದ ಶ್ರೀನಿವಾಸ್‍ನಿಗೆ ಕೋಳಿಮಾಂಸ ತರಲು ತಿಳಿಸಿದ್ದಾಳೆ. ಪತಿ ಕೆಲಸ ಮುಗಿಸಿ ಬರುವ ಮುನ್ನ ಅಡುಗೆ ಮಾಡಬೇಕು ಎಂದು ಹೇಳಿದ್ದಾಳೆ.

ನೇಣಿಗೆ ಶರಣು

         ಇನ್ನು ಕೋಳಿಮಾಂಸ ತೆಗೆದುಕೊಂಡು ಬಂದ ಶ್ರೀನಿವಾಸ್‍ಗೆ ಬಾಗಿಲು ಒಳಗಡೆಯಿಂದ ಲಾಕ್ ಆಗಿದ್ದು ಎಷ್ಷು ಬಾರಿ ಬಡಿದರೂ ತೆಗೆದಿಲ್ಲ ಆತಂಕಗೊಂಡು ಹಿಂದಿನ ಬಾಗಿಲಿನಿಂದ ಒಳಗೆ ನೋಡಿದಾಗ ಆಕೆಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

       ಬಾಬಾ ಜಾನ್ ರೋಜಳನ್ನ ಬಲವಂತವಾಗಿ ಬ್ಲಾಕ್‍ಮೇಲ್ ಮಾಡಿ ಕರೆದುಕೊಂಡು ಬಂದಿದ್ದಾನೆ.ಇದು ಆತ್ಮಹತ್ಯೆಯಲ್ಲ ಕೊಲೆ. ಅಲ್ಲದೆ, ಆಕೆ ಚೆನ್ನಾಗಿ ಓದುವ ಆಸೆ ಕಂಡಿದ್ದಳು. ಆದರೆ ಅದ್ಯಾವುದಕ್ಕೂ ಆಸ್ಪದ ನೀಡದೆ ಮಗಳಿಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ.ಪತ್ನಿಯ ಮೇಲೆ ಬಾಬಾಜಾನ್ ಅನುಮಾನ ಪಡುತ್ತಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link