ಬೆಂಗಳೂರು
ಪ್ರಧಾನ ಮಂತ್ರಿ ಮೋದಿಯವರು ಅಯೋಧ್ಯೆಯಲ್ಲಿ ಇಂದು ನಡೆದ ರಾಮ ಮಂದಿರ ಅಡಿಪಾಯ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರು ಡಾ. ಎಸ್. ಕ್ಯೂ. ಆರ್. ಇಲಿಯಾಸ್ ಖಂಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪ್ರಧಾನ ಮಂತ್ರಿಯ ಶ್ರೇಷ್ಠತೆಗೆ ಯೋಗ್ಯವಲ್ಲ. ಭಾರತ ಜಾತ್ಯತೀತ ದೇಶವಾಗಿದ್ದು, ಭಾರತೀಯ ಸಂವಿಧಾನವು ಭಾರತದ ಎಲ್ಲಾ ನಾಗರಿಕರಿಗೆ ತಮ್ಮ ಧರ್ಮದ ಪ್ರಚಾರ ಮತ್ತು ಆಚರಿಸುವ ಸ್ವಾತಂತ್ರ್ಯ ಕೊಡುತ್ತದೆ. ಆದರೆ, ರಾಜ್ಯಕ್ಕೆ ಯಾವುದೇ ಧರ್ಮವಿರುವುದಿಲ್ಲ. ಇಂತಹ ದೇಶದ ಪ್ರಧಾನಿಯಾದವರು ಎಲ್ಲಾ ಧರ್ಮಗಳಿಗೆ ತಟಸ್ಥರಾಗಿ ಗೌರವಿಸಬೇಕೆಂದು ಡಾ. ಇಲಿಯಾಸ್ ಹೇಳಿದರು.
ಬಿಜೆಪಿಯು ಜನರ ಭಾವನೆಗಳನ್ನು ಉತ್ತೇಜಿಸಲು ಧರ್ಮವನ್ನು ಬಳಸುತ್ತಿದೆ ಹಾಗೂ ಪರಸ್ಪರ ದ್ವೇಷ ಉಂಟುಮಾಡಿ ಚುನಾವಣಾ ಲಾಭ ಪಡೆಯುತ್ತಿದೆ. ಮೋದಿಯವರ ಆಳ್ವಿಕೆಯಲ್ಲಿ ಜಾತ್ಯತೀತ ಭಾರತದ ಶ್ರೇಷ್ಠ ಸಂಪ್ರದಾಯಗಳನ್ನು ಅಯೋಧ್ಯೆಯಲ್ಲಿ ನೆಲಸಮ ಮಾಡಲಾಗಿದ್ದು ಮತ್ತು ಹೊಸ ಗಣರಾಜ್ಯದ ಅಡಿಪಾಯ ಹಾಕಲಾಗಿರುವುದು ಅತ್ಯಂತ ದುರ್ಭಾಗ್ಯದ ಸಂಗತಿಯಾಗಿದೆ. ಬಿಜೆಪಿಯು ಗಣರಾಜ್ಯವನ್ನು ನೆಲಸಮ ಮಾಡುವುದರಲ್ಲಿ ತಪ್ಪಿತಸ್ಥವಾದರೆ ಉಳಿದ ರಾಜಕೀಯ ಪಕ್ಷಗಳು ಶೋಚನೀಯವಾಗಿ ಮೂಕ ಪ್ರೇಕ್ಷಕರಾಗಿ ಕುಳಿತಿವೆ ಎಂದು ಇಲಿಯಾಸ್ ಆರೋಪಿಸಿದರು.ದೇಶವು ಕೊವಿಡ್ ಸಂಕ್ರಮಣದ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಪ್ರಧಾನ ಮಂತ್ರಿಯವರ ಭೇಟಿಯು ಸ್ಪಷ್ಟ ತಪ್ಪು. ಅಯೋಧ್ಯೆಯಲ್ಲಿರುವ ಜನರ ಪ್ರಾಣಕ್ಕೆ ಅಪಾಯವನ್ನು ಉಂಟುಮಾಡಿ ಕೆಟ್ಟ ಉದಾಹರಣೆ ಇಡುತ್ತಿದ್ದಾರೆ ಎಂದು ಇಲಿಯಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








