ಹಾವೇರಿ :
ಗ್ರಾಮೀಣ ಸೊಗಡಿನಲ್ಲಿ ಮೂಲ ಜನಪದ ವಿಜ್ಞಾನದಲ್ಲಿ ಹಾಸು ಹೊಕ್ಕಾಗಿದೆ. ವಿವಿಧ ಭಾಷೆಗಳ ಶೈಲಿಯಲ್ಲಿ ಜನರ ಮನೆಗಳು ಬೆರೆತುಕೊಂಡಿವೆ, ಭಾಷೆಗಳ ಪ್ರಭುದ್ಧತೆಯೊಂದಿಗೆ ವಿಜ್ಞಾನದ ಜ್ಞಾನವನ್ನು ಜನಪದ ಮಾಧ್ಯಮದ ಮೂಲಕ ಜಗತ್ತಿಗೆ ಪ್ರಸ್ತಾಪಿಸಬಹುದು ಎಂದು ಜಾನಪದ ಪರಿಷತ್ತಿನ ಸದಸ್ಯ ಜನಪದ ವಿದ್ವಾಂಸ ಪ್ರೊ.ಶ್ರೀಶೈಲ್ ಹುದ್ದಾರ ಹೇಳಿದರು.
ಇಲ್ಲಿನ ಟಿ.ಎಮ್.ಎ.ಇ.ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲದಲ್ಲಿ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಷ್ರ್ಟೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ಮತ್ತು ಬೆಳಗಾವಿಯ ವಿಕಾಸನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಎರಡು ದಿನಗಳ ಜನಪದ ಮಾಧ್ಯಮದ ಮೂಲಕ ವಿಜ್ಞಾನ ಸಂವಹನ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ವಿಜ್ಞಾನ ವಿಷಯ ಪರಿವೀಕ್ಷಕ ಡಾ.ಲಿಂಗರಾಜ ರಾಮಾಪುರ ಮಾತನಾಡಿ, ಜನಪದ ಮಾಧ್ಯಮವು ಒಂದು ಪ್ರಬಲ ಸಂವಹನ ಅಸ್ತ್ರವಾಗಿದ್ದು, ಗ್ರಾಮೀಣ ಪ್ರದೇಶದ ಅನಕ್ಷರಸ್ಥ ಜನರಿಗೂ ಜನಪದಗಳ ಮೂಲಕ ವಿಜ್ಞಾನವನ್ನು ಪರಿಚಯಿಸುವುದರಿಂದ ಅದರಲ್ಲಿಯೂ ಸಹ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ಸಹಾಕಾರಿಯಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವಿ.ಎಮ್.ಬಸವನಗೌಡ್ರ ಮಾತನಾಡಿ, ಕಥೆಗಳ ಮೂಲಕ ಜೀವನದ ಸಾಕ್ಷತ್ಕಾರದ ಬಗ್ಗೆ ತಿಳಿಸಿದರು ಹಾಗೂ ಜನಪದ ವಿಜ್ಞಾನ ಜೊತೆಗೂಡಿಸಿ ಭಾರತೀಯ ಸಂಸ್ಕತಿ ಉಳಿಸಬೇಕೆಂದು ಹೇಳಿದರು . ಬೆಳಗಾವಿ ವಿಕಾಸನ ಕೇಂದ್ರದ ಅಧ್ಯಕ್ಷ ಸಂಜಯ್ ಮುಗದುಮ್, ಪ್ರೊ.ಐ.ಆರ್.ಹರವಿ, ಹರೋನಹಳ್ಳಿಸ್ವಾಮಿ, ವಿರೇಶ ಹಿತ್ತಲಮನಿ ಉಪಸ್ಥಿತರಿದ್ದರು.