ಬೆಂಗಳೂರು
ಬಿಹೆಚ್‍ಇಎಲ್ ಉದ್ಯೋಗಿ ಅನುಶಾ ಅವರನ್ನು ಉಸಿರುಗಟ್ಟಿಸಿ ಕೊಲೆಗೈದ ಕೃತ್ಯದ ಸಂಬಂಧ ಇಬ್ಬರನ್ನು ಬಂಧಿಸುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಂಗೇರಿಯ ಸನ್‍ಸಿಟಿ ಬಳಿಯ ಮನೆಯೊಂದರಲ್ಲಿ ಕಳೆದ ಶನಿವಾರ ಅನುಶಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು.ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ
ಕಳೆದ ವರ್ಷವಷ್ಟೇ ಅನುಶಾ ಅವರು ಸನತ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿ ಕೆಂಗೇರಿಯ ಸನ್‍ಸಿಟಿ ಬಳಿಯ ಮನೆಯೊಂದರಲ್ಲಿ ವಾಸವಾಗಿದ್ದರು,ಕಳೆದ ಫೆ.16ರಂದು ಬೆಳಿಗ್ಗೆ ಅನುಶಾಗೆ ಪೋಷಕರು ಮೊಬೈಲ್ ಕರೆ ಮಾಡಿದ್ದಾರೆ ಎಂದಿನಂತೆ ಕೆಲಸಕ್ಕೆ ಹೋಗಿರಬಹುದು ಕಚೇರಿಯಲ್ಲಿ ಕೆಲಸ ಇರಬಹುದು ಅದರಿಂದ ಮೊಬೈಲ್ ಕರೆ ಸ್ವೀಕರಿಸಿಲ್ಲ ಎಂದು ಸುಮ್ಮನಾಗಿದ್ದ ಫೋಷಕರು ಕೆಲೆ ಕಾಲ ಸುಮ್ಮನಿದ್ದು ಮತ್ತೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.
ಎಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸದಿದ್ದರಿಂದ ಆತಂಕಗೊಂಡ ಪೋಷಕರು ಪತಿ ಸನತ್‍ಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಸನತ್ ಮನೆಗೆ ಹೋಗಿ ನೋಡಿದಾಗ ಬೀಗ ಹಾಕಿದ್ದು ಬೀಗ ಮುರಿದು ನೋಡಿದಾಗ ನೆಲದಲ್ಲಿ ಅನುಶಾ ಶವವಾಗಿ ಬಿದ್ದಿದ್ದರು. ಗಾಬರಿಗೊಂಡ ಸನತ್, ಅನುಶಾ ಪೋಷಕರಿಗೆ ವಿಷಯ ತಿಳಿಸಿದ್ದಾನೆ.
ಬಿಡದಿಯಲ್ಲಿ ಅನುಶಾ ಹೆಸರಿಗೆ ಸೇರಿದ ಆಸ್ತಿಯೊಂದಿತ್ತು. ಆ ವಿಚಾರಕ್ಕೆ ಅನುಶಾ ಅಕ್ಕ ಹಾಗೂ ಭಾವ ವಿವೇಕ್ ಪ್ರಕಾಶ್ ಆಗಾಗ ಜಗಳವಾಡುತ್ತಿದ್ದರು. ಆ ಹಿನ್ನೆಲೆ ಭಾವ ವಿವೇಕ್ ಅನುಶಾಳನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿತ್ತು.ಈ ಸಂಬಂಧ ಇಬ್ಬರನ್ನು ಬಂಧಿಸಿರುವ ಕೆಂಗೇರಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
